ಅತಿ ಹೆಚ್ಚಿನ ಸೆಕ್ಸ್ ತಂದೊಡ್ಡುವ 7 ಅಪಾಯಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Sep 2018, 9:41 PM IST
what happens when you have too much sex 7 reasons
Highlights

ಲೈಂಗಿಕತೆ ಅಥವಾ ಸೆಕ್ಸ್ ಮಾನವನ ಜೀವನದ ಅಗತ್ಯಗಳಲ್ಲಿ ಒಂದು. ಆದರೆ ಅದೇ ಲೈಂಗಿಕತೆ ಅತಿಯಾದರೆ ಏನಾಗುತ್ತದೆ? ಬಹಳಷ್ಟು ಜನರಿಗೆ ಗೊತ್ತಿರದೆ  ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ...

ಪ್ರಾಣಿಗಳಲ್ಲಿ ಋತುಮಾನಕ್ಕೆ ಅನುಗುಣವಾಗಿ ಕಾಮಾಸಕ್ತಿ ಕೆರಳಿದರೆ ಮನುಷ್ಯನಲ್ಲಿ ಮಾುತ್ರ ನಿರಂತರ. ಸೆಕ್ಸ್ ನಿಂದಾಗಿ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳೂ ಕೂಡ ಇದೆ. ಲೈಂಗಿಕ ಕ್ರಿಯೆ ವೇಳೆ ಆಗುವಂತಹ ಚಟುವಟಿಕೆಗಳಿಂದ ದೇಹದಲ್ಲಿ ಕೆಲವೊಂದು ಹಾರ್ಮೋನುಗಳ ಬಿಡುಗಡೆಯಿಂದ ಒತ್ತಡ ನಿವಾರಣೆಯಾಗುವುದು. ಹಾಗಾದರೆ ಇದು ಅತಿಯಾದರೆ ಏನಾಗುತ್ತದೆ?

ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ಎಷ್ಟು ಸಲ ನಡೆಸುತ್ತೀರಿ ಎನ್ನುವುದನ್ನು ತಿಳಿದುಕೊಂಡು ನಿಮ್ಮ ಲೈಂಗಿಕ ಜೀವನವನ್ನು ಮತ್ತಷ್ಟು ಸುಗಮವಾಗಿಸಿ ಕೊಳ್ಳಬಹುದು. ಆದರೆ ಅತಿಯಾದರೆ ದೇಹದ ಮೇಲೆ, ಆರೋಗ್ಯದ ಮೇಲೆ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾದರೆ ಏನು ಸಮಸ್ಯೆ ಎದುರಾಗಬಹುದು?

ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?

 1. ಬಳಲಿಕೆ  ಮತ್ತು ಸುಸ್ತು: ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ದೇಹವು ನೊರ್ಪಿನ್ಫ್ರಿನ್, ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ನ್ನು ಬಿಡುಗಡೆ ಮಾಡುವುದು. ಇದರಿಂದ ಹೃದಯಬಡಿತ ಹೆಚ್ಚಾಗುವುದು, ಗ್ಲೂಕೋಸ್ ಚಯಾಪಚಯ ಮತ್ತು ರಕ್ತದೊತ್ತಡವು ಹೆಚ್ಚಾಗುವುದು. ನಿಯಮಿತವಾಗಿ ಇದನ್ನು ಮಾಡಿದರೆ ಆಗ ಇದು ದೇಹಕ್ಕೆ ವ್ಯಾಯಾಮ ಹೆಚ್ಚಾದರೆ ಆಯಾಸ ಖಂಡಿತ.

 2. ಗೀಳಾಗಬಹುದು:  ಅತಿ ಹೆಚ್ಚಿನ ಲೈಂಗಿಕತೆ  ಗೀಳಾಗಿ ಪರಿವರ್ತನೆಯಾಗಬಹುದು. ಒಬ್ಬರಿಗೆ ಬೇಕಿದ್ದು ಇನ್ನೊಬ್ಬರಿಗೆ ಬೇಡವಾದ ಸಂದರ್ಭ ಎದುರಾದರೆ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಬಹುದು.

3. ಊದಿಕೊಳ್ಳುವ ಶಿಶ್ನ: ಲೈಂಗಿಕ ಕ್ರಿಯೆ ಬಳಿಕ ಕೆಲವು ಪುರುಷರ ಶಿಶ್ನದಲ್ಲಿ ಕೆಲವು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುವಂತಹ ನೋವು ಸಾಮಾನ್ಯವಾಗಿರುವುದು. ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದರೆ ಆಗ ಸ್ವ ಉತ್ತೇಜನ ಮತ್ತು ಒತ್ತಾಯ ಪೂರ್ವಕವಾಗಿ ಸ್ಖಲನ ಮಾಡುವುದರಿಂದ ಶಿಶ್ನದಲ್ಲಿ ಊತ ಕಾಣಿಸಿಕೊಳ್ಳುವುದು..

4. ಮಹಿಳೆಯರಲ್ಲಿ ಉರಿಯೂತ ಮತ್ತು ಊರಿ ಮೂತ್ರ:  ಅತಿಯಾದ ಸೆಕ್ಸ್ ನಿಂದಾಗಿ ಯೋನಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರ ಆರೋಗ್ಯದ ಮೇಲೂ ಇದು ಪರಿಣಾಮ ಉಂಟುಮಾಡಬಲ್ಲದು. ಯೋನಿಯ ಗೋಡೆಗಳಿಗೆ ಹಾನಿಯಾದರೆ ಮಹಿಳೆಯರು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ.

5.ಬೆನ್ನು ನೋವು: ವಿಪರೀತ ಬೆನ್ನು ನೋವಿಗೂ ಅತಿಯಾದ ಸೆಕ್ಸ್ ಕಾರಣವಾಗುತ್ತದೆ. ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

6. ರೋಗಗಳ ಅಪಾಯ: ಲೈಂಗಿಕವಾಗಿ ಹೆಚ್ಚು ಕ್ರಿಯಾತ್ಮಕವಾಗಿರುವಂತಹ ಮಹಿಳೆಯರು ಬಲು ಬೇಗ ರೋಗಕ್ಕೆ ತುತ್ತಾಗುವ ಅಪಾಯ ಇರುತ್ತದೆ. ಅಲ್ಲದೇ  ಬ್ಯಾಕ್ಟೀರಿಯಾ ಸಮಸ್ಯೆಗೂ ಗುರಿಯಾಗಬಹುದು.

7. ಆಸಕ್ತಿ ಕುಂಠಿತ:  ನಿರಂತರ ಲೈಂಗಿಕ ಕ್ರಿಯೆ ಸ್ವಾದ ಕಡಿಮೆ ಮಾಡಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಬಹುದು. ನೂರಾರು ಕನಸುಗಳನ್ನು ಇಟ್ಟುಕೊಂಡವರಿಗೆ  ಅಂತ್ಯದಲ್ಲಿ ಭ್ರಮನಿರಸನ  ಉಂಟಾಗಬಹುದು.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

loader