Asianet Suvarna News Asianet Suvarna News

Viral Video : ನೀನ್ಯಾಕೆ ನನ್ನನ್ನು ತಿಂದೆ ಎಂಬ ಮಗನ ಪ್ರಶ್ನೆಗೆ ತಾಯಿ ನೀಡಿದ್ದಾಳೆ ಇಂಟರೆಸ್ಟಿಂಗ್ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿರುತ್ತದೆ. ಒಂದೊಂದು ವಿಡಿಯೋ ನಗು ತರಿಸಿದ್ರೆ ಮತ್ತೆ ಕೆಲ ವಿಡಿಯೋ ದುಃಖ ತರಿಸುತ್ತದೆ. ಇನ್ನು ಕೆಲ ವಿಡಿಯೋ ಇಂಟರೆಸ್ಟಿಂಗ್ ಆಗಿರುತ್ತದೆ. ಈಗ ತಾಯಿ – ಮಗುವಿನ ವಿಡಿಯೋ ಒಂದು ವೈರಲ್ ಆಗಿದೆ. 
 

Viral Video Why Did You Eat Me Toddler Asks Mom Her Reply Ubercool Watch
Author
First Published Mar 25, 2023, 2:37 PM IST

ಮಕ್ಕಳ ಕಲ್ಪನೆ ನಮ್ಮ ಆಲೋಚನೆಗೆ ನಿಲುಕದ್ದು. ಕಲ್ಪನೆ ವಿಷ್ಯದಲ್ಲಿ ಮಕ್ಕಳು ಮನೋವಿಜ್ಞಾನಿಗಳು, ವಯಸ್ಕರನ್ನು ಮೀರಿಸುತ್ತಾರೆ. ನಾವು ಒಂದು ಕಾಲದಲ್ಲಿ ಮಕ್ಕಳಾಗಿದ್ವಿ ನಿಜ. ಆದ್ರೆ ದೊಡ್ಡವರಾಗ್ತಿದ್ದಂāತೆ ನಮ್ಮ ಆಲೋಚನೆ ಭಿನ್ನವಾಗುತ್ತದೆ. ನಾವು ಮಕ್ಕಳಂತೆ ಆಲೋಚಿಸಲು, ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 

ಮಕ್ಕಳು (Children) ತಮ್ಮದೊಂದು ಪ್ರೀತಿ (Love) ಯ ಜಗತ್ತು ರಚಿಸ್ತಾರೆ. ಅವರ ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತುವಿನ ಮೇಲೂ ಅವರಿಗೆ ಕುತೂಹಲವಿರುತ್ತದೆ. ಪ್ರತಿ ವಸ್ತುವಿನ ಮೇಲೆ ನೂರು ಪ್ರಶ್ನೆಗಳಿರುತ್ತವೆ. ಕೆಲವೊಂದು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡೋದು ಕಷ್ಟ. ಭೂಮಿ ಏಕೆ ಗುಂಡಗಿದೆ, ಅದ್ರ ಕೊನೆ ಎಲ್ಲಿ, ಯಾಕೆ ಮರಗಳು ಅಲುಗಾಡುತ್ವೆ, ನಾವ್ಯಾಕೆ ಆಹಾರ ಸೇವನೆ ಮಾಡ್ಬೇಕು ಸೇರಿದಂತೆ ಕೆಲವೊಂದು ಪ್ರಶ್ನೆಗಳು ಮಕ್ಕಳ ಹುಟ್ಟಿನ ಬಗ್ಗೆಯೂ ಇರುತ್ತದೆ. ಗರ್ಭಿಣಿಯರನ್ನು ಕಂಡಾಗ ಅವರ ಪ್ರಶ್ನೆ ಡಬಲ್ ಆಗುತ್ತದೆ. ನಾನು ಎಲ್ಲಿಂದ ಬಂದೆ, ಅಮ್ಮನ ಹೊಟ್ಟೆಯಿಂದ ಹೇಗೆ ಹೊರಬಂದೆ, ಅಮ್ಮನ ಹೊಟ್ಟೆ ಸೇರಿದ್ದು ಹೇಗೆ… ಹೀಗೆ ನಾನಾ ಪ್ರಶ್ನೆಗಳನ್ನು ತಂದೆ ತಾಯಿ, ಕುಟುಂಬದ ಮುಂದೆ ಕೇಳ್ತಾರೆ. ಆದ್ರೆ ಅವರ ಪ್ರಶ್ನೆಗಳಿಗೆ ಉತ್ತರ ನೀಡೋದು ಕಷ್ಟ. ಒಂದು ಉತ್ತರವನ್ನು ಅದು ಹೇಗೋ ನೀಡಿದ್ರೆ ಆ ಉತ್ತರಕ್ಕೆ ಇನ್ನೊಂದು ಪ್ರಶ್ನೆ ಸಿದ್ಧವಾಗಿರುತ್ತದೆ. ಅದಕ್ಕೆ ಉತ್ತರ ನೀಡಿದ್ರೆ ಮತ್ತೊಂದು, ಇನ್ನೊಂದು ಹೀಗೆ. ಒಂದಾದ್ಮೇಲೆ ಒಂದು ಪ್ರಶ್ನೆ ಸುರಿಯುತ್ತಿದ್ರೆ ಅದಕ್ಕೆ ಉತ್ತರ ನೀಡೋದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ತಾಳ್ಮೆ ಬಹಳ ಮುಖ್ಯ. ಈಗ ಅಂಥಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಮಗನ ಪ್ರಶ್ನೆಗೆ ಆರಂಭದಲ್ಲಿ ತಾಳ್ಮೆಯಿಂದ ಉತ್ತರ ನೀಡುವ ತಾಯಿ, ನಂತ್ರ ಸುಸ್ತಾಗಿ ಸ್ಮಾಟ್ ಉತ್ತರ ನೀಡ್ತಾಳೆ. ಆಕೆ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. 

