'ತಿಂಡಿಯನ್ನು ರಾಜನಂತೆ ಸೇವಿಸು, ಮಧ್ಯಾಹ್ನದ ಊಟವನ್ನು ರಾಣಿಯಂತೆ ಸೇವಿಸು, ರಾತ್ರಿ ಮಾತ್ರ ಭಿಕ್ಷುಕನಂತೆ ತಿನ್ನು...' ಎಂಬ ಮಾತೊಂದು ನಮ್ಮಲ್ಲಿ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ.  ಇದನ್ನೇ ಇದೀಗ ಡಯಟ್ ಹೆಸರಲ್ಲಿ ದುಟ್ಟು ಕೊಟ್ಟು ಸಲಹೆ ನೀಡುತ್ತಿದ್ದು, ರಾತ್ರಿ ಹೊಟ್ಟೆ ಬಿರಿ ತಿಂದರೆ ದೇಹದ ತೂಕ ಹೆಚ್ಚಾಗುತ್ತದೆ, ಎನ್ನಲಾಗುತ್ತಿದೆ.

ಹೌದು. ತಿಂಡಿಯನ್ನು ಹೊಟ್ಟೆ ಬಿರಿ ತಿಂದರೆ ಒಳ್ಳೆಯದು. ಮುಂಜಾನೆಯಲ್ಲಿ ದೇಹದ ಪಚನಕ್ರಿಯೆ ಹೆಚ್ಚಿದ್ದು, ರಾತ್ರಿ ಹೊತ್ತಲ್ಲಿ ಕಡಿಮೆಯಾಗುತ್ತದೆ. ಅದಕ್ಕೆ ಸರಿ ಜೀರ್ಣವಾಗುವುದಿಲ್ಲ. ಅದಕ್ಕೆ ರಾತ್ರಿ ಹೊತ್ತು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಿದರೆ ಒಳ್ಳೆಯದು. ಅದೇ ಬೆಳಗ್ಗೆ ಸುಮಾರು 1400 ಕ್ಯಾಲೋರಿ ಇರುವಷ್ಟು ಆಹಾರ ಸೇವಿಸಿದರೂ ನಡೆಯುತ್ತೆ. ಆದರೆ, ಬಹು ಒತ್ತಡದ ಜೀವನದಲ್ಲಿ ಹೊಟ್ಟೆಗಿಂತ, ದೇಹ ವಿಶ್ರಾಂತಿ ಬಯಸುವುದರಿಂದ ತಿಂಡಿ ತಿಂದು ಮಲಗಿದರೂ ಸಾಕಾಗುತ್ತೆ.

ಇನ್ನೇನಕ್ಕೆ ರಾತ್ರಿ ಊಟ ಕಮ್ಮಿ ಮಾಡಬೇಕು?

  • ಊಟ ಮತ್ತು ನಿದ್ರೆಗೆ 2 ಗಂಟೆ ಟೈಂ ಗ್ಯಾಪ್ ಇರಬೇಕು. ಇಲ್ಲವಾದರೆ ದೇಹದ ತೂಕ ಹೆಚ್ಚುತ್ತದೆ.
  • ಸಂಜೆ ಸಮಯದಲ್ಲಿ ಸ್ಯ್ನಾಕ್ಸ್, ಜಂಕ್ ಫುಡ್ ತಿನ್ನಬೇಡಿ. 
  • ರಾತ್ರಿ ಸಮಯದಲ್ಲಿ ಸಿಹಿ ಪದಾರ್ಥ ಸೇವಿಸಿದರೆ ದೇಹ ಮಾತ್ರವಲ್ಲದೆ ಆರೋಗ್ಯಕ್ಕೂ ಹಾನಿಕರ.
  • ಅಧ್ಯಾಯನದ ಪ್ರಕಾರ ರಾತ್ರಿ ಹೆಚ್ಚು ತಿನ್ನುವುದು ಜ್ಞಾಪಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
  • ಆಹಾರ ಮನಸಿನ ಮೇಲೂ ಪರಿಣಾಮ ಬೀರುವುದರಿಂದ, ಕೆಟ್ಟ ಕೆಟ್ಟ ಕನಸುಗಳಿಗೆ ಇದು ಕಾರಣವಾಗಬಲ್ಲದು. 
  • ರಾತ್ರಿ 8 ಗಂಟೆ ನಂತರ ಊಟ ಮಾಡುವುದರಿಂದ ಹೃದಯಘಾತ ಹೆಚ್ಚುವ ಸಂಭವವೂ ಇರುತ್ತದೆ.
  • ಮಾರನೇ ದಿನದ ಹಸಿವಿಗೆ ಹೆಚ್ಚಳಕ್ಕೆ ಕಾರಣವಾಗಬಹುದು.
  • ಊಟದ ತಕ್ಷಣ ಮಲಗುವುದರಿಂದ ಆ್ಯಸಿಡಿಟಿ ಹೆಚ್ಚುವ ಸಾಧ್ಯತೆಯೂ ಹೆಚ್ಚು.