ಕನಸುಗಳೆಂಬುದು ಚಲಿಸುವ ಮೋಡಗಳಿದ್ದಂತೆ. ಈಗ ಕಂಡಂತಾಗಿದ್ದು, ಸ್ವಲ್ಪ ಎಚ್ಚರಾಗಿ ಕಣ್ಣು ಮುಚ್ಚಿದರೆ ಮತ್ತೆ ಅವು ಅಲ್ಲಿರುವುದಿಲ್ಲ. ಬೇರೆಯ ಕನಸುಗಳು ರೂಪುಗೊಳ್ಳುತ್ತಿರುತ್ತವೆ. ಆಳವಾದ ನಿದ್ರೆ ಏಕೆ ಅಗತ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕನಸುಗಳೇಕೆ ಅಗತ್ಯ ಎಂಬುದರ ಕುರಿತು ಯಾರೂ ನಿಖರವಾಗಿ ಹೇಳಿಲ್ಲ. ಆದರೆ, ಕೆಲ ಜನಪ್ರಿಯ ಥಿಯರಿಗಳ ಪ್ರಕಾರ, ಕನಸುಗಳು ನಮ್ಮ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು, ಸೃಜನಾತ್ಮಕ ಐಡಿಯಾಗಳ ಹುಟ್ಟಿಗೆ, ಒತ್ತಡಾತ್ಮಕ ಪರಿಸ್ಥಿತಿ ಎದುರಿಸಲು ಸಹಾಯ ಮಾಡುತ್ತವೆ. ಅವು ಮಾನಸಿಕ ತುಮುಲಗಳನ್ನು ತಮ್ಮದೇ ಆದ ರೀತಿಯಲ್ಲಿ ಹೊರ ಹಾಕುತ್ತವೆ. ನಮಗೆ ಸಾಮಾನ್ಯವಾಗಿ ಬೀಳುವ ಕನಸುಗಳು ನಮ್ಮ ವ್ಯಕ್ತಿತ್ವವನ್ನು ಅವಲಂಬಿಸಿರುತ್ತವೆ. ಅಂದರೆ, ಸಾಮಾನ್ಯ ಕನಸುಗಳ ಸ್ವರೂಪ ಅರಿತರೆ, ವ್ಯಕ್ತಿಯ ವ್ಯಕ್ತಿತ್ವವನ್ನು ಲೆಕ್ಕ ಹಾಕಬಹುದು. 

ದುಸ್ವಪ್ನಗಳು
ಕೆಟ್ಟ ಕನಸುಗಳು ಹೆಚ್ಚು ಬೀಳುವವರು ಸಾಮಾನ್ಯವಾಗಿ ಹೆಚ್ಚು ಭಾವಜೀವಿ ಹಾಗೂ ಅಂತರ್ಮುಖಿಗಳಾಗಿರುತ್ತಾರೆ. ಇನ್ನೊಬ್ಬರ ಭಾವನೆಗಳನ್ನು ಚೆನ್ನಾಗಿ ಅರಿಬಲ್ಲರಲ್ಲದೆ, ಇವರಿಗೆ 6ನೇ ಇಂದ್ರಿಯ ಹೆಚ್ಚು ಕೆಲಸ ಮಾಡುತ್ತಿರುತ್ತದೆ. ಅವರು ಹೆಚ್ಚು ಸೂಕ್ಷ್ಮ ಪ್ರವೃತ್ತಿಯವರಾದ್ದರಿಂದ ಅವರ ಸುತ್ತಲಿರುವವರು ಅದರ ಲಾಭ ಪಡೆಯುತ್ತಾರೆ. ಆದರೆ, ಅವರು ಮಾತ್ರ ಹೀಗಾದರೆ, ಹಾಗಾದರೆ ಎಂದು ತಮ್ಮ ಬಗ್ಗೆ ಹಾಗೂ ಸುತ್ತಲಿನವರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಈ ಆತಂಕಗಳು ಕನಸಿನ ರೂಪದಲ್ಲಿ ರಾತ್ರಿ ಕಾಡುತ್ತವೆ. 

