ವಾಸ್ತವವಾಗಿ ಮದುವೆ ಕಾರ್ಯಕ್ರಮದಲ್ಲಿ ವರ ವಧುವಿಗೆ ಹಾರ ಹಾಕುವ ಸಂದರ್ಭದಲ್ಲಿ ಆತನ ಪ್ಯಾಂಟ್ ಕಳಚಿ ಬಿದ್ದಿದ್ದು, ಆಗಮಿಸಿದ ಬಂಧುಗಳಿಗೆ ನೋಡಿ ಏನೂ ಮಾಡಲಾಗದ ವಿಚಿತ್ರ ಪರಿಸ್ಥಿತಿ. ನಗು ಬಂದರೂ ವರನಿಗೆ ಬೇಜಾರಾಗುತ್ತದೆ ಎಂದು ಸುಮ್ಮನಾಗಬೇಕು, ಇತ್ತ ವರನಿಗೂ ನಾಚಿಕೆ ಹಾಗೂ ಮರ್ಯಾದೆಯ ವಿಚಾರ. ಹೀಗಾಗಿ ಆತ ಏನೂ ಮಾಡಲಾಗದೆ ಅಲ್ಲಂದ ಓಡಿ ಹೋಗಿದ್ದಾನೆ. ವಿಚಿತ್ರವೆಂದರೆ ವರನಿಗೆ ತನ್ನ ಪ್ಯಾಂಟ್ ಕಳಚಿದ ಕೆಲ ಸಮಯದವರೆಗೂ ಈ ವಿಚಾರ ತಿಳಿದಿರಲಿಲ್ಲ. ಆದರೆ ನೆರೆದ ಬಂಧುಗಳ ಮುಖ ಭಾವದಲ್ಲಿ ಬದಲಾವಣೆ ಗಮನಿಸಿದ ಬಳಿಕ ಪ್ಯಾಂಟ್ ಕೆಳಗೆ ಬಿದ್ದಿದೆ ಎಂಬುವುದು ತಿಳಿಯುತ್ತದೆ. ಕೂಡಲೇ ಆತ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಸಿದನಾದರೂ, ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ನವದೆಹಲಿ(ಡಿ.12): ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಮದುವೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಧುವಿಗೆ ಹಾರ ಹಾಕುತ್ತಿದ್ದ ವರನಿಗೆ ಬಂದ ಪರಿಸ್ಥಿತಿ. ಅಲ್ಲಿ ನಡೆದ ಘಟನೆಯಿಂದ ಸಾರ್ವಜನಿಕವಾಗೇ ವರನ ಮಾನ ಹರಾಜಾಗಿದ್ದಲ್ಲದೆ, ಆತ ಅಲ್ಲಿಂದ ಬೇರೆ ವಿಧಿ ಇಲ್ಲದೆ ಓಡಿ ಹೋಗಿದ್ದಾನೆ.
ವಾಸ್ತವವಾಗಿ ಮದುವೆ ಕಾರ್ಯಕ್ರಮದಲ್ಲಿ ವರ ವಧುವಿಗೆ ಹಾರ ಹಾಕುವ ಸಂದರ್ಭದಲ್ಲಿ ಆತನ ಪ್ಯಾಂಟ್ ಕಳಚಿ ಬಿದ್ದಿದ್ದು, ಆಗಮಿಸಿದ ಬಂಧುಗಳಿಗೆ ನೋಡಿ ಏನೂ ಮಾಡಲಾಗದ ವಿಚಿತ್ರ ಪರಿಸ್ಥಿತಿ. ನಗು ಬಂದರೂ ವರನಿಗೆ ಬೇಜಾರಾಗುತ್ತದೆ ಎಂದು ಸುಮ್ಮನಾಗಬೇಕು, ಇತ್ತ ವರನಿಗೂ ನಾಚಿಕೆ ಹಾಗೂ ಮರ್ಯಾದೆಯ ವಿಚಾರ. ಹೀಗಾಗಿ ಆತ ಏನೂ ಮಾಡಲಾಗದೆ ಅಲ್ಲಂದ ಓಡಿ ಹೋಗಿದ್ದಾನೆ.
ವಿಚಿತ್ರವೆಂದರೆ ವರನಿಗೆ ತನ್ನ ಪ್ಯಾಂಟ್ ಕಳಚಿದ ಕೆಲ ಸಮಯದವರೆಗೂ ಈ ವಿಚಾರ ತಿಳಿದಿರಲಿಲ್ಲ. ಆದರೆ ನೆರೆದ ಬಂಧುಗಳ ಮುಖ ಭಾವದಲ್ಲಿ ಬದಲಾವಣೆ ಗಮನಿಸಿದ ಬಳಿಕ ಪ್ಯಾಂಟ್ ಕೆಳಗೆ ಬಿದ್ದಿದೆ ಎಂಬುವುದು ತಿಳಿಯುತ್ತದೆ. ಕೂಡಲೇ ಆತ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಸಿದನಾದರೂ, ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಧರಿಸಿದ ಉಡುಪುಗಳಿಂದ ಈ ಮದುವೆ ರಾಜಸ್ಥಾನದವರದೆಂದು ಅಂದಾಜಿಸಲಾಗಿದೆ. ಆದರೆ ಇದು ಕೇವಲ ಅಂದಾಜಾಗಿದ್ದು, ನಿಖರವಾಗಿ ತಿಳಿದು ಬಂದಿಲ್ಲ.
