ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಪತ್ತೆ ಹಚ್ಚಬೇಕಾ? ಹೀಗೆ ಮಾಡಿದರೆ ಗೊತ್ತಾಗುತ್ತಂತೆ!

First Published 9, Mar 2018, 8:20 PM IST
Want to know if your partner cheating on you Just listen to their voice
Highlights

ಕೇಳುವಾಗ ಅಚ್ಚರಿಯೆನಿಸಬಹುದು. ಆದರೆ ಅಧ್ಯಯನವೊಂದು ಹೇಳುವ ಪ್ರಕಾರ, ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುವುದನ್ನು ಸರಳವಾಗಿ ಪತ್ತೆಹಚ್ಚಬಹುದಂತೆ!

ಕೇಳುವಾಗ ಅಚ್ಚರಿಯೆನಿಸಬಹುದು. ಆದರೆ ಅಧ್ಯಯನವೊಂದು ಹೇಳುವ ಪ್ರಕಾರ, ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುವುದನ್ನು ಸರಳವಾಗಿ ಪತ್ತೆಹಚ್ಚಬಹುದಂತೆ!

ಅದೇನೆಂದರೆ, ಸಂಗಾತಿಯ ಧ್ವನಿ! ಬಾಯ್ಮಾತಿನಲ್ಲಿ ನಿಮ್ಮ ಸಂಗಾತಿ ಏನೇ ಹೇಳಲಿ, ಆದರೆ ಅವರ ಧ್ವನಿಯು ‘ವಂಚನೆ ಪತ್ತೆ ಸಾಧನ’ವಾಗಿದೆಯೆಂದು ‘ದಿ ಕನ್ವರ್ಸೇಶನ್’ ವರದಿ ಮಾಡಿದೆ.

ಧ್ವನಿಯನ್ನು ಕೇಳುವ ಮೂಲಕ ಮಾತನಾಡುವವರ ಲಿಂಗ, ವಯಸ್ಸು ಮುಂತಾದವುಗಳು ಸುಲಭವಾಗಿ ಗೊತ್ತಾಗುವಂತೆ, ಅವರ ವರ್ತನೆ ಹಾಗೂ ಸ್ವಭಾವವನ್ನು ಕೂಡಾ ಕಂಡುಕೊಳ್ಳಬಹುದು ಎಂದು ವರದಿಯು ತಿಳಿಸಿದೆ.

ಅಧ್ಯಯನದ ಪ್ರಕಾರ, ಗಟ್ಟಿ-ಧ್ವನಿಯಿರುವ ಪುರುಷರು ತಮ್ಮ ಸಂಗಾತಿಯನ್ನು ವಂಚಿಸುವ ಸಾಧ್ಯತೆ ಹೆಚ್ಚು ಎಂದು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸು, ಮತ್ತಿತರ ಸಮಾನ ಅಂಶಗಳನ್ನು ಹೊಂದಿರುವ ಪುರುಷರ ಧ್ವನಿಗಳ ರೆಕಾರ್ಡಿಂಗನ್ನು ಅಧ್ಯಯನದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಕೇಳಿಸಲಾಯಿತು. ಅದರ ಹೊರತು ಯಾವುದೇ ವಿವರವನ್ನು ಅವರ ಮುಂದೆ ಬಹಿರಂಗಪಡಿಸಿರಲಿಲ್ಲ. ಅದಾಗ್ಯೂ ಮಹಿಳೆಯರು ವಂಚಿಸುವ ಪುರುಷರನ್ನು ಬಹುತೇಕ ನಿಖರವಾಗಿ ಪತ್ತೆಹಚ್ಚಿದ್ದಾರೆಂದು ಹೇಳಲಾಗಿದೆ.

ಧ್ವನಿಯು ಜನರ ಸ್ವಬಾವವನ್ನು ಅರಿಯುವಲ್ಲಿ ಪ್ರಮುಖ ಪಾತ್ರವನ್ನು ವಹಸಿಸುತ್ತದೆ. ಅದರ ಮೂಲಕ ಅವರ ಆರೋಗ್ಯ, ಆಕರ್ಷಣೆ, ಸಂತಾನ ಫಲವತ್ತತೆ, ಹಾಗೂ ವಂಚಿಸುವ ಸಾದ್ಯತೆಗಳನ್ನು ಕೂಡಾ ಕಂಡುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

loader