ಯಾಕೆ ಸಾವಿರ ಪದಕ್ಕೆ K ಎಂದು ಬಳಸ್ತಾರೆ ಗೊತ್ತಾ?

ಈಗ ಎಲ್ಲವೂ ಶಾರ್ಟ್ ಆಗ್ತಿದೆ. ಹೆಸರುಗಳನ್ನು ಜನರು ಶಾರ್ಟ್ ಮಾಡಿ ಕರೆಯುತ್ತಾರೆ. ಹಾಗೆ ಅನೇಕ ಶಬ್ಧಗಳನ್ನು ತುಂಡು ಮಾಡಿ ಬರೆಯುತ್ತಾರೆ. ಅದರಲ್ಲಿ ಸಾವಿರದ ಪದವೂ ಒಂದು. ಸಾವಿರಕ್ಕೆ ಕೆ ಎಂಬ ಪದ ಬಳಕೆ ಮಾಡಲಾಗುತ್ತದೆ. ಸಾವಿರಕ್ಕೂ ಕೆಗೂ ಏನು ಸಂಬಂಧ ಗೊತ್ತಾ?
 

Why Does The Letter K Stand For Thousand

ಪ್ರತಿ ನಿತ್ಯ ನಾವು ಅನೇಕ ಶಬ್ಧ (Word)ಗಳ ಬಳಕೆ ಮಾಡ್ತೇವೆ. ಕೆಲವೊಂದು ಶಬ್ಧಗಳ ಸರಿಯಾದ ಅರ್ಥ (Meaning) ನಮಗೆ ತಿಳಿದಿರುವುದಿಲ್ಲ. ಮತ್ತೆ ಕೆಲ ಶಬ್ಧಗಳು ಎಲ್ಲಿಂದ ಬಂತು? ಅದಕ್ಕೆ ಏಕೆ ಹೀಗೆ ಕರೆಯಲಾಗುತ್ತದೆ ಎಂಬುದು ಗೊತ್ತಿರುವುದಿಲ್ಲ. ಕೆಲವೊಂದು ಪದಗಳನ್ನು ಹೇಗೆ ಬರೆಯಬೇಕು ಎಂಬುದೂ ನಮಗೆ ಗೊತ್ತಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (social media)ಗಳ ಬಳಕೆ ಹೆಚ್ಚಾಗಿದೆ. ಫೋಟೋ (Photo) ಹಾಗೂ ವಿಡಿಯೋ (Video)ಗಳಿಗೆ ಎಷ್ಟು ಲೈಕ್ಸ್ ಬಂತು ಎಂಬುದನ್ನು ಜನರು ತಿಳಿಯಲು ಸದಾ ಕುತೂಹಲಗೊಂಡಿರುತ್ತಾರೆ. ನನ್ನ ಫೋಟೋಕ್ಕೆ ಇಷ್ಟು ಲೈಕ್ಸ್ (Likes) ಬಂತು, ಅಷ್ಟು ಲೈಕ್ಸ್ ಬಂತು ಎಂದು ಮಾತನಾಡ್ತಾರೆ. ನೀವು ಕೇಳಿರಬಹುದು ನನ್ನ ಫೋಟೋಕ್ಕೆ ಸಾವಿರ (thousand) ಲೈಕ್ಸ್ ಬಂದಿದೆ ಎಂದು ಯಾರೂ ಹೇಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಶಾರ್ಟ್‌ಫಾರ್ಮ್‌ (Shortform)ನ ಪ್ರವೃತ್ತಿ ಹೆಚ್ಚಾಗಿದೆ. ಅಂತರ್ಜಾಲ (Internet) ದಲ್ಲಿ ಸಂಖ್ಯೆಗಳನ್ನು ಶಾರ್ಟ್ ಆಗಿ ಬರೆಯಲಾಗುತ್ತಿದೆ.

10 ಮಿಲಿಯನ್ (Million) ಮಾತು ಬಂದಾಗ 1ಎಂ (1 M) ಎಂದು ಬರೆಯಲಾಗುತ್ತದೆ. ಯುಟ್ಯೂಬ್ (Youtube) ವಿಡಿಯೋಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಕಾಣಬಹುದು. ಮಿಲಿಯನ್ ಬಂದಾಗ ಎಂ ಬಳಕೆ ಮಾಡುವುದು ಸಾಮಾನ್ಯ. ಆದ್ರೆ ಸಾವಿರಕ್ಕೂ ಕೆ (K) ಗೂ ಏನು ಸಂಬಂಧವಿದೆ. 10 ಸಾವಿರ ಬರೆಯುವ ಬದಲು ಜನರು 10 ಕೆ ಎಂದು ಬರೆಯುತ್ತಾರೆ. ಇದರಲ್ಲಿ ಕೆ ಅಂದ್ರೆ ಏನು? ಜನರು 10 ಸಾವಿರ ಬರೆಯುವ ವೇಳೆ 10 ಟಿ ಎಂದು ಬರೆಯಬಹುದಿತ್ತು. ಆದ್ರೆ ಇಲ್ಲಿ ಕೆ ಬಂದಿದ್ದು ಹೇಗೆ? ಕೆಲವರಿಗೆ ಇದ್ರ ಅರ್ಥ ಗೊತ್ತು. ಮತ್ತೆ ಕೆಲವರಿಗೆ ಇದನ್ನು ಎಲ್ಲಿ ಬಳಸ್ತಾರೆ ಮತ್ತೆ ಏಕೆ ಬಳಕೆಗೆ ಬಂದಿದೆ ಎಂಬುದು ಗೊತ್ತಿಲ್ಲ. ಇಂದು ಕೆ ಅಂದ್ರೆ ಏನು ಎಂಬುದನ್ನು ನಿಮಗೆ ಹೇಳ್ತೇವೆ.

