ನೀವಿಷ್ಟಪಡುವ ಜಾಕೆಟ್‌ ಧರಿಸಲು ಸಜ್ಜಾದಾಗ ಅದರ Zip ಮುರಿದು ಹೋಗಿರುವುದು, ಅಥವಾ ಕೆಲಸಕ್ಕೆಂದು ಹೊರಟಾಗ ಬಟ್ಟೆಯ Zip ಸ್ಲೈಡರ್ ಕೆಲಸ ಮಾಡದಿರುವುದರಿಂದ ಸಮಸ್ಯೆ ಆಗಿದೆಯೇ? ಅದನ್ನು ಸರಿಪಡಿಸಲು ಹೋಗಿ ನಿರಾಶರಾಗಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. 

ಹೌದು ಹೀಗೆ Zip ಮುರಿದು ಹೋಗುವುದು ಅಥವಾ ಸ್ಲೈಡರ್ ಕೆಲಸ ಮಾಡದಿರುವುದು ಸಾಮಾನ್ಯ. ಆದರೆ ಇದನ್ನು ಸರಿಪಡಿಸಲಾಗದೆ ಹಲವರು ಒದ್ದಾಡುತ್ತಾರೆ. ಹೀಗಿರುವಾಗ ಕೇಲವ 14 ಸೆಕೆಂಡ್‌ನಲ್ಲಿ Zip ಸರಿಪಡಿಸುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈವರೆಗೂ ಈ ವಿಡಿಯೋವನ್ನು ಸುಮಾರು 13 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಲಿವುಡ್ ನಟ ರಯಾನ್ ರೆನಾಲ್ಡ್ಸ್ ಕೂಡಾ ಈ ಐಡಿಯಾಗೆ ಫಿದಾ ಆಗಿದ್ದಾರೆ. 

ಮಂಗಳವಾರದಂದು ರಯಾನ್ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ’ನನ್ನ ಜೀವಮಾನವಿಡೀ ನಾನು ಇದಕ್ಕಾಗಿ ಕಾಯುತ್ತಿದ್ದೆ’ ಎಂದು ಬರೆದಿದ್ದಾರೆ.

14 ಸೆಕೆಂಡ್‌ಗಳ ಈ ವಿಡಿಯೋನಲ್ಲಿ ಈ ಮುರಿದ Zipನ್ನು ಕ್ಷಣ ಮಾತ್ರದಲ್ಲಿ ಹೇಗೆ ಸರಿಪಡಿಸುವುದೆಂದು ತೋರಿಸಲಾಗಿದೆ. ನೀವೂ ಈ ಸುಲಭ ವಿಧಾನ ಬಳಸಿ ತಲೆನೋವು ದೂರ ಮಾಡಿ.