Real Story: 'ನನ್ನ ಶವ ನನಗೆ ಕಾಣ್ತಿತ್ತು' ಸಾವು ಗೆದ್ದು ಬಂದವರು!
ಸತ್ತ ಮೇಲೆ ಏನಾಗ್ತೇವೆ? ಈ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಆದ್ರೆ ಕೆಲವರ ಅನುಭವದ ಮೂಲಕ ತಜ್ಞರು ತಮ್ಮದೆ ತರ್ಕವನ್ನು ಮುಂದಿಡುತ್ತಾರೆ. ಈಗ ಕೆಲವೊಂದಿಷ್ಟು ಜನರು ತಮಗಾದ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ.
ಹುಟ್ಟು – ಸಾವಿನ ಬಗ್ಗೆ ಯಾರಿಗೂ ಸರಿಯಾಗಿ ತಿಳಿದಿಲ್ಲ. ಸಾವಿನ ನಂತ್ರ ಏನಾಗ್ತಾರೆ ಎಂಬ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಸತ್ತ ನಂತ್ರ ನರಕ ಸೇರ್ತಾರೆ, ಸ್ವರ್ಗ (heaven) ಸೇರ್ತಾರೆ, ಆತ್ಮ ಬೇರೆಯಾಗುತ್ತೆ ಹೀಗೆ ಅನೇಕ ವಿಷ್ಯಗಳನ್ನು ನಾವು ಕೇಳಿರ್ತೇವೆ. ಆದ್ರೆ ಇದ್ರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಯಾರಿಂದಲೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಪುರಾಣಗಳಲ್ಲೂ ಸತ್ತ ನಂತ್ರ ಏನು ಎನ್ನುವ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಅನೇಕ ಆಧ್ಯಾತ್ಮಿಕ ತಜ್ಞರೂ ಈ ಬಗ್ಗೆ ಹೇಳ್ತಾರೆ. ಆದ್ರೆ ಜನರಿಗೆ ಮಾತ್ರ ಇದ್ರ ಬಗ್ಗೆ ಸ್ಪಷ್ಟ ಪುರಾವೆ ಸಿಗ್ತಿಲ್ಲ. ಈಗ ರೆಡ್ಡಿಟ್ ಥ್ರೆಡ್ ಸತ್ತ ನಂತ್ರ ಏನಾಗ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಸಿತ್ತು. ಸಾವು ಗೆದ್ದು ಬಂದ ಅನೇಕ ಜನರ ಅಭಿಪ್ರಾಯವನ್ನು ರೆಡ್ಡಿಟ್ ಥ್ರೆಡ್ ಸಂಗ್ರಹಿಸಿದೆ. ಮೆಡಿಕಲ್ ರೂಪದಲ್ಲಿ ಸಾವನ್ನಪ್ಪಿ ಮತ್ತೆ ಬದುಕಿದ ಅನೇಕರ ಅನುಭವವನ್ನು ಸಂಗ್ರಹಿಸಿದೆ. ಇಂದು ನಾವು ಸತ್ತು ಮತ್ತೆ ಎದ್ದು ಬಂದವರ ಅನುಭವವನ್ನು ನಿಮಗೆ ಹೇಳ್ತೇವೆ.
ರೆಡ್ಡಿಟ್ ಥ್ರೆಡ್ ಜನರನ್ನು ಮೂರು ಭಾಗಗಳಾಗಿ ವಿಂಗಡಿಸಿತ್ತು. ಸ್ವಲ್ಪವೂ ಅನುಭವವಾಗದ ಜನರು, ಸತ್ತ ನಂತ್ರ ಬೇರೆ ವ್ಯಕ್ತಿಗಳ ಜೊತೆ ಮಾತನಾಡ್ತಿದ್ದ ಜನ ಹಾಗೂ ವಿಚಿತ್ರ ಬೆಳಕು ಕಂಡ ಜನ.
ಕಣ್ಣಿನ ಮುಂದೆ ಸಂಪೂರ್ಣ ಕತ್ತಲು ಆವರಿಸಿತ್ತು : ವ್ಯಕ್ತಿಯೊಬ್ಬ ಆಂಜಿಯೋಗ್ರಫಿ ಮಾಡಿಸಿಕೊಳ್ತಿದ್ದನಂತೆ. ಮೆಷಿನ್ ಸ್ಕ್ರೀನ್ ನೋಡ್ತಾ ವೈದ್ಯರ ಬಳಿ ಮಾತನಾಡ್ತಿದ್ದನಂತೆ. ನಿಧಾನವಾಗಿ ಮೆಷಿನ್ ಶಬ್ಧ ಬಂದ್ ಆದ ಅನುಭವವಾಯ್ತು. ಅಕ್ಕಪಕ್ಕದಲ್ಲಿದ್ದವರು ಗಾಬರಿಯಾಗ್ತಿದ್ದರು. ಕಣ್ಣಿನ ಮುಂದಿದ್ದ ಜಗತ್ತು ಮರೆಯಾಗ್ತಿತ್ತು. ಸಂಪೂರ್ಣ ಕತ್ತಲು ಆವರಿಸಿತ್ತು. ಆ ನಂತ್ರ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ಎಚ್ಚರವಾದಾಗ ವೈದ್ಯರು, ನಾನು ಅವರನ್ನು ಬದುಕಿಸಿದ್ದೇವೆ ಎಂಬ ಮಾತು ನನಗೆ ಕೇಳಿಸ್ತು. ನೆಮ್ಮದಿಯಾಯ್ತು ಎನ್ನುತ್ತಾನೆ ಸತ್ತು ಬದುಕಿಬಂದ ವ್ಯಕ್ತಿಯೊಬ್ಬ.
