ಜೀವನ ಸಂಗಾತಿಯೇ ಬೆಸ್ಟ್ ಫ್ರೆಂಡ್ ಆದರೆ....?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 4:30 PM IST
What if life partner is your best friend?
Highlights

ಲವ್ವಾಗೋದು ಎಲ್ಲರ ಜೀವನದ ಅತ್ಯದ್ಭುತ ಅನುಭವ. ಅದರಲ್ಲೂ ನಿಮ್ಮ ಬೆಸ್ಟ್ ಫ್ರೆಂಡ್‌ನನ್ನು ಲವ್ ಮಾಡಿದ್ರೆ ನಿಮ್ಮ ಜೀವನ ಸುಂದರ ನೆನಪುಗಳನ್ನು ಹೊತ್ತು ಸಾಗುವ ಅಂಬಾರಿ ಆಗುತ್ತೆ.  ಫ್ರೆಂಡ್‌ನನ್ನೇ ಮದುವೆಯಾದರೆ ಜೀವನ ಚೆಂದ ಅನಿಸಬಹುದು. ನಿಮ್ಮ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡಿರುವ, ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ವ್ಯಕ್ತಿ ಲೈಫ್ ಲಾಂಗ್ ನಿಮ್ಮ ಜೊತೆಯಿದ್ದರೆ ಎಷ್ಟು ಚೆಂದ ಅಲ್ಲವೇ? ಇಂಥದ್ದೊಂದು ಜೀವನ ಹೇಗೆ ಸುಂದರವಾಗಿರಬಲ್ಲದು...

ಜೀವನದಲ್ಲಿ ಅತ್ಯಂತ ಕ್ಲಿಷ್ಟಕರ ಎಕ್ಸಾಮ್ ಎಂದರೆ ಜೀವನದ ಸಂಗಾತಿಯನ್ನು ಆರಿಸಿಕೊಳ್ಳುವುದು. ಹಿಂದು ಮುಂದು ಗೊತ್ತಿಲ್ಲದವರನ್ನು ಸಂಗಾತಿಯನ್ನಾಗಿ ಸ್ವೀಕರಿಸುತ್ತಾರೆ. ಆದರೆ, ಯಶಸ್ವಿಯಾಗುತ್ತಾರೋ, ಬಿಡುತ್ತಾರೆ ಗೊತ್ತಾಗೋಲ್ಲ. ಬದಲಾಗಿ ಗೊತ್ತಿದ್ದವರನ್ನೇ ಮದುವೆಯಾದರೇ? ಲೈಫ್ ನಿಜವಾಗಲೂ ಸುಮಧುರವಾಗಿರುತ್ತದೆ. ಏಕೆ?

  • ನಿಮ್ಮ ಜೀವನದಲ್ಲಿ ಮೋಜು, ಮಸ್ತಿ ಎಲ್ಲವೂ ಇರುತ್ತದೆ. ಒಬ್ಬರ ಇಷ್ಟ ಕಷ್ಟಗಳು ಮತ್ತೊಬ್ಬರಿಗೆ ಗೊತ್ತಿರೋದ್ರಿಂದ ಸಂತೋಷವಾಗಿ ಬಾಳೋದು ಖಂಡಿತ. 
  • ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಒಬ್ಬರಿಗೊಬ್ಬರು ತಿಳಿದಿರುತ್ತವೆ. ಆದ್ದರಿಂದ ಸಂಶಯ, ಅನುಮಾನಗಳು ಕಾಡೋವ ಸಾಧ್ಯತೆಗಳು ಕಡಿಮೆ.
  • ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಚೆನ್ನಾಗಿ ಗೊತ್ತಿರೋದ್ರಿಂದ ಅರ್ಥ ಮಾಡಿಕೊಳ್ಳಲು ಸುಲಭ. ನೀವು ಏನೇ ಮಾಡಿದರೂ ಅದನ್ನು ಯಾಕಾಗಿ ಮಾಡಿರುತ್ತೀರಿ ಅನ್ನೋದು ಅವರಿಗೆ ಗೊತ್ತಿರುತ್ತದೆ. 
  • ಇಬ್ಬರಲ್ಲೂ ತುಂಟಾಟಕ್ಕೆ ಕೊರತೆ ಇರೋದಿಲ್ಲ. ಪ್ರೀತಿಗೆ ಬರ ಇರೋದಿಲ್ಲ. ಇಬ್ಬರ ನಡುವೆ ಅಡೆತಡೆ ಇಲ್ಲದ ಪ್ರೀತಿ ಅಗಾಧ ಪ್ರೀತಿ ಇರುತ್ತದೆ. 
  • ಪ್ರತಿದಿನ ಮಾತನಾಡಲು ಅಥವಾ ಕೇಳಿಸಿಕೊಳ್ಳುವ ವಿಷಯಕ್ಕೆ ಬರ ಇರೋಲ್ಲ. 
  • ನಿಮ್ಮ ಬಗ್ಗೆ ನಿಮಕ್ಕಿಂತ ಹೆಚ್ಚಾಗಿ ಅವರಿಗೆ ತಿಳಿದಿರುತ್ತದೆ. ಸಣ್ಣ ಪುಟ್ಟ ತಪ್ಪಾದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ನೀವು ಏನು ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. 
  • ಜಗಳ ಆದ್ರೂ ಬೇಗ ಸರಿ ಆಗತ್ತೆ. ಇಬ್ಬರ ನಡುವೆ ಸಾಕಷ್ಟು ಜಗಳ ಆಗಬಹುದು. ಆದರೆ ಇದು ಯಾವತ್ತೂ ವಿಪರೀತಕ್ಕೆ ಹೋಗೋದಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಒಂದಾಗುವ ಚಾನ್ಸ್ ಜಾಸ್ತಿ ಇದೆ. 
  • ನೀವು ಏನೇ ಕನಸು ಕಂಡರೂ ಅದನ್ನು ನನಸಾಗಿಸಲು ಹೆದರಬೇಕಿಲ್ಲ. ಯಾಕೆಂದರೆ ನಿಮ್ಮ ಸಂಗಾತಿಯಾಗಿರುವುದು ನಿಮ್ಮ ಬೆಸ್ಟ್ ಫ್ರೆಂಡ್. ನಿಮ್ಮ ಎಲ್ಲಾ ಹುಚ್ಚು ಕನಸನ್ನು ಅವರು ಖಂಡಿತಾ ಈಡೇರಿಸುತ್ತಾರೆ. 
loader