ಪ್ರಸ್ತದ ಕೋಣೆಯಲ್ಲಿ ಮಧುಮಗಳು ಎಂಜಾಯ್ ಮಾಡಲು 8 ಟಿಪ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 9:06 PM IST
Wedding night tips every virgin bride needs to know
Highlights

 ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಬಿಡುವ ಹಾಗಿಲ್ಲ. ಸೆಕ್ಸ್ ಬಗ್ಗೆ ಅರಿವಿದ್ದರೂ ಪ್ರಸ್ತದ ಕೋಣೆಯಲ್ಲಿ ಏನಾಗುತ್ತದೆಯೆಂಬ ಭಯ ಇಬ್ಬರಿಗೂ ಕಾಡುವುದು ಸಹಜ. ಮುಂದಿನ ಸಂತಸದ ಜೀವನಕ್ಕೆ ಪ್ರಥಮ ರಾತ್ರಿ ಕೂಡ  ಅಡಿಪಾಯವಾಗುವ ಕಾರಣ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳಿತು

ಮದುವೆಯಾದ ದಂಪತಿಗಳಿಗೆ ಮೊದಲ ರಾತ್ರಿ ಹೊಸ ಅನುಭವ. ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಬಿಡುವ ಹಾಗಿಲ್ಲ. ಸೆಕ್ಸ್ ಬಗ್ಗೆ ಅರಿವಿದ್ದರೂ ಪ್ರಸ್ತದ ಕೋಣೆಯಲ್ಲಿ ಏನಾಗುತ್ತದೆಯೆಂಬ ಭಯ ಇಬ್ಬರಿಗೂ ಕಾಡುವುದು ಸಹಜ. ಮುಂದಿನ ಸಂತಸದ ಜೀವನಕ್ಕೆ ಪ್ರಥಮ ರಾತ್ರಿ ಕೂಡ ಅಡಿಪಾಯವಾಗುವ ಕಾರಣ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳಿತು. ಮಧುಮಗಳು ಅನುಸರಿಸಬೇಕಾದ 10 ಟಿಪ್ಸ್ ಗಳು ಇಲ್ಲಿವೆ

1] ಸೆಕ್ಸ್ ಬಗ್ಗೆಯೇ ಚಿಂತೆ ಬಿಡಿ : ಮೊದಲ ರಾತ್ರಿಯಲ್ಲಿ  ಇಬ್ಬರಿಗೂ ಮೊದಲ ದಿನವಾದರೂ ಸೆಕ್ಸ್ ಗಾಗಿಯೇ ಎಲ್ಲ ಎನ್ನುವುದನ್ನು ಬಿಡಬೇಕು. ಜೀವನವಿಡಿ ಇಬ್ಬರು ಬಾಳಬೇಕಿರುವುದರಿಂದ ಸೆಕ್ಸ್ ಕೂಡ ಒಂದು ಭಾಗ ಭಾಗವಾಗಿರುತ್ತದೆ. ಆ ರಾತ್ರಿ ಇಬ್ಬರು ತಾಳ್ಮೆಯಿಂದ ವರ್ತಿಸಿ ಮಿಲನ ಸುಖವನ್ನು ಸಂತೋಷದಿಂದ ಅನುಭವಿಸಬೇಕು.

2] ಆರಾಮದಾಯಕವಾಗಿರಿ :  ಪ್ರಥಮ ರಾತ್ರಿಯಂದು ವಧು ಆರಾಮದಾಯಕವಾಗಿರಬೇಕು. ಏನಾಗಬಹುದೆಂಬ ಭಯ ಬಿಡಬೇಕು. ಇಬ್ಬರು ಮಾತನಾಡಿಕೊಂಡು ರತಿಕ್ರೀಡೆಯನ್ನು ಖುಷಿಯಿಂದ ಕಳೆಯಿರಿ. ಬಹುತೇಕ ಹೆಣ್ಣು ಮಕ್ಕಳು ತಮ್ಮ ಪತಿಯಂದಿರನ್ನು ಮೊದಲ ರಾತ್ರಿಯಂದೇ ಸಂಪೂರ್ಣ ತೆಕ್ಕೆಗೆ ಹಾಕಿಕೊಳ್ಳುತ್ತಾರೆ.