Health Benefits: ಕಸಕ್ಕೆ ಹಾಕೋ ಈರುಳ್ಳಿ – ಬೆಳ್ಳುಳ್ಳಿ ಸಿಪ್ಪೆಯಲ್ಲಿದೆ ಔಷಧಿ ಗುಣ
ರಂಧ್ರದ ಕೆಳಗೆ ಬಿದ್ದ ಅನುಭವ : ಕ್ಲಾಸ್ ನಲ್ಲಿ ಪ್ರಸಂಟೇಷನ್ ನೀಡುವಾಗ ಕೆಳಗೆ ಬಿದ್ದಿದ್ದ ವ್ಯಕ್ತಿಯ ಉಸಿರು ನಿಂತಿತ್ತು. ಬ್ಲಡ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಾನು ಒಂದು ರಂಧ್ರದೊಳಗೆ ಹೋಗ್ತಿದ್ದೇನೆ. ನನ್ನ ಸಹಪಾಠಿಗಳು ನನ್ನ ರಕ್ಷಣೆ ಮಾಡುವಂತೆ ಕೂಗ್ತಿದ್ದಾರೆಂಬ ಅನುಭವ ನನಗಾಯ್ತು ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾನೆ. ನನಗೆ ಮತ್ತೆ ಎಚ್ಚರವಾದಾಗ ಇದೆಲ್ಲ ಒಂದು ಕನಸಿನಂತೆ ನನಗೆ ಭಾಸವಾಗಿತ್ತು ಎನ್ನುತ್ತಾರೆ ಆ ವ್ಯಕ್ತಿ.
ನನ್ನ ಶವ ನನಗೆ ಕಾಣಿಸಿತ್ತು : 2014ರಲ್ಲಿ ನಾನು ಮೀಟಿಂಗ್ ಒಂದರ ಸಂದರ್ಭದಲ್ಲಿ ಕುಸಿದು ಬಿದ್ದಿದ್ದೆ. ಐದು ನಿಮಿಷದವರೆಗೆ ನನ್ನ ಹಾರ್ಟ್ ರೇಟ್ ಹಾಗೂ ಪಲ್ಸ್ ರೇಟ್ ಬಂದ್ ಆಗಿತ್ತು. ನಾನು ಬೀಳುವ ಮೊದಲು ಹಾಗೂ ನಂತ್ರ ಎರಡು ದಿನ ಏನಾಯ್ತು ಎಂಬುದೇ ಸರಿಯಾಗಿ ನೆನಪಿಲ್ಲ. ನಾನು ವೈದ್ಯರ ಪ್ರಕಾರ ಕೋಮಾಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ನನಗಾದ ಅನುಭವ ವಿಚಿತ್ರವಾಗಿತ್ತು ಎನ್ನುತ್ತಾರೆ ಆ ವ್ಯಕ್ತಿ.
ಮಳೆಗಾಲದಲ್ಲಿ ಕಣ್ಣಿನ ಬಗ್ಗೆಯೂ ಇರಲಿ ಕಾಳಜಿ!
ನನ್ನನ್ನು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಸಂದರ್ಭ ನನಗೆ ನೆನಪಿದೆ. ನನ್ನ ದೇಹವನ್ನು ನಾನು ಆಂಬ್ಯುಲೆನ್ಸ್ ನಲ್ಲಿ ನೋಡಿದ್ದೆ. ಇದ್ರ ನಂತ್ರ ನನ್ನ ಕಣ್ಣ ಮುಂದೆ ದೊಡ್ಡದೊಂದು ಬೆಳಕು ಕಾಣಿಸ್ತಾಯಿತ್ತು. ಅದ್ರ ನಂತ್ರ ಮಂಜು ಆವರಿಸಿತ್ತು. ಅಲ್ಲಿ ನನ್ನ ಆಪ್ತ ಗೆಳೆಯ ಕಾಣಿಸಿದ. ಮಂಜಿನಿಂದ ಹೊರ ಬಂದ ಸ್ನೇಹಿತ, ನನಗೆ ಇನ್ನೂ ವಾಪಸ್ ಹೋಗಲು ಸಾಧ್ಯವಾಗಿಲ್ಲ, ನೀನು ಪ್ರಯತ್ನಿಸಿದ್ರೆ ವಾಪಸ್ ಭೂಮಿಗೆ ಹೋಗಲು ಸಾಧ್ಯ ಎಂದು ಹೇಳಿದ್ದನಂತೆ. ಆ ನಂತ್ರ ನಾನು ಸೋಲಲಿಲ್ಲ. ವಾಪಸ್ ನನ್ನ ದೇಹಕ್ಕೆ ಬಂದೆ. ಆಗ ನನಗೆ ಎಚ್ಚರವಾಯ್ತು. ನಾನು ಸಾವನ್ನಪ್ಪಿದ್ದೆ ಎಂದು ನನ್ನ ತಾಯಿ ನನಗೆ ಹೇಳಿದ್ದಳು ಎಂದು ಆ ವ್ಯಕ್ತಿ ಅನುಭವ ಹಂಚಿಕೊಂಡಿದ್ದಾನೆ.