ಈ ವಾರವು ನಿಮಗೆ ಹೇಗಿರಲಿದೆ : ಯಾವ ಘಟನೆಗಳು ಸಂಭವಿಸಲಿದೆ..?

life | Sunday, May 20th, 2018
Suvarna Web Desk
Highlights

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ..? ತಿಳಿಯಿರಿ ವಾರ ಭವಿಷ್ಯದ ಮೂಲಕ

ಮೇಷ
ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ
ವಾಗಿ ಯಾವುದೇ ವಿಚಾರಗಳಲ್ಲಿ ಸಕ್ರಿಯವಾಗುವುದು
ಬೇಡ. ಮನೆಯಲ್ಲಿ ಶುಭಕಾರ್ಯಗಳು ನೆರವೇರಲಿವೆ.
ತಂದೆ-ತಾಯಿಗಳ ಬೆಂಬಲದಿಂದ ನೂತನ ಉದ್ಯಮವನ್ನು
ಆರಂಭ ಮಾಡುವಿರಿ. ಸ್ನೇಹಿತರೊಂದಿಗೆ ಆರ್ಥಿಕ ವ್ಯವಹಾರ
ಬೇಡ. ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನಗಳಿವು. 

ವೃಷಭ
ನಿಮ್ಮ ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು
ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಹುಷಾರಾಗಿರಿ.
ಗೆಳೆಯರ ಮಾತಿಗೆ ಹೆಚ್ಚು ಬೆಲೆ ನೀಡುವಿರಿ.
ಆರೋಗ್ಯದ ಕಡೆ ಗಮನವಿರಲಿ. ಹತ್ತಿರದ ಬಂಧುಗಳಿಗೆ ಆರ್ಥಿಕ
ಸಹಾಯ ಮಾಡುವಿರಿ. ಸಂಬಂಧದಲ್ಲಿ ಸಣ್ಣ ಕೋಲಾಹಲ
ವಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಪ್ರಗತಿ.

ಮಿಥುನ
ಮೊದಲು ನಿಮ್ಮ ಕೆಲಸಗಳ ಕಡೆಗೆ ಗಮನವಿಡಿ.
ತದನಂತರ ಸ್ನೇಹಿತರಿಗೆ ನೆರವಾಗಿ. ಔದ್ಯೋಗಿಕವಾಗಿ
ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ.
ಆರೋಗ್ಯದಲ್ಲಿ ಸ್ಥಿರತೆ. ಶುಭ ಕಾರ್ಯಗಳು ಸನ್ನಿಹಿತವಾಗಲಿವೆ.
ಬಂಧು ಬಳಗದಿಂದ ನಿಮ್ಮ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ
ದೊರೆಯಲಿದೆ. ಸೂಕ್ತಿ ನಿರ್ಧಾರಗಳಿಂದ ಮುಂದುವರೆಯಿರಿ.

ಕಟಕ
ಸ್ವಲ್ಪ ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ವಾರ
ಪೂರ್ತಿ ಸಂತಸದಿಂದ ಇರುವಿರಿ. ನಿಧಾನವಾಗಿ
ಯೋಚಿಸಿ ಸಂಬಂಧ ಬೆಸೆಯಲು ಮುಂದಾಗಿ.
ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದರಲ್ಲಿ ನಂಬಿಕೆ ಇರಲಿ.
ಮನೆಗೆ ಹೊಸ ವಸ್ತುಗಳು ಬರಲಿವೆ. ಅಪರಿಚಿತ ವ್ಯಕ್ತಿಗಳ ಬಗ್ಗೆ
ಎಚ್ಚರಿಕೆ ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ ಬರಲಿ

ಸಿಂಹ
ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ
ಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದ
ಕೆಲಸ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ ಕೆಲಸಕ್ಕೆ
ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು ಪೂರ್ವ
ತಯಾರಿಯನ್ನು ಮಾಡಿಕೊಳ್ಳಿ. ಮಿತವ್ಯಯಕ್ಕೆ ಹೆಚ್ಚು
ಪ್ರಾಮುಖ್ಯತೆ ನೀಡಿ. ಮನೆಯವರೊಂದಿಗೆ ಸಂತಸವಾಗಲಿದೆ.

