Asianet Suvarna News Asianet Suvarna News

ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ವರದಿ ಲೀಕ್‌ ಮಾಡಿದ ವಿಶ್ವವಿದ್ಯಾಲಯ

ವಿಶ್ವವಿದ್ಯಾನಿಲಯವೊಂದು ವಿದ್ಯಾರ್ಥಿಗಳು ತಲೆ ತಗ್ಗಿಸುವ ಕೆಲಸ ಮಾಡಿದೆ. ವಿದ್ಯಾರ್ಥಿನಿಯರ ಕನ್ಯತ್ವ ಮಾಡಿಸಿದ್ದಲ್ಲದೆ ಅದನ್ನು ಎಲ್ಲೆಡೆ ಜಗಜ್ಜಾಹಿರಗೊಳಿಸಿದೆ. ಯಾಕೆ ಈ ಪರೀಕ್ಷೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 
 

University Leaked Female Students Virginity Status  roo
Author
First Published Feb 16, 2024, 3:44 PM IST

ಶಾಲೆ ಇರಲಿ, ವಿಶ್ವವಿದ್ಯಾನಿಲಯ ಇರಲಿ ಅಡ್ಮಿಷನ್ ವೇಳೆ ಜನನ ದಾಖಲೆ, ಹೆಸರು, ಜಾತಿ ಸೇರಿದಂತೆ ಕೆಲ ಮಾಹಿತಿಯನ್ನು ಕೇಳುತ್ತವೆ. ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ನೀಡಬೇಕಾಗುತ್ತದೆ. ಇದ್ರ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಅತ್ಯವಿರುವ ಕಾರಣ ಕೆಲ ಶಾಲೆ- ಕಾಲೇಜಿನಲ್ಲಿ ರಕ್ತದ ಗುಂಪಿನ ಬಗ್ಗೆ ವಿವರ ಕೇಳೋದಿದೆ. ಆದ್ರೆ ಈ ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆ ಅಚ್ಚರಿ ಹುಟ್ಟಿಸುವಂತಿದೆ. ವಿಶ್ವವಿದ್ಯಾನಿಲಯ ಕನ್ಯತ್ವ ಪರೀಕ್ಷೆ ನಡೆಸಿದೆ. ಅಷ್ಟೇ ಅಲ್ಲ ಕನಿಷ್ಠ 190 ವಿದ್ಯಾರ್ಥಿನಿಯರ ಕನ್ಯತ್ವದ ವರದಿ ವಿಶ್ವವಿದ್ಯಾಲಯದಲ್ಲಿ ಸೋರಿಕೆಯಾಗಿದೆ. ವಿಶ್ವವಿದ್ಯಾನಿಲಯ ಕನ್ಯತ್ವ ಪರೀಕ್ಷೆಯನ್ನು ಏಕೆ ಮಾಡಿಸಿತ್ತು ಎಂಬ ಕಾರಣ ತಿಳಿದುಬಂದಿಲ್ಲ. ಆದ್ರೆ ವಿಶ್ವವಿದ್ಯಾನಿಲಯದ ಮೆಡಿಕಲ್ ಅಧಿಕಾರಿಗಳು ವರದಿಯನ್ನು ಸೋರಿಕೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಅವರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. 

ಘಟನೆ ಕಝಾಕಿಸ್ತಾನ್ (Kazakhstan) ಅಲ್-ಫರಾಬಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ವಿದ್ಯಾರ್ಥಿಗಳ ಹೆಸರು, ವಯಸ್ಸು, ಫೋನ್ ನಂಬರ್ ಅಲ್ಲದೆ ಟ್ಯಾಕ್ಸ್ ಕೋಡ್ ಕೂಡ ಲೀಕ್ ಆದ ಪಟ್ಟಿಯಲ್ಲಿದೆ.  ವಿಶ್ವವಿದ್ಯಾನಿಲಯ (University) ದ ಅನೇಕ ಸಾಮಾಜಿಕ ಜಾಲತಾಣ ಗುಂಪಿನಲ್ಲಿ ಕನ್ಯತ್ವ (Virginity) ಪರೀಕ್ಷೆ ವರದಿಯನ್ನು ಹಂಚಿಕೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ಮೆಡಿಕಲ್ ವಿಭಾಗದ ವೈದ್ಯಕೀಯ ಕೇಂದ್ರದಲ್ಲಿ ಸ್ತ್ರೀರೋಗತಜ್ಞರು, ವಿದ್ಯಾರ್ಥಿನಿಯರನ್ನು ಪರೀಕ್ಷೆ ಮಾಡಿದ್ದರು ಎಂಬುದು ಪತ್ತೆಯಾಗಿದೆ. ವಿಶ್ವವಿದ್ಯಾನಿಲಯ ಎಷ್ಟು ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ಮಾಡಿದೆ ಎಂಬುದು ತಿಳಿದು ಬಂದಿಲ್ಲ. ಆದ್ರೆ ಕನಿಷ್ಠ  190 ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ವರದಿ ಲೀಕ್ ಆಗಿದೆ. 

ಗಂಡಂದಿರಿಗೆ ಒಂದು ವಾರದ ಚಾಲೆಂಜ್​ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್​! ಏನಿದು ವಿಷ್ಯ?

