ಅಂಜಲಿ ಹತ್ಯೆ ಬಳಿಕ ಪಾತಕಿ ಹೋಗಿದ್ದೆಲ್ಲಿಗೆ, ಸಿಕ್ಕಿಬಿದ್ದಿದ್ದು ಹೇಗೆ? ಟ್ರಾವಲ್ ಹಿಸ್ಟರಿ ಇಲ್ಲಿದೆ ನೋಡಿ!
ಹುಬ್ಬಳ್ಳಿಯಲ್ಲಿ ಅಂಜಲಿ ಕತ್ತು ಸೀಳಿ ಪರಾರಿಯಾಗಿದ್ದ ಪಾತಕಿ ಗಿರೀಶ್, ರೈಲಿನ ಕ್ರಿಮಿನಲ್ ಬುದ್ಧಿ ತೋರಿಸಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದ. ಹತ್ಯೆ ಬಳಿಕ ಎಲ್ಲೆಲ್ಲಿ ಹೋಗಿದ್ದ ಗೊತ್ತಾ? ಹಂತಕನ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ
ಹುಬ್ಬಳ್ಳಿ (ಮೇ.18): ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಮರ್ಡರ್ ಕೇಸ್ ಇಡೀ ರಾಜ್ಯದಲ್ಲಿ ಸದ್ದು ಮಾಡ್ತಿದೆ. ಪ್ರತಿಭಟನೆಗಳು ರಾಜಕೀಯ ಕೆಸರೆರಚಾಟ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೂ ಅಂಜಲಿ ಕತ್ತು ಕತ್ತರಿಸಿ ಎಸ್ಕೇಪ್ ಆಗಿದ್ದ ಹಂತಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಪಾತಕಿ ಗಿರೀಶ ಊರೂರು ಸುತ್ತಿ ಕೊನೆಗೆ ಹೊರ ರಾಜ್ಯಕ್ಕೆ ಎಸ್ಕೇಪ್ ಆಗುವ ಪ್ಲಾನ್ ಮಾಡಿದ್ದ. ಆದ್ರೆ ಅವನೇ ಮಾಡಿಕೊಂಡ ಒಂದು ಎಡವಟ್ಟು ತಾನಾಗೇ ಬಂದು ಪೊಲೀಸರ ಕೈಗೆ ಬಲೆಗೆ ಬೀಳುವಂತೆ ಮಾಡಿದೆ. ಇನ್ನು ಆರೋಪಿಯನ್ನ ಹಿಡಿದು ಪೊಲೀಸರು ವಿಚಾರಣೆ ಮಾಡುವ ಮುನ್ನವೇ ಗಿರೀಶ ಕೋಮಾಗೆ ಹೋಗಿಬಿಟ್ಟಿದ್ದಾನೆ. ಹಾಗಾದ್ರೆ ಅಂಜಲಿ ಮರ್ಡರ್ ಮಾಡಿದ್ದ ಪಾತಕಿಗೆ ಆಗಿದ್ದೇನು? ನಿನ್ನೆ ಅಂಜಲಿ ಅಂತ್ಯಕ್ರಿಯೆ ನಂತರ ಏನೇನಾಯ್ತು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ತಾನು ಕೆಲಸ ಮಾಡ್ತಿದ್ದ ಜಾಗದಲ್ಲೇ ಅಡ್ವಾನ್ಸ್ ತೆಗೆದುಕೊಂಡು ಬಂದ ಪಾತಕಿ ಗಿರೀಶ ಅಂಜಲಿ ಕಥೆ ಮುಗಿಸಿ ಎಸ್ಕೇಪ್ ಆಗಿದ್ದ. ಆದ್ರೆ ಅವನ ಹಿಂದೆ ಬಿದ್ದ ಪೊಲೀಸರು 8 ತಂಡಗಳನ್ನ ರಚನೆ ಮಾಡಿ ಹುಡುಕಿದ್ರು ಅವನು ಪತ್ತೆಯಾಗಿರಲಿಲ್ಲ. ಆದ್ರೆ ತಾನು ಎಸ್ಕೇಪ್ ಆಗಲು ಹತ್ತಿದ್ದ ಟ್ರೇನ್ನಲ್ಲಿ ಅವನೇ ಮಾಡಿಕೊಂಡ ಎಡವಟ್ಟು, ಕ್ರಿಮಿನಲ್ ಬುದ್ಧಿ ತೋರಿಸಿದ ಪರಿಣಾಮ ಪೊಲೀಸರಿಗೆ ಬಲೆ ಬೀಳುವಂತಾಯ್ತು.