14 ನಿಮಿಷದಲ್ಲಿ ಸರಿಪಡಿಸಿ ಮುರಿದ Zip, ವಿಡಿಯೋ ನೋಡಲು ಮುಗಿಬಿದ್ದ ಜನ!...

ಕ್ರಶ್ ಕುರಿತಾದ ಕನಸುಗಳು
ನಿಮಗೆ ಪದೇ ಪದೆ ನಿಮ್ಮ ಕ್ರಶ್ ಕುರಿತೇ ಕನಸು ಬೀಳುತ್ತಿದ್ದರೆ, ನೀವು ಸ್ವಲ್ಪ ಮನರಂಜನಾ ಪ್ರವೃತ್ತಿಯವರು. ಇವರು ತಮ್ಮ ಜವಾಬ್ದಾರಿಗಳನ್ನೆಲ್ಲ ಬದಿಗಿಟ್ಟು ಪ್ರೀತಿಪಾತ್ರರಿಗೆ ಸಮಯ ಹಾಗೂ ಎನರ್ಜಿ ನೀಡಬಲ್ಲರು. ಜನರ ಜೊತೆ ಇರುವುದು ಇವರಿಗೆ ಎಲ್ಲಕ್ಕಿಂತ ಸಂತೋಷದ ವಿಷಯ. ಸಾಮಾನ್ಯವಾಗಿ ಸುತ್ತಲಿನವರನ್ನು ಖುಷಿ ಪಡಿಸುವುದರಲ್ಲಿ ಖುಷಿ ಕಾಣುತ್ತಾರೆ. ಆದರೆ, ಇವರ ಕ್ರಶ್ ಮಾತ್ರ ರಾತ್ರಿ ಕನಸಿನಲ್ಲಿ ಬಂದು ಇವರನ್ನು ಖುಷಿ ಪಡಿಸುತ್ತಾರೆ!

ಲೂಸಿಡ್ ಕನಸುಗಳು
ಈ ಕನಸುಗಳು ಬೀಳುವಾಗ ಸಾಮಾನ್ಯವಾಗಿ ತಾವು ನಿದ್ರಿಸುತ್ತಿದ್ದೇವೆಂಬ ಅರಿವೂ, ಕನಸಿನಲ್ಲಿ ಏನೆಲ್ಲ ಆಗಬೇಕೆಂಬ ನಿಯಂತ್ರಿಸುವ ಶಕ್ತಿಯೂ ಕನಸು ಕಾಣುವವರಿಗಿರುತ್ತದೆ. ಇಂಥ ಕನಸುಗಳು ನಿಮಗೆ ಹೆಚ್ಚಾಗಿ ಬೀಳುತ್ತಿದ್ದರೆ ನೀವು ಬಹಿರ್ಮುಖಿಗಳಾಗಿದ್ದು, ಹೆಚ್ಚು ಸೂಕ್ಷ್ಮ ಮನಸ್ಸಿನವರಾಗಿರುತ್ತೀರಿ. 6ನೇ ಇಂದ್ರಿಯ ಬಹಳ ಜಾಗೃತವಾಗಿರುವುದರಿಂದ ಕನಸಿನಲ್ಲಿಯೂ ತಾವು ಕನಸು ಕಾಣುತ್ತಿರುವುದರ ಪರಿವೆ ಹಾಗೂ ಎಚ್ಚರಗೊಳ್ಳದೆಯೇ ಅದನ್ನು ಬೇಕೆಂದಂತೆ ಬದಲಿಸುವ ಶಕ್ತಿ ಇವರಿಗಿರುತ್ತದೆ. ಅಲ್ಲದೆ, ಬದುಕಿನ ಸಮಸ್ಯೆಗಳನ್ನು ಇವರು ಲೀಲಾಜಾಲವಾಗಿ ಎದುರಿಸಬಲ್ಲರು. 

ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್‌ ಲವ್‌ ಸ್ಟೋರಿ!...

