Asianet Suvarna News Asianet Suvarna News

ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?

ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತಾರೆ. ಆದರೆ ಈ ಮಾತು ಪೂರ್ತಿ ಸರಿಯಲ್ಲ ಅನ್ನುತ್ತದೆ ಇತ್ತೀಚಿನ ಅಧ್ಯಯನ. 

What should be the age gap between couples?
Author
Bengaluru, First Published Sep 24, 2018, 1:28 PM IST
  • Facebook
  • Twitter
  • Whatsapp

ಅಟ್ಲಾಂಟಾ ಯುನಿವರ್ಸಿಟಿ ನಡೆಸಿದ ಸಂಶೋಧನೆ ಪ್ರಕಾರ ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಡಿವೋರ್ಸ್ ಸಾಧ್ಯತೆ ಹೆಚ್ಚು. ವಿವಿಧ ವಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನಡೆಯಿತು. ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.

ರಾಧಿಕಾ ಕುಮಾರಸ್ವಾಮಿ ಅವತಾರ ನೋಡಿ ಬೆಚ್ಚಿದಳಂತೆ ಮಗಳು ಶಮಿಕಾ!

ಅದೇ ವಯಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಈ ಅನ್ಯೋನ್ಯತೆ ಇರಲ್ಲ. 5 ರಿಂದ 10 ವರ್ಷದ ಗ್ಯಾಪ್‌ನಲ್ಲಂತೂ ಸಾಮರಸ್ಯ ಬಹಳ ಕಡಿಮೆ. ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಗಳಲ್ಲಿ ವಿರಸ ಹೆಚ್ಚು, ಸಮರಸ ಕಡಿಮೆ ಅಂತ ಈ ಸಂಶೋಧನೆ ಹೇಳುತ್ತೆ.

ಸಿನಿ ಕ್ಷೇತ್ರದ ಸ್ಟಾರ್ ದಂಪತಿಯ ವಯಸ್ಸಿನ ಅಂತರವೆಷ್ಟು?

ಇದಕ್ಕೆ ಅಪವಾದದಂತಿರುವ ಎಷ್ಟೋ ಜೋಡಿ ಭಾರತದಲ್ಲಿ ಸಿಗಬಹುದು. ಆದರೆ ಇದು ಈ ಕಾಲದ ಜೋಡಿಗಳ ಕತೆ. ಅದೇ ರೀತಿ ಮಗುವಿಲ್ಲದ ಜೋಡಿಗಳು ಬೇಗ ಸಪರೇಟ್ ಆಗ್ತಾರೆ. ಮಗುವಿರುವವರು ಬೇರ್ಪಡುವ ಬಗ್ಗೆ ಕೊಂಚ ಯೋಚಿಸುತ್ತಾರೆ ಅನ್ನುವ ವಿವರಗಳೂ ಈ ಸಂಶೋಧನೆಯಿಂದ ಲಭ್ಯವಾಗಿವೆ.

Follow Us:
Download App:
  • android
  • ios