ಯಾವುದೇ ಗಡಿಯಾರದ ಅಂಗಡಿಗೆ ಹೋಗಿ ಹೊಸ ಗಡಿಯಾರದ, ಗೋಡೆ ಗಡಿಯಾರಗಳನ್ನು ಗಮನಿಸಿ. ಎಲ್ಲಾ ಗಡಿಯಾರಗಳು 10.10 ರ ಸಮಯಕ್ಕೆ ನಿಂತು ಹೋಗಿರುತ್ತವೆ. ಯಾಕೆ ಗೊತ್ತಾ?

ಲಂಡನ್ (ಆ.07): ಯಾವುದೇ ಗಡಿಯಾರದ ಅಂಗಡಿಗೆ ಹೋಗಿ ಹೊಸ ಗಡಿಯಾರದ, ಗೋಡೆ ಗಡಿಯಾರಗಳನ್ನು ಗಮನಿಸಿ. ಎಲ್ಲಾ ಗಡಿಯಾರಗಳು 10.10 ರ ಸಮಯಕ್ಕೆ ನಿಂತು ಹೋಗಿರುತ್ತವೆ. ಯಾಕೆ ಗೊತ್ತಾ?

Add Asianetnews Kannada as a Preferred SourcegooglePreferred

ಅಂಗಡಿಯವರನ್ನೇ ಕೇಳಿದರೂ ಉತ್ತರ ಸಿಗುವುದಿಲ್ಲ. ಗಡಿಯಾರವನ್ನು ಕಂಡುಹಿಡಿದ ಕಂಪನಿಯ ಲಾಂಛನ 10.10. ಅದಕ್ಕೆ ಅದೇ ಸಮಯವನ್ನು ನಿಲ್ಲಿಸಲಾಗುತ್ತದೆ ಎಂಬುದರಿಂದ ಹಿಡಿದು ಅಮೇರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರು ಗುಂಡಿನ ದಾಳಿಗೆ ಬಲಿಯಾದ ಸಮಯದ ದ್ಯೋತಕವಾಗಿ ಹೊಸ ಗಡಿಯಾರಕ್ಕೆ 10.10 ರ ಸಮಯವನ್ನು ನಿಗದಿಗೊಳಿಸಲಾಗಿರುತ್ತದೆ. ಆದರೆ ಜರ್ಮನಿಯ ಟ್ಯೂಬಿಂಜೆನ್ ವಿಶ್ವವಿದ್ಯಾಲಯದ ಪ್ರಕಾರ ಉತ್ತರ ಅದಲ್ಲ. ಗಡಿಯಾರದ ಸಮಯ 10.10 ಎಂದು ತೋರಿಸುತ್ತಿದ್ದರೆ ಅದೊಂದು ರೀತಿ ಮಂದಹಾಸದ ಮುಖದಂತಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಗಡಿಯಾರದ ವಿವಿಧ ಸಮಯಗಳನ್ನು ನಿಲ್ಲಿಸಿ 46 ಮಂದಿಯ ಸಂದರ್ಶನವನ್ನೂ ನಡೆಸಿದ್ದಾರೆ. 10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವವನ್ನು ಸೂಸುತ್ತದೆಯಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚಿನ ಪಾಲು ಜನ 10.10 ರ ಸಮಯದ ಗಡಿಯಾರ ಹೆಚ್ಚು ಆಕರ್ಷಕವಾಗಿದೆ ಎಂದು ಹೇಳಿದರಂತೆ.