ಶಿವನೆಂದರೆ ನೀಲಿ ಬಣ್ಣ, ಮೂರು ಕಣ್ಣು, ಕೊರಳಲ್ಲಿ ಹಾವು ತಲೆಯಲ್ಲಿ ಗಂಗೆ ಎನ್ನುವ ಚಿತ್ರಣ ಎಲ್ಲರಲ್ಲಿಯೂ ಮೂಡುತ್ತದೆ. ಶಿವ ಧರಿಸುವ ಪ್ರತೀಯೊಂದು ವಸ್ತುಗಳಿಗೂ ಕೂಡ ಒಂದೊಂದು ಸಂಕೇತಗಳಿರುತ್ತದೆ. ಆತ ಕುತ್ತಿಗೆಯಲ್ಲಿ ಹಾವನ್ನು ಧರಿಸುವುದು ಏತಕ್ಕೆ ಎನ್ನುವ ಪ್ರಶ್ನೆ ಒಮ್ಮೆಯಾದರೂ ಕಾಡಿರಬಹುದು. ಇದಕ್ಕೆ ನಿರ್ಧಿಷ್ಟ ಕಾರಣಗಳನ್ನು ಪ್ರಾಚೀನ ದೈವಿಕ ವಿಚಾರಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಶಿವ ಹಾವನ್ನು ಧರಿಸಲು ಕಾರಣಗಳು ಏನಿದೆ ಗೊತ್ತಾ. ಇಲ್ಲಿದೆ ನೋಡಿ ಕೆಲವಷ್ಟು ಮಾಹಿತಿ.

ಶಿವಲಿಂಗದಲ್ಲಿ ಸಾಮಾನ್ಯವಾಗಿ 5 ಹೆಡೆಯ ನಾಗವನ್ನು ಕಾಣಬಹದು. ಆದರೆ ಶಿವನ ಕತ್ತಿನಲ್ಲಿ ಒಂದೇ ಹಡೆಯ ನಾಗವಿದೆ.

ನಾಗನನ್ನು ಹಿಂದೂ ಧರ್ಮದಲ್ಲಿ ದೇವರೆಂದು ಪೂಜೆ ಮಾಡಲಾಗುತ್ತದೆ. ಅಲ್ಲದೇ ಸಮುದ್ರ ಮಥನದ ವೇಳೆ ಬಂದ ವಿಷವನ್ನು ಶಿವ ಕುಡಿದಾದ ಅದು ಆತನ ಹೊಟ್ಟೆ ಸೇರಬಾರದು ಎಂದು ವಾಸುಕಿ ಬಂದು ಆತನ ಕುತ್ತಿಗೆಯನ್ನ ಬಿಗಿದನು ಎನ್ನಲಾಗುತ್ತದೆ.

ಅಲ್ಲದೇ ಶಿವನ ಕುತ್ತಿಗೆಯಲ್ಲಿ ಸೃಷ್ಟಿ ಲಯ, ಸ್ಥಿತಿಗಳಿದ್ದು ನಾಗ ಇದರ ಸಂಕೇತ ನ್ನಲಾಗುತ್ತದೆ. ಅಹಂಕಾರವನ್ನು ತಡೆಯುವ ಶಕ್ತಿಯಾಗಿ ಕಾರ್ಯ ನಿರ್ವಹಿಸುವ ಗುರುತು ಎನ್ನಲಾಗುತ್ತದೆ.

ಶಿವ ಆಭರಣದಂತೆಯೂ ಅದನ್ನು ಧರಿಸಿದ್ದ ಎನ್ನುವ ಮಾತುಗಳೂ ಕೂಡ ಇದೆ. ಶಿವ ಮದುವೆ ಸಂದರ್ಭದಲ್ಲಿ ಆಭರಣದಂತೆ ಎಲ್ಲಾ ಹಾವುಗಳೂ ಕೂಡ ಕುತ್ತಿಗೆ ತೋಳುಗಳಲ್ಲಿ ಧರಿಸಿದ್ದ ಎನ್ನಲಾಗುತ್ತದೆ.

ಅಲ್ಲದೇ ಕೈಲಾಸದಲ್ಲಿ ಶಿವ ಪಾರ್ವತಿ ಇರುವಾದ ನಾಗನ ಮಣಿಯೂ ಬೆಳಕನ್ನು ನೀಡುತ್ತದೆ. ಇದರಿಂದಲೇ ನಾಗವನ್ನು ಧರಿಸುತ್ತಾನೆ ಎನ್ನುವ ಪ್ರತೀತಿಯೂ ಕೂಡ ಇದೆ.

ಸಕಲ ಚರಾಚರಗಳನ್ನೂ ನಿಯಂತ್ರಣ ಮಾಡುವ ಶಿವ ಅತ್ಯಂತ ಭಯವನ್ನು ಹುಟ್ಟಿಸುವ ನಾಗನನ್ನು ಕುತ್ತಿಗೆಯಲ್ಲಿ ಧರಿಸಿ ಭಯವನ್ನು ಹೋಗಲಾಡಿಸುವ ಯತ್ನ ಮಾಡಿರುವನೆಂದೂ ಕೂಡ ಹಿಂದೂ ಶಾಸ್ತ್ರಗಳು ಹೇಳುತ್ತವೆ.

ಮೂರು ಸುತ್ತು ಸುತ್ತಿಕೊಂಡಿರುವ ನಾಗ ಭೂತ, ಭವಿಷ್ಯ ವರ್ತಮಾನವನ್ನು ಪ್ರತಿನಿಧಿಸುತ್ತಾದೆ ಎಂದೂ ಕೂಡ ಹೇಳಲಾಗುತ್ತದೆ.

ಕೈಲಾಸದಲ್ಲಿ ಒಮ್ಮೆ ಹೆಚ್ಚಿನ ಚಳಿ ಇದ್ದಾಗ ಹಾವುಗಳು ಬಂದು ಶಿವನಲ್ಲಿ ಆಶ್ರಯ ಬೇಡಿದವು., ಆಗ ಅವುಗಳಿಗೆ ಆಶ್ರಯ ಕೊಡುವ ನಿಟ್ಟಿನಲ್ಲಿ ತನ್ನ ಕುತ್ತಿಗೆಯಲ್ಲಿ ಧರಿಸಿದ್ದನೆನ್ನುವ ಮಾತುಗಳೂ ಇದೆ. ಪ್ರಕೃತಿ ನಿಯಂತ್ರಣದ ಸಂಕೇತವಾಗಿಯೂ ನಾಗನನ್ನು ಧರಿಸಿದ್ದಾನೆ ಎನ್ನಲಾಗುತ್ತದೆ.