ನವದೆಹಲಿ[ಮೇ.17]: ಅಕ್ಕ ತಂಗಿ ನಡುವಿನ ಭಾಂದವ್ಯವೇ ವಿಶೇಷ. ಹಾವು ಮುಂಗುಸಿಯಂತೆ ಜಗಳವಾಡಿಕೊಂಡರೂ, ಕೆಲವೇ ಕ್ಷಣಗಳಲ್ಲಿ ಮುನಿಸು ಮರೆತು ಒಂದಾಗ್ತಾರೆ. ಪರಸ್ಪರ ಅದೆಷ್ಟೇ ಹೊಡೆದು ಬಡಿದಾಡಿಕೊಂಡರೂ, ನೋವಾದಾಗ ಪರಸ್ಪರ ಸಂತೈಸಿ ಮುಖದಲ್ಲಿ ನಗು ಮೂಡಿಸುವ ಗೆಳತಿಯರಾಗುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡಾ ಇಂತಹುದೇ ಭಾಂದವ್ಯಕ್ಕೆ ಸಾಕ್ಷಿಯಂತಿದೆ. ಅಕ್ಕನಿಗಾಗಿ ತಂಗಿ, ತಂಗಿಗಾಗಿ ಅಕ್ಕ... ಮುಖದಲ್ಲಿ ಕೊಂಚ ಅಳು ಕಂಡರೂ ಆಕೆಯನ್ನು ನಗಿಸಲು ಏನೇ ಮಾಡಲು ಸಿದ್ಧಳಾಗುತ್ತಾಳೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಕ್ಕ ತಂಗಿಯರ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ. ಕೇವಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ 2 ವರ್ಷದ ಪುಟ್ಟ ಕಂದಮ್ಮ, ಕೇವಲ ತನ್ನ ಅಕ್ಕನನ್ನು ಖುಷಿ ಪಡಿಸಲು ಕ್ಯಾಂಡಲ್ ನೀನೇ ಆರಿಸು ಎಂದು ಬಿಟ್ಟುಕೊಟ್ಟಿದ್ದಾಳೆ. 

ಹೌದು ಕೇಕ್ ಕತ್ತರಿಸಲು ಸಜ್ಜಾದ ತಂಗಿಯನ್ನು ಕಂಡು, ನನ್ನ ಹುಟ್ಟುಹಬ್ಬ ಇನ್ನೂ ಬಂದಿಲ್ಲವಲ್ಲ. ನನಗೀಗ ಕೇಕ್ ಕಟ್ ಮಾಡುವ ಅವಕಾಶವಿಲ್ಲವಲ್ಲ ಎಂದು ಅಳುತ್ತಾ ಕುಳಿತ್ತಿದ್ದಳು ಅಕ್ಕ. ಇದನ್ನು ಕಂಡ ತಂಗಿ, ಅಕ್ಕನನ್ನು ಖುಷಿ ಪಡಿಸಲು ಕೇಕ್ ಮೇಲಿದ್ದ ಕ್ಯಾಂಡಲ್ ನೀನೇ ಆರಿಸು ಎಂದು ಬಿಟ್ಟುಕೊಟ್ಟಿದ್ದಾಳೆ. ಇದನ್ನು ಕೇಳಿದ್ದೇ ತಡ ಅಕ್ಕನ ಮುಖದಲ್ಲಿ ಎಲ್ಲಿಲ್ಲದ ಸಂತಸ. ಅಕ್ಕನ ಮುಖದಲ್ಲಿ ನಗು ಕಂಡಿದ್ದೇ ತಡ ಇತ್ತ ತಂಗಿಯೂ ಬಹುದೊಡ್ಡ ಗಿಫ್ಟ್ ಪಡೆದಷ್ಟು ಸಂಭ್ರಮಿಸಿದ್ದಾಳೆ. 

ಸದ್ಯ ಈ ಪುಟ್ಟ ತಂಗಿ ನೆಟ್ಟಿಗರ ಮೋಸ್ಟ್ ಫೇವರಿಟ್ ಆಗಿದ್ದಾಳೆ. ಅಕ್ಕನ ಮೇಲೆ ಆಕೆ ಹೊಂದಿರುವ ಪ್ರೀತಿ ಕಂಡ ಅನೇಕರು 'ಆಕೆ ಇಬ್ಬರು ಅಣ್ಣಂದಿರಿಗೆ ಸಮಾನ' ಎಂದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.