ಕೆ ಎಂಬ ಪದ ಬಳಕೆ ಎಲ್ಲಿಂದ ಶುರುವಾಯ್ತು ಗೊತ್ತಾ? : ಕೆ ಮತ್ತು ಸಾವಿರದ ನಡುವಿನ ಸಂಬಂಧವನ್ನು ಹಲವು ಮಾಧ್ಯಮ ವರದಿಗಳಲ್ಲಿ ವಿವರಿಸಲಾಗಿದೆ. ವಾಸ್ತವವಾಗಿ ಕೆ ಹಾಗೂ ಗ್ರೀಕ್ ಪದಕ್ಕೂ ಸಂಬಂಧವಿದೆ ಎನ್ನಲಾಗುತ್ತದೆ. ಗ್ರೀಕ್ ನಲ್ಲಿ 'ಚಿಲಿಯೊಯ್' (Chilioi) ಎಂಬ ಪದವಿದೆ. ಈ ಪದವು ಸಾವಿರ ಎಂಬ ಅರ್ಥವನ್ನು ನೀಡುತ್ತದೆ. ಅಲ್ಲಿಂದಲೇ ಕೆ ಎಂಬ ಪದವು ಬಳಕೆಗೆ ಬಂದಿದೆ ಎಂದು ಹೇಳಲಾಗುತ್ತದೆ.

Homesick After Marriage: ಯಾವಾಗ್ಲೂ ತವರು ಮನೆ ನೆನಪಾಗುತ್ತೆ, ಏನ್ಮಾಡ್ಲಿ ?

ಸಾವಿರದಿಂದ ಕಿಲೋಗ್ರಾಂಗೆ ಬದಲಾಯ್ತು ಪದ : ಫ್ರೆಂಚ್ ಭಾಷೆಯಲ್ಲಿ 'ಚಿಲಿಯೊಯ್' ಎಂಬ ಗ್ರೀಕ್ ಪದವನ್ನು ಬಳಸಲು ಶುರು ಮಾಡಿದ್ರು. ಫ್ರೆಂಚ್ ಭಾಷೆಯಲ್ಲಿ ಚಿಲಿಯೊಯ್ ಪದದ ಅರ್ಥವನ್ನು ಸಾವಿರದಿಂದ ಕಿಲೋಗ್ರಾಂಗೆ ಬದಲಾಯಿಸಲಾಯಿತು. ನಾವು ಯಾವುದನ್ನಾದರೂ ಸಾವಿರದಿಂದ ಗುಣಿಸಿದಾಗ ಅದನ್ನು ಕಿಲೋ ಎಂದು ಕರೆಯುತ್ತೇವೆ. ಹಾಗಾಗಿಯೇ 1000 ಗ್ರಾಂ ಅನ್ನು 1 ಕಿಲೋಗ್ರಾಂ ಎಂದು ಕರೆಯಲಾಗುತ್ತದೆ. ಹಾಗೆಯೇ 1000 ಮೀಟರ್ ಒಂದು ಕಿಲೋಮೀಟರ್ ಆಯಿತು. ಅಂದಿನಿಂದ ಸಾವಿರವನ್ನು ಕಿಲೋ ಎಂದು ಬಳಸಲಾರಂಭಿಸಿದ್ರು. ಪ್ರಪಂಚದಾದ್ಯಂತ ಸಾವಿರದ ಬದಲಿಗೆ ಕೆ ಅನ್ನು ಬಳಸಲಾಗ್ತಾ ಬಂದಿದೆ. 

Promotion: ಕೆಲವರಿಗೆ ಮಾತ್ರವೇ ಯಾಕೆ ಸಿಗುತ್ತೆ?

ಕೆ ಎಂಬುದು ಸಾವಿರದ ಸಂಕೇತ : ಕಿಲೋ ಎಂದು ಇಂಗ್ಲಿಷ್‌ನಲ್ಲಿ ಬರೆಯುವಾಗ, ಅದರ ಕಾಗುಣಿತವು K ಯಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಕೆಯನ್ನು ಸಾವಿರದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಾವು ಸಾವಿರದ ಸ್ಥಳದಲ್ಲಿ K ಅನ್ನು ಸಹ ಬರೆಯುತ್ತೇವೆ. ಉದಾಹರಣೆಗೆ, 25 ಸಾವಿರವನ್ನು 25 K ಎಂದು ಬರೆಯಲಾಗಿದೆ. ಕಿಲೋ ಕಾರಣಕ್ಕಾಗಿಯೇ ಸಾವಿರಕ್ಕೆ ಟಿ ಎಂದು ಬರೆಯುವ ಬದಲು ಕೆ ಎಂದು ಬರೆಯಲಾಗುತ್ತದೆ. 

Latest Videos
Follow Us:
Download App:
  • android
  • ios