Asianet Suvarna News Asianet Suvarna News

ದಪ್ಪಗಿರೋರು ಏನೇನ್ ತಿನ್ನಬೇಕು?

ಆದರೆ ನಾವು ಏನನ್ನು ತಿಂದರೆ ತೂಕ ಇಳಿಯುತ್ತೆ, ಹೊಟ್ಟೆ ಬೊಜ್ಜು ಕಡಿಮೆಯಾಗುತ್ತೆ ಎಂಬ ಕಲ್ಪನೆ ಹೆಚ್ಚಿನವರಿಗೆ ಇಲ್ಲ. ತೂಕ ಇಳಿಸಬೇಕು ಅನ್ನುವವರಿಗೆ ಇಲ್ಲಿಗೆ ಗೈಡ್‌ಲೈನ್.

what to eat to reduce weight

- ಮಲ್ಲಿಕಾ

ಅಗತ್ಯಕ್ಕಿಂತ ಹೆಚ್ಚು ದಪ್ಪಗಿರುವವರಿಗೆ ತೂಕ ಇಳಿಸಿಕೊಳ್ಳೋದು ಹೇಗೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ನಾವು ತಿನ್ನೋ ಆಹಾರದಲ್ಲೇ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ತೂಕ ಇಳಿಯೋದು ಗ್ಯಾರಂಟಿ. 

ಸಿ.ಆರ್.ಎ.ಪಿ ಬಗ್ಗೆ ಹುಷಾರು!
ಇದೇನು ಹೊಸ ಖಾಯಿಲೆನಾ ಅಂತ ಭಯ ಬೀಳ್ಬೇಡಿ. ಡಯೆಟ್‌ನಲ್ಲಿ ಸ್ಟ್ರಿಕ್ಟ್ ಆಗಿ ದೂರವಿಡಬೇಕಾದ ಆಹಾರ. ಇದರಿಂದ ನಮ್ಮ ದೇಹಕ್ಕೆ ಕಿಂಚಿತ್ ಪ್ರಯೋಜನವೂ ಇಲ್ಲ. ನಾವಿದನ್ನು ನಾಲಿಗೆ ಚಪಲ ತೀರಿಸಲಷ್ಟೇ ತಿನ್ತೀವಿ. ಅಷ್ಟಕ್ಕೂ ಸಿ. ಆರ್.ಎ.ಪಿ ಅಂದ್ರೆ ಇಷ್ಟೆ. ಸಿ ಅಂದರೆ ಕೆಫಿನ್, ಆರ್ ಅಂದರೆ ರಿಫೈಂಡ್ ಸಕ್ಕರೆ, ಎ ಅಂದರೆ ಆಲ್ಕೋಹಾಲ್, ಪಿ ಅಂದರೆ ಪ್ರೊಸೆಸ್‌ಡ್ ಫುಡ್ ಅರ್ಥಾತ್ ಸಂಸ್ಕರಿತ ಆಹಾರ. ಸ್ಲಿಮ್ ಹೊಟ್ಟೆ, ಬಾಗಿ ಬಳುಕುವ ದೇಹ, ಆರೋಗ್ಯ ಇವೆಲ್ಲ ಬೇಕಿದ್ದರೆ ಇವುಗಳನ್ನು ತ್ಯಾಗ ಮಾಡಲೇಬೇಕು. ಈ ಹಾನಿಕರ ಆಹಾರವನ್ನು ತ್ಯಜಿಸದೇ ತೂಕ ಇಳಿಸಿಕೊಳ್ಳಲು ಯಾವ ಕಸರತ್ತು ಮಾಡಿಯೂ ಪ್ರಯೋಜನವಿಲ್ಲ. 

