ಆಪ್ತರಿಗೆ, ಪ್ರೀತಿ ಪಾತ್ರರಿಗೆ ಗಿಫ್ಟ್, ಗ್ರೀಟಿಂಗ್, ಹೂವು, ಹೀಗೆ ಬೇರೆ ಬೇರೆ ಉಡುಗೊರೆ ನೀಡಿ ತಮ್ಮ ಪ್ರೀತಿ ನಿವೇದಿಸುತ್ತಾರೆ. ಅದರಲ್ಲಿಯೂ ಗುಲಾಬಿ ನೀಡಿ ಪ್ರೇಮವನ್ನು ವ್ಯಕ್ತಪಡಿಸುವುದು ಕಾಮನ್.  ಅಷ್ಟಕ್ಕೂ ಈ ಗುಲಾಬಿ ಬಣ್ಣಕ್ಕೇನರ್ಥ? 

ರೋಜ್ ರೋಸ್ ವಾಟರ್ ಹಚ್ಚಿದ್ರೆ ಹೆಚ್ಚುತ್ತೆ ಸೌಂದರ್ಯ

ಕೆಂಪು ಗುಲಾಬಿ: ಪ್ರೀತಿ, ಗೌರವ ಮತ್ತು  ಪ್ರಾಮಾಣಿಕತೆಯ ಸಂಕೇತ. 12 ಕೆಂಪು ಗುಲಾಬಿ ನೀಡಿದರೆ ಅದು ಐ ಲವ್ ಯು ಅನ್ನೋದನ್ನು ಭಾವನೆಗಳ ಮೂಲಕ ಹೇಳಿದಂತೆ. 

ಪಿಂಕ್ ರೋಸ್:  ಈ ಗುಲಾಬಿಯ ಅರ್ಥ ಮೆಚ್ಚುಗೆ, ಸಂತೋಷ, ಕೃತಜ್ಞತೆ. 

ಹಳದಿ: ಇದು ಗೆಳೆತನ ಮತ್ತು ಸಂತೋಷದ ಸಂಕೇತ. ಇದು ಗಾಢವಾದ ಸ್ನೇಹ ಮತ್ತು ಸ್ವಾತಂತ್ರ್ಯದ ಸಂಕೇತ. 

ಬಿಳಿ ಗುಲಾಬಿ : ಇದು ಸತ್ಯ, ಪರಿಶುದ್ಧತೆ ಮತ್ತು ಮುಗ್ಧತೆಯ ಸಂಕೇತ. ಜೀವನದ ಹೊಸ ಪಥವನ್ನು ಇದು ತೋರುತ್ತದೆ. 

ಲ್ಯಾವೆಂಡರ್: ನೇರಳೆ ಬಣ್ಣದ ಗುಲಾಬಿ ಲವ್ ಅಟ್ ಫಸ್ಟ್ ಸೈಟ್ ಎಂಬುದನ್ನು ತೋರಿಸುತ್ತದೆ. ಇದು ಮನಸ್ಸಿನಲ್ಲಿರುವ ಆಕರ್ಷಣೆಯ ಭಾವವನ್ನು ವ್ಯಕ್ತಪಡಿಸಲು ನೀಡಲಾಗುತ್ತದೆ. 

ಕೇಸರಿ ಗುಲಾಬಿ: ಇದು ಉತ್ಸಾಹ, ಬಯಕೆಯ ಸಂಕೇತವಾಗಿದೆ. ಈ ಗುಲಾಬಿ ಅಸೆ, ಆಕಾಕ್ಷೆಗಳನ್ನು ಹೊರ ಹಾಕಲು ಸಹಕರಿಸುತ್ತದೆ.