ವಾಸ್ತವವಾಗಿ ಓಮನ್'ನ ಮೂವರು ಮೀನುಗಾರರು ಪ್ರತಿನಿತ್ಯದಂತೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಯಾವತ್ತಿನಂತೆ ಸಮುದ್ರದ ಮಧ್ಯ ಭಾಗಕ್ಕೆ ತಲುಪಿದಾಗ ಮೀನು ಹಿಡಿಯಲು ತಮ್ಮ ಬಲೆ ಬೀಸಿದ್ದಾರೆ. ಈ ವೇಳೆ ಯಾವುದೋ ಭಾರವಾದ ವಸ್ತು ಬಲೆಗೆ ಸಿಲುಕಿಕೊಂಡಿದೆ. ಬಲೆ ಎಳೆದು ಹಡಗಿನ ಮೇಲೆ ಬಿಡಿಸಿದಾಗ ಈ ಮೂವರೂ ದಂಗಾಗಿದ್ದಾರೆ. ಅವರಿಗೆ ಬಲೆಯಲ್ಲಿ ಬಿದ್ದದ್ದೇನು ಎಂದು ತಿಳಿದಿರಲಿಲ್ಲ, ಅವರಿಗೆ ಅದೊಂದು ವಿಚಿತ್ರ ವಸ್ತುವಾಗಿತ್ತು. ಅಷ್ಟಕ್ಕೂ ಆ ವಸ್ತು ವೇಲ್'ನ ವಾಂತಿಯಾಗಿತ್ತು. ಇದಕ್ಕೆ ವೈಜ್ಞಾನಿಕವಾಗಿ ಎಂಬರಗ್ರಿಸ್ ಎನ್ನಲಾಗುತ್ತದೆ. ಇದೊಂದು ಅಮೂಲ್ಯವಾದ ವದಯಾಕ್ಸ್ ಆಗಿದೆ. ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯನ್ವಯ ಮೀನುಗಾರರ ಬಲೆಗೆ ಬಿದ್ದಿದ್ದ ಈ ಎಂಬರಗ್ರಿಸ್ 80 ಕೆಜಿ ಇತ್ತೆಂದು ತಿಳಿದು ಬಂದಿದೆ.
ನವದೆಹಲಿ(ನ.30): ವೇಲ್ ಮೀನು ಮಾಡಿದ ವಾಂತಿಯಿಂದ ಮೀನುಗಾರನೊಬ್ಬ ಶ್ರೀಮಂತನಾಗಲು ಹೇಗೆ ಸಾಧ್ಯ ೆಂಬ ಅಚ್ಚರಿ ಮೂಡುವುದು ಸಹಜ. ಆದರೆ ಇದು ಶೇಕಡಾ 100 ರಷ್ಟು ನಿಜ ವಿಚಾರ. ಅದು ಹೇಗಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ವಾಸ್ತವವಾಗಿ ಓಮನ್'ನ ಮೂವರು ಮೀನುಗಾರರು ಪ್ರತಿನಿತ್ಯದಂತೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಯಾವತ್ತಿನಂತೆ ಸಮುದ್ರದ ಮಧ್ಯ ಭಾಗಕ್ಕೆ ತಲುಪಿದಾಗ ಮೀನು ಹಿಡಿಯಲು ತಮ್ಮ ಬಲೆ ಬೀಸಿದ್ದಾರೆ. ಈ ವೇಳೆ ಯಾವುದೋ ಭಾರವಾದ ವಸ್ತು ಬಲೆಗೆ ಸಿಲುಕಿಕೊಂಡಿದೆ. ಬಲೆ ಎಳೆದು ಹಡಗಿನ ಮೇಲೆ ಬಿಡಿಸಿದಾಗ ಈ ಮೂವರೂ ದಂಗಾಗಿದ್ದಾರೆ.
ಅವರಿಗೆ ಬಲೆಯಲ್ಲಿ ಬಿದ್ದದ್ದೇನು ಎಂದು ತಿಳಿದಿರಲಿಲ್ಲ, ಅವರಿಗೆ ಅದೊಂದು ವಿಚಿತ್ರ ವಸ್ತುವಾಗಿತ್ತು. ಅಷ್ಟಕ್ಕೂ ಆ ವಸ್ತು ವೇಲ್'ನ ವಾಂತಿಯಾಗಿತ್ತು. ಇದಕ್ಕೆ ವೈಜ್ಞಾನಿಕವಾಗಿ ಎಂಬರಗ್ರಿಸ್ ಎನ್ನಲಾಗುತ್ತದೆ. ಇದೊಂದು ಅಮೂಲ್ಯವಾದ ವದಯಾಕ್ಸ್ ಆಗಿದೆ. ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯನ್ವಯ ಮೀನುಗಾರರ ಬಲೆಗೆ ಬಿದ್ದಿದ್ದ ಈ ಎಂಬರಗ್ರಿಸ್ 80 ಕೆಜಿ ಇತ್ತೆಂದು ತಿಳಿದು ಬಂದಿದೆ.
ಎಂಬರಗ್ರಿಸ್ ಅಮೂಲ್ಯವಾದ ವ್ಯಾಕ್ಸ್ ಆಗಿದ್ದು, ಇದು ವೇಲ್'ನ ಕರುಳಿನಿಂದ ಸೋರಿದ ದ್ರವ್ಯದಿಂದ ಆಗುತ್ತದೆ. ಇದು ಜನರ ಕೈಗೆ ಸಿಗುವುದು ತುಂಬಾ ಅಪರೂಪ. ಸುಗಂಧ ದ್ರವ್ಯಗಳಲ್ಲಿ ಇದನ್ನು ಬಳಸಲಾಗುತ್ತಿದ್ದು, ಇದು ಕೋಟಿ ಲೆಕ್ಕದಲ್ಲಿ ಬೆಲೆ ಬಾಳುತ್ತದೆ. ಇನ್ನು ಈ ಮೀನುಗಾರರಿಗೆ ಸಿಕ್ಕಿದ ವ್ಯಾಕ್ಸ್'ನ ಬೆಲೆ 16 ಕೋಟಿ 86 ಲಕ್ಷವೆಂದು ಅಂದಾಜಿಸಲಾಗಿದೆ.
