ಸೆಲೆಬ್ರಿಟಿಗಳೆಂದರೆ ನಮ್ಮ ಕಣ್ಣು ಕಿವಿಗಳು ಅಗಲವಾಗುತ್ತವೆ. ಅವರ ಜೀವನಶೈಲಿಯ ಬಗ್ಗೆ ವಿಚಿತ್ರ ಕುತೂಹಲ ಇಣುಕುತ್ತದೆ. ಆದರೆ, ಅವರೂ ಕೂಡಾ ನಮ್ಮನಿಮ್ಮಂತೆಯೇ ಸಾಮಾನ್ಯ ಮನುಷ್ಯರೇ. ಯಾರೂ ನೋಡುತ್ತಿಲ್ಲವೆಂದಾಗ ಅವರೂ ಮೂಗಿನೊಳಗೆ ಕೈ ಹಾಕಿ ಗಣಿಗಾರಿಕೆ ಮಾಡುತ್ತಾರೆ, ಅವರೂ ತಲೆ ತುರಿಸಿಕೊಳ್ಳುತ್ತಾರೆ. ಆದರೆ, ಅವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಕೆಲ ಸೆಲೆಬ್ರಿಟಿಗಳಿದ್ದಾರೆ. ಅವರ ಕೆಲವೊಂದು ವಿಚಿತ್ರವಾದ ಅಭ್ಯಾಸ ಕೇಳಿದರೆ ಥೋ, ಹೀಗೂ ಉಂಟೇ ಎನ್ನುತ್ತೀರಿ. ಅಂಥ ಕೆಲ ಸೆಲೆಬ್ರಿಟಿಗಳು, ಅವರ ಅಭ್ಯಾಸಗಳನ್ನು ಇಲ್ಲಿ ವಿವರಿಸಲಾಗಿದೆ. 

ಅಮಿತಾಭ್ ಬಚ್ಚನ್
ಬಿಗ್ ಬಿ ಅಮಿತಾಭ್ ಬಚ್ಚನ್‌ ಕೈಗಳಲ್ಲಿ ಸಾಮಾನ್ಯವಾಗಿ ಎರಡು ವಾಚ್‌ಗಳಿರುತ್ತವೆ. ಎಲ್ಲಿಯೇ ಹೋಗುವುದಾದರೂ ಎರಡು ವಾಚ್‌ಗಳನ್ನು ಕಟ್ಟಿಕೊಂಡು ಹೋಗುತ್ತಾರೆ ಬಿಗ್ ಬಿ. ಪುತ್ರ ಅಭಿಷೇಕ್ ವಿದೇಶದಲ್ಲಿ ಓದುವಾಗ ಅಲ್ಲಿನ ಟೈಂ ಝೋನನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಲು ಆರಂಭವಾದ ಈ ಅಭ್ಯಾಸ ನಂತರದಲ್ಲಿ ಸ್ಟೈಲ್ ಸ್ಟೇಟ್‌ಮೆಂಟ್ ಆಗಿಬಿಟ್ಟಿತು. ಹಾಗಾಗಿ, ಬಚ್ಚನ್ ಅದನ್ನೇ ಮುಂದುವರಿಸಿಕೊಂಡು ಹೋದರು. 

ಸ್ವಮೂತ್ರ ಬಳಕೆ: ಥೆರಪಿಯೆಂದು ಸೇವಿಸಿದ ಸೆಲೆಬ್ರಿಟಿಗಳು

ಮೇಘನ್ ಫಾಕ್ಸ್
ಈಕೆಗೆ  ಟಾಯ್ಲೆಟ್ ಬಳಸಿದ ಮೇಲೆ ಫ್ಲಶ್ ಮಾಡುವ ಅಭ್ಯಾಸವಿಲ್ಲವಂತೆ. ಆಕೆಯೇ ಇದನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ಸ್ನೇಹಿತರು ಆಗಾಗ ಅವಳ ಈ ಕೊಳಕು ಅಭ್ಯಾಸದ ಬಗ್ಗೆ ದೂರುತ್ತಿರುತ್ತಾರಂತೆ. ಯೂಕ್, ಆಕೆ ಹಾಲಿವುಡ್ ಸ್ಟಾರೇ ಇರಬಹುದು, ಆದರೂ ಕೊಳಕು ಕೊಳಕೇ ಅಲ್ಲವೇ?

