ಸಾಮಾನ್ಯವಾಗಿ ಟವೆಲ್‌ನ ಬಾರ್ಡರ್‌ನಲ್ಲಿ ಕಸೂತಿ ಏಕೆ ಇರುತ್ತದೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಇದು ಟವೆಲ್ ಬೇಗ ಒಣಗಲು, ಹಾಳಾಗದಂತೆ ನೋಡಿಕೊಳ್ಳಲು, ನೀರು ಹೀರಿಕೊಳ್ಳಲು ಮತ್ತು ಟವೆಲ್‌ಗೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಗ್ರಾಹಕರನ್ನು ಆಕರ್ಷಿಸಲು ಮಾತ್ರ ಈ ವಿನ್ಯಾಸ ಎಂದು ಹಲವರು ಭಾವಿಸಿದ್ದರು, ಆದರೆ ಇದರ ಮಹತ್ವ ತಿಳಿದು ಅಚ್ಚರಿಪಟ್ಟಿದ್ದಾರೆ.

ಪ್ರತಿ ದಿನ ನಾವು ಟವೆಲ್ (Towel) ಬಳಕೆ ಮಾಡ್ತೇವೆ. ಸ್ನಾನಕ್ಕೆ, ಕಾಲು – ಮುಖ ಒರೆಸಿಕೊಳ್ಳೊಕೆ ಅಂತ ಬೇರೆ ಬೇರೆ ಟವೆಲ್ ಬಳಸ್ತೇವೆ. ಟವೆಲ್ ಖರೀದಿ ಮಾಡುವಾಗ ಟವೆಲ್ ಬಣ್ಣ, ಎಷ್ಟು ಉದ್ದವಿದೆ, ಅಗಲವಿದೆ, ಎಷ್ಟು ತೆಳ್ಳಗಿದೆ, ರೇಟ್ ಎಷ್ಟು ಎಂಬುದನ್ನು ಗಮನಿಸುತ್ತೇವೆಯೇ ವಿನಃ ಟವೆಲ್ ಮೇಲೆ ಯಾವೆಲ್ಲ ಬಾರ್ಡರ್ ಇದೆ, ಏನೆಲ್ಲ ಡಿಸೈನ್ ಇದೆ ಅನ್ನೋದನ್ನು ಹೆಚ್ಚಾಗಿ ನೋಡೋಕೆ ಹೋಗೋದಿಲ್ಲ. ನೋಡಿದ್ರೂ ಯಾಕೆ ಬಾರ್ಡರ್ (border) ದಪ್ಪವಿರುತ್ತೆ, ಅದ್ರ ಮೇಲೆ ಕಸೂತಿ (Embroidery) ಮಾಡಲಾಗಿರುತ್ತದೆ ಎಂಬುದನ್ನು ಆಲೋಚನೆ ಮಾಡೋದಿಲ್ಲ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಟವೆಲ್ ಬಾರ್ಡರ್ ಬಗ್ಗೆ ಚರ್ಚೆ ಆಗ್ತಿದೆ. ಟವೆಲ್ ಬಾರ್ಡರ್ ನಲ್ಲಿ ಕಸೂತಿ ಏಕಿರುತ್ತೆ ಎಂಬ ಪ್ರಶ್ನೆ ಎದ್ದಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ನೇಟ್ ಮೆಕ್‌ಗ್ರಾಡಿ ಒಂದು ಪೋಸ್ಟ್ ಹಾಕಿದ್ದಾರೆ. ಅದು ಈಗ ಚರ್ಚೆ ಹುಟ್ಟು ಹಾಕಿದೆ. ನೇಟ್ ಮೆಕ್ ಗ್ರಾಡಿ ಎಕ್ಸ್ ಖಾತೆಯಲ್ಲಿ ಆಸಕ್ತಿದಾಯಕ ಪ್ರಶ್ನೆ ಕೇಳಿದ್ದಾರೆ. ಟವಲ್‌ನ ಕೊನೆಯಲ್ಲಿ ಕಸೂತಿ ಮಾಡಿದ ಬಾರ್ಡರ್ ಏಕೆ ಇರುತ್ತೆ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ, ಈ ಬಾರ್ಡರ್ ಇರಲು ಕಾರಣ ನನಗೆ ಗೊತ್ತು ಎಂದಿರುವ ಅವರು, ಟವಲ್ ಅನ್ನು ನೀವು ತೊಳೆದ ನಂತ್ರ ಅದನ್ನು ಸರಿಯಾಗಿ ಮಡಚಲು ಆಗುವುದಿಲ್ಲ. ಆಗ ನೀವು ಹೊಸ ಟವೆಲ್ ಖರೀದಿ ಮಾಡ್ತೀರಿ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಆರ್ಡರ್ ಮಾಡಿದ ಫುಡ್‌ನಲ್ಲಿದ್ದ ಕ್ಯೂಟ್ ನೋಟ್ ನೋಡಿ ಭಾವುಕಳಾದ ಮಹಿಳೆ, ಆದ್ರೆ ನೆಟ್ಟಿಗರು ಗರಂ

