ದಕ್ಷಿಣ ಏಷ್ಯನ್ನರಿಗೆ ಹಾರ್ಟ್ ಪ್ರಾಬ್ಲಂ ಜಾಸ್ತಿ ಏಕೆ?
ಉಳಿದ ದೇಶದವರಿಗೆ ಹೋಲಿಸಿದರೆ ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ ಹಾಗೂ ಮಾಲ್ಡೀವ್ಸ್‌ನ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು. ಅಲ್ಲದೆ ಇತರರಿಗಿಂತ ಸುಮಾರು 10 ವರ್ಷ ಚಿಕ್ಕ ವಯಸ್ಸಿನಲ್ಲೇ ಈ ದಕ್ಷಿಣ ಏಷ್ಯನ್ನರಲ್ಲಿ ಹಾರ್ಟ್ ಪ್ರಾಬ್ಲಂ ಕಂಡುಬರುತ್ತದೆ. ಏಕೆ ಹೀಗೆ?
ದಕ್ಷಿಣ ಏಷ್ಯಾ ರಾಷ್ಟ್ರಗಳ ಯಾವುದೇ ವ್ಯಕ್ತಿಯನ್ನು ಕೇಳಿ ನೋಡಿ, ಅವರ ಹತ್ತಿರದ ಕುಟುಂಬಿಕರಲ್ಲಿ ಒಬ್ಬರಾದರೂ ಹಾರ್ಟ್ ಪೇಶಂಟ್‌ಗಳೋ ಅಥವಾ ಸಡನ್ ಆಗಿ ಹಾರ್ಟ್ ಅಟ್ಯಾಕ್ ಆದವರೋ ಇದ್ದೇ ಇರುತ್ತಾರೆ. ಅರೆ, ಈ ಪ್ರದೇಶದ ಜನರಲ್ಲಿ ಏಕೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಿವೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರು ಹುಡುಕಿಕೊಂಡು ಹೊರಟಾಗ ತಿಳಿದು ಬಂದದ್ದು ಇಷ್ಟು;
ಸೌತ್ ಏಷಿಯನ್ ಜನರ ದೇಹ ರಚನೆಯಲ್ಲೇ ಕೊಂಚ ವ್ಯತ್ಯಾಸವಡಗಿದೆ. ಎಲ್ಲೆಲ್ಲಿ ಫ್ಯಾಟ್ ತುಂಬಿಕೊಳ್ಳಬಾರದೋ ಅಲ್ಲೆಲ್ಲ ಫ್ಯಾಟ್ ತುಂಬಿಸಿಕೊಳ್ಳುವ ದೇಹ ಲಕ್ಷಣ ಸೌತ್ ಏಷಿಯನ್ನರಲ್ಲಿ ಹೆಚ್ಚು. ಅಂದರೆ ಲಿವರ್, ಹೊಟ್ಟೆ, ಸ್ನಾಯುಗಳು - ಈ ಅಂಗಗಳಲ್ಲಿ ಕೊಲೆಸ್ಟೆರಾಲ್ ಹೆಚ್ಚಾದರೆ ಅದು ಚರ್ಮದ ಅಡಿಗಷ್ಟೇ ಸ್ಟೋರ್ ಆಗುವ ಫ್ಯಾಟ್‌ಗಿಂತ ಹೆಚ್ಚು ಅಪಾಯಕಾರಿ.
ಮುಟ್ಟು, ಸುಕ್ಕುಗಟ್ಟಿದ ಸಮಸ್ಯೆಗೆ ಮಸ್ಕ್ ಮಲನ್ ಪರಿಹಾರ!
ಬಿಳಿಯರಿಗಿಂತ ಕಡಿಮೆ ಬೊಜ್ಜು ಹೊಂದಿರುವವರಾದರೂ ದಕ್ಷಿಣ ಏಷ್ಯನ್ನರಲ್ಲಿ ಹೀಗೆ ಬೊಜ್ಜು ಬೇಡದ ಅಂಗಗಳಲ್ಲಿ ತುಂಬಿಕೊಳ್ಳುವುದರಿಂದ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆ ಬಿಳಿಯರಿಗಿಂತ ಎರಡು ಪಟ್ಟು ಹೆಚ್ಚು. ಈ ಡಯಾಬಿಟೀಸ್ ಪರಿಣಾಮವಾಗಿ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಹೆಚ್ಚಾಗಿ ಸೌತ್ ಏಷಿಯನ್ನರನ್ನು ಕಾಡುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಸಾಮಾನ್ಯ ತೂಕ ಹೊಂದಿರುವ ಶೇ.44ರಷ್ಟು ದಕ್ಷಿಣ ಏಷ್ಯನ್ನರಲ್ಲಿ ಹೈ ಬಿಪಿ, ಕೊಲೆಸ್ಟೆರಾಲ್, ಹೈಪರ್‌ಟೆನ್ಷನ್‌ನಂಥ ಸಮಸ್ಯೆಗಳು ಕಂಡುಬಂದರೆ, ಸಾಮಾನ್ಯ ತೂಕದ ಶೇ.21ರಷ್ಟು ಬಿಳಿಯರಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ.
ನುಗ್ಗೇಕಾಯಿ ಸೂಪರ್‌ಫುಡ್ ಎನ್ನುತ್ತಾರೆ ವಿಜ್ಞಾನಿಗಳು, ಯಾಕೆ ಗೊತ್ತಾ?
ಒಟ್ಟಿನಲ್ಲಿ ಇದಕ್ಕೆ ಜೀನ್ಸ್ ಮೊದಲ ಕಾರಣವಾದರೆ, ಸೌತ್ ಏಷಿಯನ್ಸ್ ಆರೋಗ್ಯದ ಕಡೆ ಗಮನ ಹರಿಸುವುದು ಕಡಿಮೆ ಎನ್ನುವುದು ಇನ್ನೊಂದು ಕಾರಣ. ಅಲ್ಲದೆ, ನಮ್ಮಲ್ಲಿ ಜವಾಬ್ದಾರಿಗಳು ಹೆಚ್ಚು, ಹೀಗಾಗಿ ಚಿಂತೆಯೂ ಹೆಚ್ಚು. ಇವೆಲ್ಲವೂ ಸೇರಿ ಹಾರ್ಟ್ ಪ್ರಾಬ್ಲಂಗಳು ಹೆಚ್ಚಾಗಿ ದಕ್ಷಿಣ ಏಷ್ಯನ್ನರನ್ನು ಹುಡುಕಿಕೊಂಡು ಬರುತ್ತಿವೆ.