Asianet Suvarna News Asianet Suvarna News

Viral Video : ಇನ್ನೇನು ಮುಗಿತು ಕಥೆ ಎನ್ನುವಾಗ್ಲೇ ಗ್ರೇಟ್ ಎಸ್ಕೇಪ್..! ಜೀವನ ಪಾಠ ಹೇಳುತ್ತೆ ಈ ವಿಡಿಯೋ

ಮೊಸಳೆ ಬಾಯಿಂದ ತಪ್ಪಿಸಿಕೊಳ್ಳೋದು ಸವಾಲಿನ ಕೆಲಸ. ಆದ್ರೆ ನಮ್ಮ ಹುಂಜ ಇದನ್ನು ಮಾಡಿ ತೋರಿಸಿದೆ. ಒಂದಲ್ಲ ಎರಡಲ್ಲ ಗುಂಪಿಗೆ ಗುಂಪೇ ಅಟ್ಯಾಕ್ ಮಾಡಿದ್ರೂ ಪ್ರಾಣ ರಕ್ಷಿಸಿಕೊಳ್ಳೋದ್ರಲ್ಲಿ ಹುಂಜ ಯಶಸ್ವಿಯಾಗಿದೆ. 
 

Video Chicken Saved His Life From Herd Of Crocodiles roo
Author
First Published Jul 11, 2023, 2:50 PM IST

ಅರೆ ಕ್ಷಣದಲ್ಲಿ ಸಾವಿನ ದವಡೆಯಿಂದ ತಪ್ಪಿಸಿಕೊಂಡವನಿಗೆ ಆ ಸಮಯದ ಮಹತ್ವ ಅರ್ಥವಾಗುತ್ತದೆ. ಆಗ ಆತನ ಮನಸ್ಸಿನಲ್ಲಾಗುವ ತಳಮಳ, ಭಯ, ಗೊಂದಲವನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಇನ್ನೇನು ನನ್ನ ಕಥೆ ಮುಗಿದೇ ಹೋಯ್ತು ಎನ್ನುವ ಸಮಯದಲ್ಲಿ ಬುದ್ದಿವಂತಿಕೆ ಉಪಯೋಗಿಸಿ ಉಳಿದು ಬಂದವನಿಗೆ ಅದೊಂದು ಮರುಜನ್ಮ. ಒಂದೇ ಬಾರಿ ಒಬ್ಬ ಬಲಶಾಲಿ ಅಟ್ಯಾಕ್ ಮಾಡಿದ್ರೆ ತಪ್ಪಿಸಿಕೊಳ್ಳೋದು ಕಷ್ಟ. ಹಾಗಿರುವಾಗ 20ಕ್ಕೂ ಹೆಚ್ಚು ಯಮದೂತರು ಒಟ್ಟಿಗೆ ಕಾಣಿಸಿಕೊಂಡ್ರೆ ಅವರಿಂದ ಪ್ರಾಣ ರಕ್ಷಿಸಿಕೊಂಡು ಬರೋದು ಒಂದು ಸವಾಲು. ಅದನ್ನು ಈ ಹುಂಜವೊಂದು ಮಾಡಿದೆ. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನೀರಿನಲ್ಲಿರುವ ಉಗ್ರ ಪ್ರಾಣಿ ಮೊಸಳೆ (Crocodile). ಅದು ಸದ್ದಿಲ್ಲದೆ ಬಂದು ಬೇಟೆಯಾಡುವ ಚಾಣಾಕ್ಷತನ ಹೊಂದಿದೆ. ಒಂದು ಮೊಸಳೆ ಇದ್ರೂ ಆ ಜಾಗಕ್ಕೆ ಬೋರ್ಡ್ ಬಿದ್ದಿರುತ್ತದೆ. ಮೊಸಳೆಯಿದೆ ಎಚ್ಚರಿಕೆ ಎಂದು. ಯಾಕೆಂದ್ರೆ ಮೊಸಳೆ ಬಾಯಿಗೆ ಹೋದವರನ್ನು ರಕ್ಷಿಸುವುದು ಕಷ್ಟಸಾಧ್ಯ. ಭಯಾನಕ ಮೊಸಳೆಗಳನ್ನು ನೋಡಿದ್ರೆ ನಡುಕ ಬರುತ್ತೆ. ಒಂದಲ್ಲ ಎರಡಲ್ಲ ಇಂಥ ಮೊಸಳೆಯ ಗುಂಪೇ ಎದುರು ಬಂದ್ರೆ ಎಂಥವನ ಮೈ ಆದ್ರೂ ಬೆವರುತ್ತೆ. ಅಲ್ಲಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಅವುಗಳ ದೊಡ್ಡ ಬಾಯಿ ಸೇರುವ ಭಯ, ಬುದ್ದಿಯನ್ನು ಮಂಕು ಮಾಡುತ್ತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆದ ಈ ವಿಡಿಯೋದಲ್ಲಿರುವ ಹುಂಜ, ಚಾಲಾಕಿತನದಿಂದ ಮೊಸಳೆಗಳ ಬಾಯಿಯಿಂದ ತಪ್ಪಿಸಿಕೊಂಡು ತನ್ನ ಜೀವ (Life) ರಕ್ಷಿಸಿಕೊಂಡಿದೆ. ಮೊಸಳೆಯ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ @BillyM2k ನಲ್ಲಿ ಹಂಚಿಕೊಳ್ಳಲಾಗಿದೆ. ಚಿಕನ್ ಸ್ಕೇಪ್ ಎಂದು ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋವನ್ನು ಈವರೆಗೆ 12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 15 ಸಾವಿರ ಲೈಕ್‌ ಬಂದಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಈ ದೇಶದಲ್ಲಿರೋ ಹುಡುಗೀನ ಮದ್ವೆಯಾದ್ರೆ ಭರ್ತಿ ಮೂರು ಲಕ್ಷ ಸಿಗುತ್ತಂತೆ!

