ಬಾಟಲಿಯಲ್ಲಿರುವ ನೀರನ್ನು ಮಾತ್ರ ನಾವು ಕುಡಿತೇವೆ. ಆದ್ರೆ ಬಾಟಲಿ ಮುಚ್ಚಳದ ಬಣ್ಣವನ್ನು ಗಮನಿಸೋದಿಲ್ಲ. ಬೇರೆ ಬೇರೆ ಬಣ್ಣದ ಮುಚ್ಚಳ ಬೇರೆ ಬೆರೆ ಅರ್ಥ ನೀಡುತ್ತೆ ಅನ್ನೋದು ನಿಮಗೆ ಗೊತ್ತಾ? 

ಮೊದಲೆಲ್ಲ ಮನೆಯಿಂದ ಹೊರಗೆ ಹೋದಾಗ ಇಲ್ಲ ಹೊಟೇಲ್ ಗೆ ಹೋದಾಗ ಅಲ್ಲಿರೋ ನೀರನ್ನೇ ಕುಡಿತಾ ಇದ್ವಿ. ಈಗ ಏನಿದ್ರೂ ಬಾಟಲ್ ನೀರು (water). ಬಹುತೇಕ ಎಲ್ಲರೂ ಬಾಟಲ್ ನೀಡು ಕುಡಿಯೋಕೆ ಇಷ್ಟಪಡ್ತಾರೆ. ಅದು ಸುರಕ್ಷಿತ ಎನ್ನುವ ನಂಬಿಕೆ ನಮ್ಮಲ್ಲಿದೆ. ಭಾರತದಲ್ಲಿ 1970ರಲ್ಲಿ ಬಾಟಲಿಯಲ್ಲಿ ನೀರನ್ನು ತುಂಬಿ ಮಾರಾಟ ಮಾಡುವ ವ್ಯವಹಾರ ಶುರು ಆಯ್ತು. ಆರಂಭದಲ್ಲಿ ಇದಕ್ಕೆ ಬೇಡಿಕೆ ಕಡಿಮೆ ಇತ್ತು. ಈಗ ಬಹುಬೇಡಿಕೆಯಲ್ಲಿರುವ ಉದ್ಯಮಗಳಲ್ಲಿ ಇದೂ ಒಂದು. ಅನೇಕ ಕಂಪನಿಗಳು ನೀರನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡ್ತಿವೆ. ಅಂಗಡಿಗೆ ಹೋಗಿ ನಾವು ನೀವೆಲ್ಲ ನೀರಿನ ಬಾಟಲಿ ಖರೀದಿ ಮಾಡ್ತೇವೆ. ನೀರು ಕುಡಿದು, ಬಾಟಲಿ ಕಸಕ್ಕೆ ಹಾಕ್ತೇವೆ. ಬಾಟಲಿ ಮುಚ್ಚಳದ ಬಗ್ಗೆ ಹೆಚ್ಚು ಗಮನ ಕೊಡೋದಿಲ್ಲ.

ನೀವು ಸರಿಯಾಗಿ ಗಮನಿಸಿದ್ರೆ ನಿಮಗೆ ಬಾಟಲಿ ಮುಚ್ಚಳದ ಬಣ್ಣಗಳು ಭಿನ್ನವಾಗಿರೋದು ಗೊತ್ತಾಗುತ್ತೆ. ಕೆಲ ಬಾಟಲಿ ಮುಚ್ಚಳ ಬಿಳಿ ಬಣ್ಣದಲ್ಲಿದ್ರೆ ಮತ್ತೆ ಕೆಲವು ನೀಲಿ, ಹಸಿರು, ಕೆಂಪು, ಹಳದಿ ಹೀಗೆ ಬೇರೆ ಬೇರೆ ಬಣ್ಣದಲ್ಲಿ ಇರುತ್ವೆ. ಇನ್ಮುಂದೆ ನೀರಿನ ಬಾಟಲಿ ಖರೀದಿ ಮಾಡಿದಾಗ ಅದ್ರ ಮುಚ್ಚಳದ ಬಣ್ಣ ಗಮನಿಸಿ. ಸುಮ್ಮನೆ ಫ್ಯಾಷನ್ ಗೆ ಕಂಪನಿಗಳು ಬಾಟಲಿ ಮುಚ್ಚಳಕ್ಕೆ ವೆರೈಟಿ ಬಣ್ಣ ನೀಡೋದಿಲ್ಲ. ನೀರಿನ ಬಾಟಲಿ ಮುಚ್ಚಳದ ಬಣ್ಣ ಭಿನ್ನವಾಗಿರುವುದರ ಹಿಂದೆ ಮಹತ್ವದ ಕಾರಣ ಇದೆ. ಬಾಟಲಿಯಲ್ಲಿ ಯಾವ ನೀರಿದೆ ಎಂಬುದನ್ನು ಮುಚ್ಚಳದ ಬಣ್ಣ ಹೇಳುತ್ತೆ. ನಾವಿಂದು ಯಾವ ಬಣ್ಣದ ಮುಚ್ಚಳ ಇರೋ ಬಾಟಲಿಯಲ್ಲಿ ಯಾವ ನೀರಿರುತ್ತೆ ಅನ್ನೋದನ್ನು ಹೇಳ್ತೇವೆ.