ಜೀತೇಂದ್ರ
ಬಾಲಿವುಡ್‌ನ ಜಂಪಿಂಗ್ ಜಾಕ್ ಜೀತೇಂದ್ರಗೊಂದು ಕೆಟ್ಟ ಅಭ್ಯಾಸ ಇತ್ತು. ಅದೆಂದರೆ ಕಮೋಜಜ್ ಮೇಲೆ ಕುಳಿತಾಗಿ ಬಾಯಿಗೂ ಬ್ಯಾಕಿಗೂ ಒಟ್ಟೊಟ್ಟಿಗೇ ಕೆಲಸ ಕೊಡುವುದು! ಹೌದು, ಕಮೋಡ್ ಮೇಲೆ ಕುಳಿತು ಪಪ್ಪಾಯ ತಿನ್ನುತ್ತಿದ್ದರಂತೆ ಜೀತೇಂದ್ರ. ಪಪ್ಪಾಯ ಜೀರ್ಣಕ್ರಿಯೆಗೆ, ಮಲಬದ್ಧತೆಗೆ ಒಳ್ಳೆಯದೆಂಬುದೇನೋ ಸರಿ, ಹಾಗಂಥ ಅದನ್ನು ಮಾಡುವಾಗಲೇ ಇದನ್ನು ಸೇವಿಸುವ ಅಭ್ಯಾಸ ಸ್ವಲ್ಪ ವಿಪರೀತದ್ದಲ್ಲವೇ?

ಶಾರೂಖ್ ಖಾನ್
ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್‌ಗೆ ಶೂಗಳ ಬಗ್ಗೆ ಸ್ವಲ್ಪ ಒಲವು ಹೆಚ್ಚೆ.  ಅವರು ಅವುಗಳನ್ನು ದಿನಕ್ಕೆ ಒಂದೇ ಬಾರಿ ಕಾಲಿನಿಂದ ತೆಗೆಯುವುದಂತೆ, ಅದೂ ರಾತ್ರಿ ಮಲಗುವಾಗ. ಕೆಲವೊಮ್ಮೆ ರಾತ್ರಿ ಮಲಗುವಾಗ ಮರೆತು ಶೂಗಳನ್ನು ಧರಿಸಿಯೇ ಮಲಗುವುದೂ ಉಂಟಂತೆ. 

ಸುಶ್ಮಿತಾ ಸೇನ್
ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಸ್ನಾನಕ್ಕೆ ಹೋದ ಮೇಲೂ ಮೂರ್ನಾಲ್ಕು ಬಾರಿ ಸರಿಯಾಗಿ ಬಾಗಿಲು ಚಿಲಕ ಹಾಕಿದ್ದೇನಾ ಎಂದು ನೋಡುವ ಅಭ್ಯಾಸವಿರುತ್ತದೆ. ಆದರೆ, ಸುಶ್ಮಿತಾ ಸೇನ್‌ಗೆ ತೆರೆದ ಜಾಗದಲ್ಲಿ ಸ್ನಾನ ಮಾಡುವುದೆಂದರೆ ಇಷ್ಟವಂತೆ! ಆಕೆ ತನ್ನ ಟೆರೇಸ್‌ನಲ್ಲಿ ಬಾತ್ ಟಬ್ ಇಡಿಸಿಕೊಂಡಿದ್ದು, ಅಲ್ಲಿಯೇ ಸೂರ್ಯ, ಚಂದ್ರ, ನಕ್ಷತ್ರಗಳನ್ನು ನೋಡುತ್ತಾ ಸ್ನಾನ ಮಾಡುತ್ತಾಳೆ. 