ನೆಟ್ಟಿಗರ ಅಭಿಪ್ರಾಯ ಏನು? : ನೇಟ್ ಎಕ್ಸ್ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ತಮಾಷೆ ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಗಂಭೀರ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಬಾರ್ಡರ್ ಅನ್ನು ಟವೆಲ್ ಬೇಗ ಒಣಗುವಂತೆ ಮಾಡುವ ರೇಸಿಂಗ್ ಸ್ಟ್ರೈಪ್ ಎಂದು ಕೆಲವರು ಕರೆದಿದ್ದಾರೆ. ನೀವು ದೇಹದ ಎಲ್ಲ ಭಾಗವನ್ನು ಒಂದೇ ಕಡೆ ಒರೆಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ಮಾರ್ಕ್ ನೀಡಲಾಗಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಈ ಬಾರ್ಡರ್ ಟವೆಲ್ ಬೇಗ ಒಣಗಲು ಸಹಾಯ ಮಾಡುತ್ತದೆ ಎಂಬುದು ಇನ್ನೊಬ್ಬರ ಅಭಿಪ್ರಾಯವಾಗಿದೆ. ದೊಡ್ಡ ಕಂಪನಿಗಳು ಜನರನ್ನು ಆಕರ್ಷಿಸಲು ಮಾಡುವ ಗಿಮಿಕ್ ಇದು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕಸೂತಿ ಮೂಲಕವೇ ಟವೆಲ್ ಎಷ್ಟು ಹಾಳಾಗಿದೆ ಎಂಬುದನ್ನು ಪತ್ತೆ ಮಾಡ್ಬಹುದು ಎಂದಿದ್ದಾರೆ. ಟವೆಲ್ ಸಗಟು ವ್ಯಾಪಾರಿಯೊಬ್ಬರು ಇದನ್ನು ಡಾರ್ಬಿ ಬಾರ್ಡರ್ ಎಂದು ಕರೆದಿದ್ದಾರೆ. ಹಾಗೆಯೇ ಈ ಬಾರ್ಡರ್ ನಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ವಿವರಿಸಿದ್ದಾರೆ.

ಡಾರ್ಬಿ ಬಾರ್ಡರ್ ಎಂದ್ರೇನು? : ಟವೆಲ್ ಬಾರ್ಡರ್ ನಲ್ಲಿ ಇರುವ ಕಸೂತಿಯನ್ನು ಡಾರ್ಬಿ ಬಾರ್ಡರ್ ಎಂದು ಕರೆಯಲಾಗುತ್ತದೆ. ಈ ನೇಯ್ದ ಬಾರ್ಡರ್ ಗಳು ಟವೆಲ್‌ಗಳನ್ನು ಹಾಳಾಗದಂತೆ ನೋಡಿಕೊಳ್ಳುತ್ತದೆ. ನೀರು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಟವೆಲ್‌ಗಳಿಗೆ ವೃತ್ತಿಪರ, ಹೊಳೆಯುವ ನೋಟವನ್ನು ನೀಡುತ್ತದೆ. 

ವಿಮಾನದಲ್ಲಿ ಚಹಾ-ಕಾಫಿ ಕುಡಿಯುವುದು ಅಪಾಯಕಾರಿಯೇ?

ಸತ್ಯ ತಿಳಿದು ಅಚ್ಚರಿ : ಟವೆಲ್ ಬಾರ್ಡರ್ ಗೆ ಮಾಡುವ ವಿನ್ಯಾಸ, ಕೇವಲ ಗ್ರಾಹಕರನ್ನು ಸೆಳೆಯಲು ಎಂದೇ ಬಹುತೇಕರು ಭಾವಿಸಿದ್ದರು. ಆದ್ರೆ ವೃತ್ತಿಪರರು ಹೇಳಿದ ಕಾರಣ ಕೇಳಿ ಅಚ್ಚರಿಗೊಳಗಾಗಿದ್ದಾರೆ. ಟವೆಲ್ ಕೊನೆಯಲ್ಲಿ ಇರುವ ಕಸೂತಿಗೂ ಮಹತ್ವವಿದೆ ಎಂಬುದನ್ನು ಅರಿತಿದ್ದಾರೆ. ನೀವೂ ಇನ್ಮುಂದೆ ಟವೆಲ್ ಕೈನಲ್ಲಿ ಹಿಡಿದಾಗ ಕಸೂತಿಯನ್ನು ಗಮನಿಸಿ. 

Scroll to load tweet…