ಈ ಮದುವೆ ದಿಬ್ಬಣದಲ್ಲೂ ಪ್ರತಿಯೊಬ್ಬರೂ ಕುಣಿಯುತ್ತಿದ್ದರು ಆದರೆ ಇದ್ದ ವ್ಯತ್ಯಾಸವೆಂದರೆ ಕುದುರೆ ಮೇಲೆ ಸವಾರನಾಗಿದ್ದು ಮದುಮಗಳು!. ಈ ವಿಭಿನ್ನ ದಿಬ್ಬಣ ದಾರಿಯಲ್ಲಿ ಸಾಗುತ್ತಿದ್ದ ವೈಭವ್ ವಿಶಾಲ್ ಎಂಬವರ ಕಣ್ಣಿಗೆ ಕಂಡಿದ್ದು, ತಕ್ಷಣವೇ ಇವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಮದುವೆ ಯಾವ ಸಮುದಾಯದವರದ್ದು ಎಂಬ ವಿಚಾರವನ್ನು ತಿಳಿದುಕೊಳ್ಳಲು ವೈಭವ್ ಸಾಕಷ್ಟು ಪ್ರಯತ್ನಿಸಿದರೂ, ತನ್ನ ಪ್ರಶ್ನೆಯಿಂದ ಸಿಟ್ಟಿಗೆದ್ದ ಜನರು ತನ್ನ ಮೇಲೆ ತಿರುಗಿ ಬೀಳಬಹುದು ಎಂಬ ಭಯದಿಂದ ಸುಮ್ಮನಾಗಿದ್ದಾರೆ.
ಮುಂಬೈ(ಡಿ.03): ಭಾರತೀಯರ ಮದುವೆ ದಿಬ್ಬಣವನ್ನು ನೋಡುವುದೇ ಒಂದು ಸಂಭ್ರಮ. ಅದ್ಧೂರಿಯಾಗಿ ಎಂಟ್ರಿ ಕೊಡುವ ದಿಬ್ಬಣದಲ್ಲಿ ಎಲ್ಲರೂ ತಮ್ಮ ತಮ್ಮ ಸ್ಟೈಲ್'ನಲ್ಲೇ ಡ್ಯಾನ್ಸ್ ಮಾಡುತ್ತಿರುತ್ತಾರೆ. ಈ ವೇಳೆ ವರ ಮಾತ್ರ ಸಿಂಗಾರಗೊಂಡ ಕುದುರೆ ಮೇಲೆ ಕುಳಿತಿರುತ್ತಾನೆ ಇದು ಈವರೆಗಿದ್ದ ಸಂಪ್ರದಾಯ. ಆದರೆ ಮುಂಬೈ ಮದುವೆ ದಿಬ್ಬಣದಲ್ಲೊಂದು ವಿಚಿತ್ರ ದೃಶ್ಯ ಕಂಡು ಬಂದಿದ್ದು, ಅದನ್ನು ಕಂಡವರೆಲ್ಲಾ ಹೀಗೂ ಉಂಟೇ? ಎಂಬ ಗೊಂದಲದಲ್ಲಿದ್ದಾರೆ.
ಈ ಮದುವೆ ದಿಬ್ಬಣದಲ್ಲೂ ಪ್ರತಿಯೊಬ್ಬರೂ ಕುಣಿಯುತ್ತಿದ್ದರು ಆದರೆ ಇದ್ದ ವ್ಯತ್ಯಾಸವೆಂದರೆ ಕುದುರೆ ಮೇಲೆ ಸವಾರನಾಗಿದ್ದು ಮದುಮಗಳು!. ಈ ವಿಭಿನ್ನ ದಿಬ್ಬಣ ದಾರಿಯಲ್ಲಿ ಸಾಗುತ್ತಿದ್ದ ವೈಭವ್ ವಿಶಾಲ್ ಎಂಬವರ ಕಣ್ಣಿಗೆ ಕಂಡಿದ್ದು, ತಕ್ಷಣವೇ ಇವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಮದುವೆ ಯಾವ ಸಮುದಾಯದವರದ್ದು ಎಂಬ ವಿಚಾರವನ್ನು ತಿಳಿದುಕೊಳ್ಳಲು ವೈಭವ್ ಸಾಕಷ್ಟು ಪ್ರಯತ್ನಿಸಿದರೂ, ತನ್ನ ಪ್ರಶ್ನೆಯಿಂದ ಸಿಟ್ಟಿಗೆದ್ದ ಜನರು ತನ್ನ ಮೇಲೆ ತಿರುಗಿ ಬೀಳಬಹುದು ಎಂಬ ಭಯದಿಂದ ಸುಮ್ಮನಾಗಿದ್ದಾರೆ.
ಸದ್ಯ ತಮ್ಮ ಫೇಸ್'ಬುಕ್'ನಲ್ಲಿ ಈ ಫೋಟೋವನ್ನು ವೈಭವ್ ಅಪ್ಲೋಡ್ ಮಾಡಿದ್ದು, ವೈರಲ್ ಆಗುತ್ತಿದೆ.