ವಿಡಿಯೋದಲ್ಲಿ ಏನಿದೆ?:  ಕೇವಲ 10 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ಹುಂಜವು 20 ರಿಂದ 25 ಮೊಸಳೆಗಳ ನಡುವೆ ಸಿಕ್ಕಿಬೀಳುವುದನ್ನು ನಾವು ನೋಡಬಹುದು. ಕೆಲವು ಮೊಸಳೆಗಳು ನೀರಿನ ಅಡಿಯಲ್ಲಿವೆ. ಕೆಲವು ದಡದಲ್ಲಿವೆ. ಹುಂಜವು ಕೊಳದ ದಡವನ್ನು ತಲುಪಿದ ತಕ್ಷಣ ಮೊಸಳೆಗಳು ಅದರ ಮೇಲೆ ದಾಳಿ ಮಾಡುತ್ತವೆ. ಒಂದಾದ್ಮೇಲೆ ಒಂದರಂತೆ ಮೊಸಳೆಗಳು ದಾಳಿ ಮಾಡೋದನ್ನು ನೀವು ನೋಡ್ಬಹುದು. ಇನ್ನೇನು ಮೊಸಳೆ ಬಾಯಿಗೆ ಹೋಯ್ತು ಎನ್ನುಷ್ಟರಲ್ಲಿ ಹುಂಜ ಹಾರೋದನ್ನು ನೀವು ನೋಡ್ಬಹುದು. ಒಂದು ಬಾರಿಯಂತೂ ನಾಲ್ಕೈದು ಮೊಸಳೆಗಳು ಒಟ್ಟಿಗೆ ಬಾಯಿ ಹಾಕುತ್ತವೆ. ಅದನ್ನು ನೋಡಿದ್ರೆ ನಮ್ಮ ಮೈ ಜುಮ್ ಎನ್ನುತ್ತದೆ. ಅದು ಹೇಗೋ, ಒಂದಾದ್ಮೇಲೆ ಒಂದರಂತೆ ಕಾದು ಕುಳಿತಿದ್ದ ಎಲ್ಲ ಮೊಸಳೆಗಳ ಬಾಯಿಂದ ತಪ್ಪಿಸಿಕೊಂಡ ಹಿಂಜ ಕೊನೆಯಲ್ಲಿ ಗೋಡೆ ಬಳಿ ಹೋಗಿ ಪ್ರಾಣ ಉಳಿಸಿಕೊಳ್ಳುತ್ತದೆ. 

Viral Video : ಇಷ್ಟೊಂದು ವೀವ್ಸ್ ಪಡೆದಿರೋ ಈ ವಿಡಿಯೋದಲ್ಲಿ ಅಂಥದ್ದೇನಿದೆ?

ಸೋಶಿಯಲ್ ಮೀಡಿಯಾ ಬಳಕೆದಾರರು, ಹುಂಜ ಸಾವನ್ನು ಮುಟ್ಟಿ ಮತ್ತೆ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ಜನರು ತಮ್ಮ ಜೀವನಕ್ಕೆ ಹೋಲಿಕೆ ಮಾಡಿ ನೋಡಿದ್ದಾರೆ. ಹುಂಜ ನಮ್ಮ ಜೀವ. ಮೊಸಳೆ ನಮ್ಮ ಜೀವನದಲ್ಲಿ ಬರುವ ಕಷ್ಟಗಳಾಗಿವೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಇದನ್ನೇ ಜೀವನ ಎಂದು ಕರೆಯೋದು ಎಂದಿದ್ದಾರೆ. ಮೊಸಳೆಗಳ ನಡುವಿನಿಂದ ಹೊರಬಂದ ಹುಂಜದ  ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಯಮರಾಜ ಇಂದು ರಜೆಯಲ್ಲಿದ್ದ. ಹಾಗಾಗಿ ಹುಂಜದ ಪ್ರಾಣ ಉಳಿದಿದೆ ಎಂದಿದ್ದಾರೆ.  
 

Follow Us:
Download App:
  • android
  • ios