'ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ...' ಎಂದಿದ್ದಾರೆ ದಾಸರು. 'ಉದರ ನಿಮಿತ್ತಂ ಬಹುಕೃತ ವೇಷಂ..' ಅಂತಾನೂ ಹೇಳುವುದು ಹೊಟ್ಟೆ ಪಾಡಿಗಾಗಿ ಮನುಷ್ಯ ಏನೇನು ಮಾಡುತ್ತಾನೆಂಬುದನ್ನು ಹೇಳುತ್ತದೆ. ಇದೇ ಊಟ ಮಾಡುವ ಹಾಗೂ ತಟ್ಟೆಗೆ ಹಾಕಿ ಕೊಳ್ಳುವ ಮನುಷ್ಯನ ವ್ಯಕ್ತಿತ್ವವನ್ನೂ ಬಹಿರಂಗಪಡಿಸುತ್ತದೆ ಗೊತ್ತಾ?

ತನಗಾಗಿ, ತನ್ನ ಹೊಟ್ಟೆ ತುಂಬಿಸಿಕೊಳ್ಳಲು, ತನ್ನ ಸಂಸಾರದ ಹೊಟ್ಟೆ ತುಂಬಿಸಲು ದುಡಿಯುವ ಮನುಷ್ಯ, ಕೆಲವೊಮ್ಮೆ ಮತ್ತೊಬ್ಬರ ಹೊಟ್ಟೆ ತುಂಬಿಸುವಷ್ಟು ವಿಶಾಲ ಹೃದಯಿಯಾಗಿರುತ್ತಾನೆ. 

ಫಳ ಫಳ ಹೊಳೆಯೋ ತ್ವಚೆಗೆ ಬ್ಲ್ಯಾಕ್ ಫುಡ್....

ನೋಡಿದವರು ಏನು ಇವರು ಬರೀ ತಿನ್ತಾನೇ ಇರುತ್ತಾರೆ? ಎಂದೆಲ್ಲಾ ಹೇಳಿ ತಿನ್ನೋರ ಮೇಲೆ ಕಣ್ಣು ಹಾಕುತ್ತಾರೆ. ಏಕೆಂದರೆ ತಿನ್ನೋ ತಟ್ಟೆಯಿಂದಾನೇ ಮನುಷ್ಯನ ವ್ಯಕ್ತಿತ್ವ ಹೇಗಿದೆ, ಅವನು ಯಾವ ವಿಷ್ಯದಲ್ಲಿ ಸ್ಟ್ರಾಂಗ್, ಮತ್ಯಾವ ವಿಷ್ಯದಲ್ಲಿ ವೀಕ್ ಎಂಬುದನ್ನು ಪತ್ತೆ ಹಚ್ಚಬಹುದು.

- ಎಲ್ಲ ರೀತಿಯ ಆಹಾರವನ್ನು ಸಮವಾಗಿ ತಟ್ಟೆಯಲ್ಲಿ ಹಾಕಿ ಕೊಳ್ಳುವವರು ಹೆಚ್ಚು ಮುಂಜಾಗ್ರತಾ ಕ್ರಮ ವಹಿಸುವವರು. ಅವರ ಸಾಮರ್ಥ್ಯ ಮೀರುವ ಕೆಲಸ ಯಾವುದನ್ನೂ ಮಾಡುವುದಿಲ್ಲ.

- ಒಂದು ಮುಗಿಯುವಷ್ಟರಲ್ಲಿ ಮತ್ತೊಂದನ್ನು ತಿನ್ನುವವರು ಕೆಲಸದಲ್ಲಿ ಹೆಚ್ಚು ಚಾತುರ್ಯ ಹೊಂದಿರುತ್ತಾರೆ. ಸ್ವಾಭಿಮಾನಿ. ತಮ್ಮ ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಮಾನ್ಯತೆ ಕೊಡುತ್ತಾರೆ.

 -ಸಿಹಿ ತಿಂಡಿ ಮತ್ತು ಊಟ ಒಂದೇ ತಟ್ಟೆಯಲ್ಲಿ ಹಾಕಿ ಕೊಳ್ಳುವವರು ಅವಕಾಶವಾದಿಗಳು. ಯೋಚನೆ ಮಾಡದೇ ಕೆಲಸಗಳನ್ನು ಒಪ್ಪಿಕೊಳ್ಳುತ್ತಾರೆ. ನಂತರ ಮಾಡಲಾಗದೇ ಬೇರೆಯವರ ಮಾತಿಗೆ ಸುಲಭವಾಗಿ ಗುರಿಯಾಗುತ್ತಾರೆ.

- ಒಂದು ಸಲಕ್ಕೆ ಒಂದೇ ರೀತಿಯಲ್ಲಿ ಊಟ ಹಾಕಿಕೊಳ್ಳವವರು ಶಿಸ್ತಿನ ಸಿಪಾಯಿಗಳು. ಕ್ರಮ ಬದ್ಧ ಹಾಗೂ ಮಾಡುವ ಕೆಲಸದ ಕಡೆ ಹೆಚ್ಚು ಗಮನ ನೀಡುತ್ತಾರೆ.

- ಒಂದರ ಮೇಲೆ ಮತ್ತೊಂದು ಆಹಾರ ಪದಾರ್ಥವನ್ನು ಹಾಕಿ ಕೊಳ್ಳುವವರು ಮತ್ತೊಬ್ಬರಂತೆ ವರ್ತಿಸುತ್ತಾರೆ. ಆದರೆ ಮಾಡುವ ಕೆಲಸ ಬೇರೆ ಬೇರೆ.  ಕೆಲವೊಮ್ಮೆ ತಪ್ಪು ಮಾಡುತ್ತಾರೆ. ಯಾರೂ ಊಹಿಸದಂತೆ ವರ್ತಿಸುತ್ತಾರೆ.