ನಿಮಗೆ ನೀವೇ ಚೀಟ್ ಮಾಡಿದ್ರೆ ಹೆಂಗಿರುತ್ತೆ?
ಡಯೆಟ್ ನಡುವೆ ವಾರಕ್ಕೊಮ್ಮೆ ನಿಮಗೆ ನೀವೇ ಚೀಟ್ ಮಾಡಿ ಮಜವಾಗಿರುತ್ತೆ ಅಂತಾರೆ ಡಯಟಿಷಿಯನ್ಸ್. ಎಂಥಾ ಫಿಟ್‌ನೆಸ್ ಕ್ರೇಜ್ ಇರುವವರೂ ತಮಗೆ ತಾವೇ ಇಂಥದ್ದೊಂದು ಪ್ರಿಯವಾದ ಮೋಸ ಮಾಡಲು ಹಿಂಜರಿಯಲ್ಲ. ದಿನಾ ಅವವೇ ಡಯೆಟ್‌ನಿಂದ ನಮ್ ದೇಹಕ್ಕೂ ಬೋರ್ ಆಗಿರುತ್ತೆ. ವಾರದಲ್ಲಿ ಒಂದು ದಿನ ಚೆನ್ನಾಗಿ ನಿಮಗೆ ಬೇಕಾದ್ದನ್ನೆಲ್ಲ ತಿನ್ನಿ. ಇದರಿಂದ ಮೆಟಬಾಲಿಸಮ್ ಅಂದರೆ ಚಯಾಪಚಯ ಕ್ರಿಯೆ ಚೆನ್ನಾಗಿರುತ್ತೆ.

ಮಾಂಸಾಹಾರಿಗಳು ಮೀನು ಹೆಚ್ಚು ತಿನ್ನಿ
ನಮ್ಮ ದೇಹಕ್ಕೆ ಅತ್ಯಗತ್ಯವಾದ ಅಂಶಗಳು ಮೀನಿನಲ್ಲಿ ಸಮೃದ್ಧವಾಗಿವೆ. ಮೀನನ್ನು ತಿನ್ನುತ್ತಿದ್ದರೆ ಆರೋಗ್ಯ ಚೆನ್ನಾಗಿರುತ್ತೆ. ಹೃದಯ ಸಂಬಂಧಿ ಸಮಸ್ಯೆಗಳು ಬರಲ್ಲ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ. ಬೊಜ್ಜು ಬರಲ್ಲ. ಹೊಟ್ಟೆ, ಸೊಂಟದ ಭಾಗದಲ್ಲಿರುವ ಅನಗತ್ಯಕೊಬ್ಬನ್ನು ನಿವಾರಿಸುತ್ತದೆ.

-ಬೆಳಗಿನ ಉಪಹಾರ ತಪ್ಪಿಸಬೇಡಿ
ಬೆಳಗ್ಗೆ ಎದ್ದ 1 ಗಂಟೆಯೊಳಗೆ ಉಪಹಾರ ಸೇವಿಸಬೇಕು. ಹೆಚ್ಚಿನವರ ಬೆಳಗಿನ ಉಪಹಾರದಲ್ಲಿ ಸತ್ವಯುತ ಅಹಾರ ಇರೋದಿಲ್ಲ. ಕೇವಲ ಹೊಟ್ಟೆ ತುಂಬಿಸಬೇಕೆಂಬ ಉದ್ದೇಶ ಮಾತ್ರ ಇರುತ್ತೆ. ಆದರೆ ಡಯಟಿಷನ್ ಪ್ರಕಾರ ಬ್ರೇಕ್‌ಫಾಸ್ಟ್‌ನಲ್ಲಿ ಇಡೀ ದಿನಕ್ಕೆ ಬೇಕಾಗುವಷ್ಟು ಶಕ್ತಿ ಕೊಡುವ ಪೌಷ್ಠಿಕಾಂಶ ಗಳಿರಬೇಕು.

ರಾತ್ರಿ ಎಂಟರ ನಂತರ ಏನೂ ತಿನ್ನಬೇಡಿ


ರಾತ್ರಿ ಊಟ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಇರಲಿ. ರಾತ್ರಿ ನಿಮ್ಮ ಜೀರ್ಣಕ್ರಿಯೆ ಮುಕ್ತಾಯಗತಿಯಲ್ಲಿರುತ್ತದೆ. ಹಾಗಾಗಿ 8 ಗಂಟೆಯ ನಂತರ  ತಿನ್ನೋದರಿಂದ ಜೀರ್ಣಕ್ರಿಯೆ ಸರಾಗವಾಗಲಿಕ್ಕಿಲ್ಲ. ಅದಕ್ಕಾಗಿ ರಾತ್ರಿ ೮ರ ಮೊದಲೇ ಊಟ ಮುಗಿಸಿ.
 

Follow Us:
Download App:
  • android
  • ios