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗಿದೆ. Truelaugh ಹೆಸರಿನ ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಹುಡುಗನೊಬ್ಬ ಕುಳಿತು ತಾಯಿಯ ಬಳಿ ಪ್ರಶ್ನೆ ಕೇಳ್ತಿದ್ದಾನೆ. ಪ್ರಶ್ನೆ ಕೇಳುವ ಸಂದರ್ಭದಲ್ಲಿ ಆತನಿಗೆ ದುಃಖ ಉಕ್ಕಿ ಬರ್ತಿದೆ. ಹುಡುಗ, ನನ್ನನ್ನು ಏಕೆ ನೀನು ತಿಂದಿದ್ದೆ ಎಂದು ಪ್ರಶ್ನೆ ಕೇಳುತ್ತಾನೆ.

ಮಗು, ತಾಯಿ ಹೊಟ್ಟೆಯಿಂದ ಬರುತ್ತದೆ ಎಂದು ಪಾಲಕರು ಹೇಳ್ತಾರೆ. ಹೊಟ್ಟೆಯಿಂದ ಬರಬೇಕೆಂದ್ರೆ ಹೊಟ್ಟೆ ಒಳಗೆ ಹೋಗಿದ್ದು ಹೇಗೆ? ಅಂದ್ರೆ ಅಮ್ಮ ನನ್ನನ್ನು ನುಂಗಿದ್ದಕ್ಕೆ ನಾನು ಅಮ್ಮನ ಹೊಟ್ಟೆಗೆ ಹೋದೆ. ನೀನ್ಯಾಕೆ ನನ್ನನ್ನು ನುಂಗಿದೆ ಎಂದು ಆತ ಪ್ರಶ್ನೆ ಕೇಳ್ತಾನೆ. ಆತನ ಪ್ರಶ್ನೆಗೆ ತಾಯಿ ಉತ್ತರ ನೀಡುವ ಪ್ರಯತ್ನ ನಡೆಸ್ತಾಳೆ. ಆದ್ರೆ ಆತನಿಗೆ ತೃಪ್ತಿಯಾಗೋದಿಲ್ಲ. ನಿರಾಸೆಗೊಂಡು, ಆಘಾತಕ್ಕೊಳಗಾಗಿ ಮತ್ತೆ ಪ್ರಶ್ನೆ ಕೇಳ್ತಾನೆ. ಅದಕ್ಕೆ ತಾಯಿ ತುಂಬಾ ಆಸಕ್ತಿದಾಯಕ ಮತ್ತು ಚುರುಕಾದ ಉತ್ತರವನ್ನು ನೀಡುತ್ತಾಳೆ.

ಈ ಉತ್ತರ ನೀಡ್ತಾಳೆ ತಾಯಿ : ನೀನ್ಯಾಕೆ ನನ್ನನ್ನು ನುಂಗಿದೆ ಎಂಬ ಪ್ರಶ್ನೆಗೆ ಕೊನೆಯದಾಗಿ ತಾಯಿ, ನೀನು ತುಂಬಾ ರುಚಿಯಾಗಿದ್ದೆ. ಹಾಗಾಗಿ ನಾನು ನಿನ್ನನ್ನು ನುಂಗಿದೆ ಎಂದು ತಾಯಿ ಹೇಳ್ತಾಳೆ. 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳೊಂದಿಗೆ ಯಾರೂ ವಾದಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸೃಜನಶೀಲತೆ ಮತ್ತು ಕಲ್ಪನೆ ನಮಗೆ ನಿಲುಕದ್ದು. ಸಾಕಷ್ಟು ತಾಳ್ಮೆ ಮತ್ತು ತಿಳುವಳಿಕೆ ಪಾಲಕರಿಗೆ ಅಗತ್ಯವಿರುತ್ತದೆ. ಮಕ್ಕಳು ಹಾಗೂ ಪಾಲಕರು ಇಬ್ಬರಿಗೂ ಮುಜುಗರಕ್ಕೀಡು ಮಾಡದಂತೆ ಉತ್ತರ ನೀಡಬೇಕು. ನಾವು ನೀಡುವ ಉತ್ತರ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರಿಯಾಗಿ ಆಲೋಚಿಸಿ ಉತ್ತರ ನೀಡಬೇಕಾಗುತ್ತದೆ. 
 

 
 
 
 
 
 
 
 
 
 
 
 
 
 
 

A post shared by True living (@_truelaugh)

Follow Us:
Download App:
  • android
  • ios