ಕನ್ಯಾ
ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ
ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಕೈಹಾಕಿದ
ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಚ್ಚು
ಮೊಬೈಲ್ ಬಳಕೆ ಒಳ್ಳೆಯದಲ್ಲ. ಕೆಲಸದ ಸ್ಥಳದಲ್ಲಿ ಅನಾವಶ್ಯಕ
ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. ನಿಮ್ಮ ಕೆಲಸಗಳಿಂದ ಹೆತ್ತವರು
ಹೆಮ್ಮೆ ಪಡಲಿದ್ದಾರೆ. ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ.

ತುಲಾ
ಆರೋಗ್ಯದ ಮೇಲೆ ಜಾಸ್ತಿ ನಿಗಾ ಇರಲಿ. ಕೆಲಸದ
ಒತ್ತಡ ನಿಭಾಯಿಸುವ ಶಕ್ತಿಯನ್ನು ಒಟ್ಟು
ಮಾಡಿಟ್ಟುಕೊಳ್ಳಿ. ಅಗತ್ಯವಾದ ವಿಚಾರಗಳ ಕಡೆಗೆ
ಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ ಮಾಡಿಕೊಳ್ಳಿ.
ರಾಜಕೀಯವಾಗಿ ಮುನ್ನಡೆ ಸಿಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗ
ಲಿದೆ. ಒಂದೇ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.

ವೃಶ್ಚಿಕ
ದೊಡ್ಡ ದೊಡ್ಡ ನಿರ್ಧಾರಗಳನ್ನು ಹೆಚ್ಚು ಸಮಯ
ಮುಂದೂಡಬೇಡಿ. ಮದುವೆ ಮೊದಲಾದ ಶುಭ
ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸ
ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು
ಎದುರಾಗಲಿವೆ. ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ
ಒಳ್ಳೆಯ ಫಲ ದೊರಕಲಿದೆ. ಸ್ವಂತ ಮನೆ ಕನಸು ಕೈಗೂಡಲಿದೆ.

ಧನಸ್ಸು
ಏನೋ ಅಂದುಕೊಂಡಿದ್ದರೂ ಆ ಕಡೆಗೆ ಗಮನ
ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವ
ರೊಂದಿಗೆ ಮೃದುವಾಗಿ ವರ್ತಿಸಿ, ಆರ್ಥಿಕವಾಗಿ
ಲಾಭವಾಗಲಿದೆ. ಕೋಪ ಬಂದಾಗ ಹೆಚ್ಚು ಮಾತನಾಡಲು
ಹೋಗಬೇಡಿ. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಮುಖ್ಯ.

ಮಕರ
ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕ ಬೇಡ.
ಮನೆಯಲ್ಲಿ ಮುನಿಸು ಬೇಡ. ಮಕ್ಕಳ ಪ್ರೀತಿಯಿಂದ
ಹೆಚ್ಚು ಸಂತೋಷಪಡುವಿರಿ. ಅಂದುಕೊಂಡಂತೆ
ಮಹತ್ವದ ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ
ಇಡಿ. ಖರ್ಚಿನಲ್ಲಿ ಮಿತ ಸಾಧಿಸಿದರೆ ಭವಿಷ್ಯದಲ್ಲಿ ಒಳಿತಾಗಲಿದೆ

ಕುಂಭ
ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ
ಪ್ರಯಾಣ ದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಅತಿ ಭಾವುಕತೆ ಒಳ್ಳೆಯದಲ್ಲ. ಜಗತ್ತು ನೀವಂದು
ಕೊಂಡ ಹಾಗೆ ಇಲ್ಲ. ತಂದೆ ತಾಯಿ ಆರೋಗ್ಯದಲ್ಲಿ ಸುಧಾರಣೆ.
ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು
ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ.

ಮೀನ
ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಸಕ್ತರಿಗೆ ನೆರವಾಗುವಿರಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Sujatha NR