ಬ್ರಾಡ್ ಪಿಟ್ 
ಹಾಲಿವುಡ್‌ನ ಸೂಪರ್‌ಸ್ಟಾರ್ ಬ್ರಾಡ್ ಪಿಟ್ ಯಾರಿಗೆ ಗೊತ್ತಿಲ್ಲ? ನಟನೆಯೊಂದೇ ಅಲ್ಲದೆ, ಆತನ ದೇಹ, ಚರ್ಮ ಎಲ್ಲದರತ್ತಲೂ ಅಭಿಮಾನಿಗಳು ಕೂಲಂಕುಶವಾಗಿ ಗಮನಿಸುತ್ತಿರುತ್ತಾರೆ. ಹಾಗೆ ಗಮನಿಸಿದಾಗಲೂ ಅಭಿಮಾನಿಗಳಿಗೆ ತಿಳಿಯದೆ ಹೋದ ಸಂಗತಿ ಎಂದರೆ ಬ್ರಾಡ್ ಪಿಟ್ ಸೋಪನ್ನೇ ಬಳಸುವುದಿಲ್ಲ ಎಂಬುದು. ಹೌದು, ಸೋಪಿನಲ್ಲಿ ಟಾಕ್ಸಿನ್ಸ್ ಇರುತ್ತವೆ ಎಂದು ಸ್ನಾನಕ್ಕೆ ಸೋಪನ್ನೇ ಬಳಸುವುದಿಲ್ಲವಂತೆ ಬ್ರಾಡ್ ಪಿಟ್. 

ಪಮೇಲಾ ಆ್ಯಂಡರ್ಸನ್
ಸಾಮಾನ್ಯ ಜನಗಳಿಗೇ ಕನ್ನಡಿಯಲ್ಲಿ ಪದೇ ಪದೆ ನೋಡಿಕೊಳ್ಳುವ ಚಟವಿರುತ್ತದೆ. ಅಂಥದರಲ್ಲಿ ಬೇವಾಚ್‌ನ ಬಾಂಬ್‌ಶೆಲ್ ಎನಿಸಿಕೊಂಡಿರುವ ಪಮೇಲಾ ಆ್ಯಂಡರ್ಸನ್ ಅದೆಷ್ಟು ಹೊತ್ತು ಕನ್ನಡಿಯ ಮುಂದೆ ಕಳೆಯಬೇಕು ಹೇಳಿ? ಆದರೆ, ಆಕೆ ಕನ್ನಡಿಯನ್ನೇ ನೋಡುವುದಿಲ್ಲ. ಆಕೆಗೆ, ತನ್ನ ಪ್ರತಿಬಿಂಬ ನೋಡಲು ಭಯವಂತೆ!

ಟಾಮ್ ಕ್ರೂಸ್
ಮಿಶನ್ ಇಂಪಾಸಿಬಲ್ ಖ್ಯಾತಿಯ ಟಾಮ್ ಕ್ರೂಸ್ ‌ತನ್ನ ಸೌಂದರ್ಯವನ್ನು, ಮುಖದ ಯೌವನವನ್ನು ಕಾಪಾಡಿಕೊಳ್ಳಲು ಒಂದು ವಿಚಿತ್ರ ಫೇಸ್‌ಫ್ಯಾಕ್ ಬಳಸುತ್ತಾರೆ- ಅದೇ ನೈಟಿಂಗೇಲ್ ಹಕ್ಕಿಯ ಪೀ. ಹೌದು, ನೈಟಿಂಗೇಲ್ ಹಕ್ಕಿಯ ಪೂವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿ ಹೆಚ್ಚುತ್ತದೆ ಎಂಬುದು ಕ್ರೂಸ್ ಅನುಭವದ ಮಾತು. 

ಮದುವೆ ಯಾರಿಗೆ ಬೇಕ್ರೀ ಎನ್ನೋ ಮಿಲೇನಿಯಲ್ಸ್

ಡೆಮಿ ಮೂರ್
ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಡೆಮಿ ಮೂರ್ ಇಂಬಳಗಳನ್ನು ಮುಖಕ್ಕೆ ಬಿಟ್ಟುಕೊಂಡು, ತನ್ನೆಲ್ಲ ಕೆಟ್ಟ ರಕ್ತಗಳನ್ನು ಅವಕ್ಕೆ ಆಹಾರವಾಗಿ ನೀಡುತ್ತಾಳಂತೆ!