ವಾಟರ್ ಬಾಟಲ್ ಮುಚ್ಚಳದ ಬಣ್ಣ (water bottle cap Color ) ಹಾಗೂ ಅರ್ಥ :

ಕಪ್ಪು ಮುಚ್ಚಳ ( ಕ್ಷಾರೀಯ ನೀರು) : ನೀರಿನ ಬಾಟಲಿ ಕ್ಯಾಪ್ ಕಪ್ಪಾಗಿದ್ದರೆ ಅದರ ಒಳಗೆ ಅಲ್ಕಲೈನ್ ನೀರನ್ನು ಕಾಣಬಹುದು. ಅಲ್ಕಲೈನ್ ನೀರು ಹೆಚ್ಚಿನ Ph ಮಟ್ಟಕ್ಕೆ ಹೆಸರುವಾಸಿಯಾಗಿದೆ. ಇದು ದೇಹದಲ್ಲಿನ ಆಮ್ಲೀಯತೆಯನ್ನು ಪ್ರತಿರೋಧಿಸುತ್ತದೆ. ಅತಿ ಹೆಚ್ಚು ಆರೋಗ್ಯ ಪ್ರಯೋಜ ಇದ್ರಲ್ಲಿದೆ.

ನೀಲಿ ಬಣ್ಣದ ಕ್ಯಾಪ್ ( ನ್ಯಾಚುರಲ್ ವಾಟರ್) : ನೀಲಿ ಮುಚ್ಚಳ ಹೊಂದಿರುವ ಬಾಟಲಿಯಲ್ಲಿ ನೈಸರ್ಗಿಕ ನೀರಿದೆ ಎಂದರ್ಥ. ಸ್ಪ್ರಿಂಗ್ ನೀರು ಶುದ್ಧತೆ ಮತ್ತು ಖನಿಜ-ಸಮೃದ್ಧ ಎನ್ನಲಾಗುತ್ತದೆ. ಇದನ್ನು ಮಣ್ಣಿನಿಂದ ಪಡೆಯಲಾಗುತ್ತದೆ.

ಬಿಳಿ ಬಣ್ಣದ ಮುಚ್ಚಳ ( ಸಂಸ್ಕರಿಸಿದ ನೀರು) : ಸಂಸ್ಕರಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನು ಬಿಳಿ ಮುಚ್ಚಳ ಇರುವ ಬಾಟಲಿಯಲ್ಲಿ ಹಾಕಲಾಗುತ್ತದೆ. ಮಾಲಿನ್ಯಕಾರಕಗಳನ್ನು ತೆಗೆಯಲು ನೀರನ್ನು ಫಿಲ್ಟರ್ ಮಾಡಲಾಗುತ್ತದೆ.

ಹಸಿರು ಬಣ್ಣದ ಮುಚ್ಚಳ (ಸುವಾಸನೆಯ ನೀರು) : ನೀರಿನ ಬಾಟಲಿಯ ಮೇಲೆ ಹಸಿರು ಮುಚ್ಚಳವಿದ್ದರೆ ನೀರಿಗೆ ಪರಿಮಳವನ್ನು ಸೇರಿಸಲಾಗಿದೆ ಎಂದರ್ಥ.

ಕೆಂಪು ಮುಚ್ಚಳ ಇರುವ ಬಾಟಲಿ (ಎಲೆಕ್ಟ್ರೋಲೈಟ್-ವರ್ಧಿತ ನೀರು) : ಕೆಂಪು ಮುಚ್ಚಳದ ವಾಟರ್ ಬಾಟಲಿಯಲ್ಲಿ ಎಲೆಕ್ಟ್ರೋಲೈಟ್ ವರ್ಧಿತ ನೀರು ಇರುತ್ತದೆ. ಎಲೆಕ್ಟ್ರೋಲೈಟ್-ಇನ್ಫ್ಯೂಸ್ಡ್ ನೀರು ಹೈಡ್ರೇಷನ್ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಮಾಡುತ್ತದೆ. ಇದು ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಪ್ರಿಯರಿಗೆ ಜನಪ್ರಿಯ ಆಯ್ಕೆಯಾಗಿದೆ.

ಹಳದಿ ಮುಚ್ಚಳ ಇರುವ ಬಾಟಲಿ (ವಿಟಮಿನ್ ನೀರು) : ಹಳದಿ ಕ್ಯಾಪ್ ಹೊಂದಿರುವ ನೀರಿನಲ್ಲಿ ವಿಟಮಿನ್ ಇರುತ್ತದೆ. ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳು ಇದ್ರಲ್ಲಿರುತ್ತದೆ. ವಿಟಮಿನ್ ಸಿ ಯಿಂದ ಬಿ-ಕಾಂಪ್ಲೆಕ್ಸ್ ಮಿಶ್ರಣ ಹೊಂದಿರುವ ಇದನ್ನು ದೈನಂದಿನ ಪೌಷ್ಟಿಕಾಂಶ ಹೆಚ್ಚಿಸಲು ಮತ್ತು ಬಾಯಾರಿಕೆಯನ್ನು ನೀಗಿಸಲು ತಯಾರಿಸಲಾಗಿದೆ.