ಹುಬ್ಬಳ್ಳಿ: ನಮ್ಮ ಅಕ್ಕನ ಕೊಂದವನ ಎನ್‌ಕೌಂಟರ್ ಮಾಡಿ, ಯಶೋದಾ ಅಂಬಿಗೇರ
ಅಂಜಲಿ ಕೊಲೆಯ ನಂತರ ಅವನ ಟ್ರಾವಲ್ ಹಿಸ್ಟರಿ ಹೇಗಿತ್ತು ಗೊತ್ತಾ?
ಬೆಳ್ಳಂಬೆಳಗ್ಗೆ ಅಂಜಲಿ ಕಥೆ ಮುಗಿಸಿದ ಗಿರೀಶ ಸೀದಾ ಹಾವೇರಿ ಬಸ್ ಹತ್ತಿದ್ದ. ಅಲ್ಲಿಂದ ಮತ್ತೆ ಆತ ತಾನು ಕೆಲಸ ಮಾಡ್ತಿದ್ದ ಮೈಸೂರಿಗೆ ಹೋಗಿದ್ದಾನೆ. ಆದ್ರೆ ಆತ ಅಲ್ಲಿ ಹೋಗುವಷ್ಟರಲ್ಲಿ ಅವನ ಘನಂಧಾರಿ ಕೆಲಸದ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಗೊತ್ತಾಗಿತ್ತು. ಸೋ ಅಲ್ಲಿಂದಲೂ ಎಸ್ಕೇಪ್ ಆಗಿ ಮತ್ತೆ ಹುಬ್ಬಳ್ಳಿ ಟ್ರೇನ್ ಹತ್ತಿದ್ದಾನೆ. ಆದ್ರೆ ಅದೇ ಟ್ರೇನ್ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಸಿದ್ದರಿಂದ ಅಲ್ಲಿಯೂ ಪ್ರಯಾಣಿಕರಿಂದ ಏಟು ತಿಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೈಕಾಲು ಮುರಿದರೂ ಚಿಂತೆಯಿಲ್ಲ ಜೀವ ಉಳಿದರೆ ಸಾಕು ಅಂದುಕೊಂಡು ರೈಲಿನಿಂದಲೇ ಜಿಗಿದಿದ್ದಾನೆ. ಆದ್ರೆ ಜಿಗಿಯುವ ವೇಳೆ ತಲೆ ಮತ್ತು ಮುಖಕ್ಕೆ ಪೆಟ್ಟು ಮಾಡಿಕೊಂಡಿದ್ದಾನೆ. ಅಲ್ಲಿಗೆ ಬಂದಿದ್ದ ಪೊಲೀಸರಿಗೂ ಮೊದಲಿಗೆ ಅವನು ಕೊಲೆ ಪಾತಕಿ ಎಂಬುದೇ ತಿಳಿದಿಲ್ಲ. ಬಳಿಕ ಪೊಲೀಸರು ಅವನು ಗುರುತು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆದರೆ ಅವನಿಗೆ ಗಂಭೀರ ಗಾಯ ಆಗಿದ್ದರಿಂದ ಪೊಲೀಸರು ಅವನನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಅವನನ್ನ ವಿಚಾರಣೆಗೊಳಪಡಿಸೋಕೆ ಆಗದಷ್ಟು ಕೋಮಾ ಸ್ಥಿತಿಗೆ ಜಾರಿದ್ದಾನೆ.
ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ: ಸಚಿವ ಡಿ ಸುಧಾಕರ್
ಆದ್ರೆ ಆತ ಸಿಕ್ಕಿಹಾಕಿಕೊರ್ಳಳುವಾಗ ಅಂಜಲಿ ಸಹ ನನ್ನನ್ನ ಪ್ರೀತಿಸುತ್ತಿದ್ದಳು ಅಂತಾ ಹೇಳಿದ್ದಾನೆ. ಅದು ಎಷ್ಟು ಸತ್ಯ ಅನ್ನೋದನ್ನ ಪತ್ತೆ ಮಾಡಬೇಕಾದ್ರೆ ಅವನು ಚೇತರಿಕೆ ಕಾಣಬೇಕು. ಅಲ್ಲಿವರೆಗೆ ಪೊಲೀಸರು ಕಾಯಲೇಬೇಕಾಗಿದೆ.