ಕನ್ಯತ್ವ ಪರೀಕ್ಷೆ ವರದಿಯ ಡೇಟಾವನ್ನು ವಿಶ್ವವಿದ್ಯಾನಿಲಯದ ಶಿಕ್ಷಕರಲ್ಲದೆ, ವಿದ್ಯಾರ್ಥಿಗಳು ನೋಡಿದ್ದಾರೆ. ಕನ್ಯತ್ವ ಪರೀಕ್ಷೆಗೆ ಒಳಗಾಗಿರುವ ಹಾಗೂ ಪಟ್ಟಿಯಲ್ಲಿ ಹೆಸರು ಬಂದಿರುವ ವಿದ್ಯಾರ್ಥಿಯೊಬ್ಬಳು ಇದ್ರ ಬಗ್ಗೆ ಮಾತನಾಡಿದ್ದಾಳೆ. ನಮ್ಮ ವೈಯಕ್ತಿಕ ಡೇಟಾವು ಪ್ರತಿ ಲ್ಯಾಂಪ್ ಪೋಸ್ಟ್‌ನಲ್ಲಿ ಹಾಕಲಾಗಿದೆ ಎಂದಿದ್ದಾಳೆ. ವಿಚಿತ್ರ ವೈದ್ಯಕೀಯ ಪರೀಕ್ಷೆಯ ನಂತರ, ಅವರು ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚಾಟ್ ರೂಮ್‌ನಲ್ಲಿ ಇರಿಸಲಾಗಿದೆ. ಕಝಾಕಿಸ್ತಾನ್‌ನಲ್ಲಿ ಖಾಸಗಿತನ ಉಲ್ಲಂಘನೆಯಾಗಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಆರೋಪಿಸಿದ್ದಾರೆ. ವಿಶ್ವವಿದ್ಯಾನಿಲಯ ಇದ್ರಲ್ಲಿ ತನ್ನ ತಪ್ಪಿಲ್ಲ ಎಂದಿದೆ. ಅಲ್ಲದೆ ವಿಶ್ವವಿದ್ಯಾನಿಲಯವು ತಪ್ಪಿಗೆ ಕಾರಣವಾದ ವೈದ್ಯಕೀಯ ಕೇಂದ್ರದೊಂದಿಗಿನ ತನ್ನ ಒಪ್ಪಂದವನ್ನು ಕೊನೆಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ. ಆದ್ರೆ ಕನ್ಯತ್ವ ಪರೀಕ್ಷೆ ವರದಿಯ ಡೇಟಾ ಲೀಕ್ ಆಗಿರುವ ವಿದ್ಯಾರ್ಥಿಗಳ ಬಗ್ಗೆ ವಿಶ್ವವಿದ್ಯಾನಿಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿದ್ಯಾರ್ಥಿಗಳಿಗೆ ಕ್ಷಮೆ ಕೇಳಿಲ್ಲ. 

ಐದು ವಾಷ್‌ನಲ್ಲೇ ಮಬ್ಬಾದ ದುಬಾರಿ ಜೀನ್ಸ್‌, ಆದಿತ್ಯ ಬಿರ್ಲಾ ಫ್ಯಾಷನ್‌ ಮೇಲೆ ಕೇಸು ಹಾಕಿ 5 ಸಾವಿರ ರೀಫಂಡ್‌ ಪಡೆದ!

ಕಝಾಕಿಸ್ತಾನ್‌ನ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್ ಇದನ್ನು ಖಂಡಿಸಿದ್ದಾರೆ. ಇದೊಂದು ಆಘಾತಕಾರಿ ಪ್ರಕರಣ ಎಂದು ಅವರು ಹೇಳಿದ್ದಾರೆ. ವೈಯಕ್ತಿಕ ಡೇಟಾ ವರ್ಗಾವಣೆ, ವಿಶೇಷವಾಗಿ ಔಷಧಕ್ಕೆ ಸಂಬಂಧಿಸಿದ ಡೇಟಾ ಬಹಿರಂಗಪಡಿಸಿರುವುದು  ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ತನಿಖೆ ಶುರುವಾಗಿದೆ ಎಂದಿರುವ ಸಯಾಸತ್ ನುರ್ಬೆಕ್, ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. 

ಕನ್ಯತ್ವ ಪರೀಕ್ಷೆ ಹೇಗೆ ನಡೆಯುತ್ತದೆ? : ಭಾರತದಲ್ಲಿ ಎರಡು ಬೆರಳು ಪರೀಕ್ಷೆ (TFT)ಯನ್ನು ಬಳಸಿಕೊಂಡು ಅತ್ಯಾಚಾರ ಸಂತ್ರಸ್ತೆಯ ಯೋನಿಯ ನಮ್ಯತೆಯನ್ನು ಪರಿಶೀಲಿಸಲಾಗುತ್ತದೆ. ಸೇರಿಸಲಾದ ಬೆರಳುಗಳ ಸಂಖ್ಯೆಯನ್ನು ಆಧರಿಸಿ, ಮಹಿಳೆ ಸಕ್ರಿಯ ಲೈಂಗಿಕ ಜೀವನವನ್ನು ಹೊಂದಿದ್ದಾಳೆ ಅಥವಾ ಇಲ್ಲವೇ ಎಂದು ವೈದ್ಯರು ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ಭಾರತದಲ್ಲಿ ವೈದ್ಯರಿಗೆ ಇದನ್ನು ಪರೀಕ್ಷೆ ಮಾಡುವಂತೆ ಸೂಚನೆ ನೀಡುವ ಯಾವುದೇ ಅಧಿಕಾರ ಇಲ್ಲ. ಪುರುಷರಿಗೂ ಇದ್ರ ಪರೀಕ್ಷೆ ನಡೆಯುತ್ತದೆ. ಅವರಿಗೂ ಪೊರೆ ಇರುತ್ತದೆ. ಪೆನಿಸ್ ಮೇಲಿನ ಚರ್ಮ ಸುಲಭವಾಗಿ ಜಾರಿದಾಗ ಹುಡುಗ ವರ್ಜಿನಿಟಿ ಕಳೆದುಕೊಂಡಿದ್ದಾನೆ ಎಂದರ್ಥ. 

Follow Us:
Download App:
  • android
  • ios