ಫಸ್ಟ್ ಆಫ್ ಆಲ್ ಮಾರುಕಟ್ಟೆಯಲ್ಲಿ ಸಿಗೋ ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳು ಇರುತ್ತೋ ಇಲ್ವೋ ಗೊತ್ತಿಲ್ಲ. ನಾಟಿ ಕೋಳಿ ಮೊಟ್ಟೆಯಲ್ಲಾದರೆ ಅಗತ್ಯ ವಿಟಮಿನ್ಸ್ ತುಂಬಿ ತುಳುಕಾಡುತ್ತದೆ. ಆದರೂ, ಬಿಳಿ ಅಥವಾ ಹಳದಿಯಲ್ಲಿ ಯಾವುದು ಬೆಸ್ಟ್ ಎನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಒಂದು ಮೊಟ್ಟೆ 200 ಎಂಜಿ ಕೊಲೆಸ್ಟ್ರಾಲ್ ಹಾಗೂ 6 ಗ್ರಾಂ ಫ್ಯಾಟ್ ಹೊಂದಿರುತ್ತದೆ. ಆದರೆ ಹೃದಯ ತಜ್ಞರು ಹೇಳುವಂತೆ ಮನುಷ್ಯ ದಿನಕ್ಕೆ 300 ಎಂಜಿ ಕೊಲೆಸ್ಟರಾಲ್ ತಿನ್ನಬಹುದು.

ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೋಟಿನ್ ಇರುತ್ತದೆ. ಆದರೆ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದು, ಮೆದುಳು ಆರೋಗ್ಯವನ್ನು ಕಾಪಾಡುವ ಕೊಲಿನ್ ಅಂಶ ಹೆಚ್ಚಿದೆ. ಅಲ್ಲದೇ ವಿಟಮಿನ್ A,B-12 ಹಾಗೂ B6 ಅಧಿಕವಾಗಿದೆ.

ಒಟ್ಟಾರೆ ಒಂದು ಮೊಟ್ಟೆ ಸೇವಿಸುವುದರಿಂದ ಪ್ರೋಟಿನ್ ಹಾಗು ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ದೇಹಕ್ಕೆ ಅಗತ್ಯದಷ್ಟು ಮಾತ್ರ ಕೊಲೆಸ್ಟರಾಲ್ ಹೋಗಬೇಕೆಂದರೆ ಬಿಳಿ ಭಾಗ ಬೆಸ್ಟ್ ಎಂಬುವುದು ತಜ್ಞರ ಅಭಿಪ್ರಾಯ.