ರಿಯಾಲಿಟಿ
ನಿಮ್ಮ ಕಚೇರಿ, ಟ್ಯಾಕ್ಸ್ ಸೇರಿದಂತೆ ನಿಜ ಜೀವನದ ಕುರಿತೇ ಕನಸು ಬೀಳುತ್ತಿದ್ದರೆ ನೀವು ಟೈಪ್ ಎ ಪರ್ಸನಾಲಿಟಿ ಹೊಂದಿರಬೇಕು. ಅಂದರೆ, ಹೆಚ್ಚಿನ ಪಕ್ಷ ನೀವು ವರ್ಕೋಹಾಲಿಕ್ ಆಗಿರುತ್ತೀರಿ. ವೈಯಕ್ತಿಕ ಬದುಕು ಹಾಗೂ ವೃತ್ತಿಬದುಕನ್ನು ನಿಭಾಯಿಸುವುದು ನಿಮಗೆ ದೊಡ್ಡ ಒತ್ತಡವಾಗಿದ್ದು, ಅದೇ ಕನಸುಗಳಲ್ಲಿ ಪ್ರತಿಫಲಿಸುತ್ತದೆ. 

ಎಮೋಶನಲ್ ಡ್ರೀಮ್ಸ್
ಹೆಚ್ಚು ಲಾಜಿಕಲ್ ಆಗಿ ಯೋಚಿಸುವವರು, ಪ್ರಾಕ್ಟಿಕಲ್ ಆಗಿ ನಿರ್ಧಾರ ಕೈಗೊಳ್ಳುವವರು, ಭಾವನೆಗಳಿಗೆ ಮೊದಲ ಪ್ರಾಶಸ್ತ್ಯ ನೀಡದವರಿಗೆ ಬೀಳುವ ಕನಸುಗಳು ಹೆಚ್ಚು ಗಾಢವಾದ ಎಮೋಶನ್ಸ್‌ನಿಂದ ಕೂಡಿರುತ್ತವೆ. 

ಪ್ರಕೃತಿ
ಕನಸಿನಲ್ಲಿ ಮರ, ಕಲ್ಲು, ಗಿಡ, ನೀರು ಹೆಚ್ಚಾಗಿ ಬರುವುದು ಸೃಜನಶೀಲ ಮನಸ್ಸುಗಳುಳ್ಳವರಿಗೆ. ಹೆಚ್ಚು ಕ್ರಿಯೇಟಿವ್ ಇರುವವರಿಗೆ ದಾರಿಯಲ್ಲಿ ಮರ ಅಡ್ಡ ಬಿದ್ದು, ಅದನ್ನು ಸರಿಪಡಿಸಲು ಒದ್ದಾಡುವಂತೆ, ನೀರಿನಲ್ಲಿ ಸಿಲುಕಿಕೊಂಡಂತೆ ಮುಂತಾದ ಕನಸುಗಳು ಬೀಳುತ್ತವೆ. 

ತಪ್ಪಿಸಿಕೊಂಡು ಓಡುವುದು
ಸಾಮಾನ್ಯವಾಗಿ ನಿಮ್ಮ ಕನಸಿನಲ್ಲಿ ಬೆರೆಸಿಕೊಂಡು ಬರುವ ನಾಯಿಯಿಂದ ತಪ್ಪಿಸಿಕೊಂಡು ಓಡುವುದು, ಜೋರಾಗಿ ಅಪ್ಪಳಿಸುವ ಅಲೆಗಳಿಂದ ದೂರ ಓಡುವುದು, ಯಾರೋ ಬೆರೆಸಿಕೊಂಡು ಬಂದಂತೆ ಎಲ್ಲ ಪದೇ ಪದೆ ಕನಸು ಬೀಳುತ್ತಿದ್ದರೆ, ನೀವು ಹೆಚ್ಚು ಪಲಾಯನವಾದಿಗಳಿರಬೇಕು. ಬದುಕಿನಲ್ಲಿ ಯಾವುದೇ ಸಮಸ್ಯೆ ಅಥವಾ ವ್ಯಕ್ತಿಯನ್ನು ಎದುರಿಸುವುದಕ್ಕಿಂತ ಅವರಿಂದ ತಪ್ಪಿಸಿಕೊಂಡು ಹೋಗಲು ನೋಡುವವರು ನೀವಾಗಿರುತ್ತೀರಿ.