3] ಅವಸರದಲ್ಲಿದ್ದರೂ ನೀವು ತಾಳ್ಮೆಯಿಂದಿರಿ: ಸಂಭೋಗದ ಸಂದರ್ಭದಲ್ಲಿ ಬಹುತೇಕ ಪುರುಷರು ಅವಸರದಲ್ಲಿರುತ್ತಾರೆ. ಹೆಣ್ಣು ಮಕ್ಕಳು ತಾಳ್ಮೆಯಿಂದ ವರ್ತಿಸಬೇಕು. ಮುಕ್ತ ಮಾತುಕತೆ ಜೀವನದ ಮುಂದಿನ ಪಯಣದ ಬಗ್ಗೆ ಇಲ್ಲಿಂದಲೇ ನಿಮಗೆ ಆರಂಭ ಎಂಬುದನ್ನು ಮರೆಯಬಾರದು.

4]ಸ್ಫಲನದ ಬಗ್ಗೆ ತಪ್ಪು ಅಭಿಪ್ರಾಯ ಬೇಡ: ಸ್ಖಲಿಸುವುದು ಹಾಗೂ ಯೋನಿಯ ಬಗ್ಗೆಯೂ ತಪ್ಪು ಅಭಿಪ್ರಾಯಗಳಿರುತ್ತವೆ.  ಆದರೆ ಇದಕ್ಕೆ ವೈದ್ಯಕೀಯ ಕಾರಣಗಳು ಹೊರತುಪಡಿಸಿ ಬೇರೆ ಇನ್ನೇನು ಇರುವುದಿಲ್ಲ. ನೀವು ಈ ಬಗ್ಗೆ ಚಿಂತಿಸದೆ ಖುಷಿಯ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯಿರಿ.

5] ದೈಹಿಕ ದಣಿವು ಸಹಜ : ಮೊದಲ ರಾತ್ರಿಯ ಸಂಭೋಗದ ನಂತರ ಮಹಿಳೆಗೆ ದೈಹಿಕ ಆಯಾಸವಾಗುವುದು ಸಹಜ. ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ತೊಂದರೆಯುಂಟಾಗುವುದಿಲ್ಲ.

6] ಸಂಭೋಗದ ಪರಾಕಾಷ್ಠೆ : ಸೆಕ್ಸ್ ನಂತರ ಬಹುತೇಕ ಮಹಿಳೆಯರು ಸಂಭೋಗದ ಪರಾಕಾಷ್ಠೆ ತಲುಪಿರುವುದಿಲ್ಲ. ಇದರಿಂದ ಬೇಜಾರು ಮಾಡಿಕೊಳ್ಳಬೇಡಿ. ಮುಂದಿನ ರಾತ್ರಿಗಳಲ್ಲಿ ಇನ್ನು ಹೆಚ್ಚಿನ ಖುಷಿ ಸಿಗುತ್ತದೆ. ಒಂದು ದಿನದಲ್ಲಿ ಯಾವುದನ್ನು ನಿರ್ಧರಿಸಬಾರದು.

7] ಮುಂಜಾಗ್ರತಾ ಕ್ರಮ ಅಗತ್ಯ : ಬೇಗನೆ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರೆ  ಗರ್ಭ ಧರಿಸುವುದನ್ನು ತಡೆಯಲು ಕಾಂಡೋಮ್ ಬಳಕೆ ಹಾಗೂ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದು ಉತ್ತಮ.

8] ಬೋರ್ ಹೊಡೆಸಬೇಡಿ : ಪತಿಯಂದರು ನಿಮ್ಮಿಂದ ತೃಪ್ತಿ ಪಡೆದು ಖುಷಿಯ ಕ್ಷಣಗಳನ್ನು ಪಡೆಯಬೇಕೆಂಬ ಹಂಬಲದಿಂದ ಇರುತ್ತಾರೆ. ಇದಕ್ಕೆ ನಿಮ್ಮ ನಡವಳಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದು ನಿಮಿಷವು ನೀವು ಬೋರ್ ಹೊಡೆಸಬೇಡಿ.

loader