ಕಾಡಿನ ರಾಜ ಸಿಂಹ ಹಾಗೂ ಮೊಸಳೆಯ ನಡುವೆ ಸ್ಪರ್ಧೆ ನಡೆದರೆ ಯಾರು ಗೆಲ್ಲಬಹುದು? ಈ ಪ್ರಶ್ನೆ ಬಹಳಷ್ಟು ಬಾರಿ ಚರ್ಚೆಯ ವಿಷಯವಾಗಿ ಮಾರ್ಪಾಡಾಗುತ್ತದೆ. ಆದರೀಗ ಬೋತ್ಸವಾನಾಗೆ ಸಫಾರಿಗಾಗಿ ತೆರಳಿದ ಪರ್ಯಟಕನೊಬ್ಬ ಈ ಎರಡು ಜೀವಿಗಳ ನಡುವಿನ ಕಾದಾಟವನ್ನು ಮೊಬೈಲ್'ನಲ್ಲಿ ಸೆರೆ ಹಿಡಿದು ಈ ಕುರಿತಾಗಿ ಚರ್ಚಿಸುವ ಪ್ರತಿಯೊಬ್ಬರಿಗೂ ಉತ್ತರ ನೀಡಿದ್ದಾರೆ.

ನವದೆಹಲಿ(ಮೇ.17): ಕಾಡಿನ ರಾಜ ಸಿಂಹ ಹಾಗೂ ಮೊಸಳೆಯ ನಡುವೆ ಸ್ಪರ್ಧೆ ನಡೆದರೆ ಯಾರು ಗೆಲ್ಲಬಹುದು? ಈ ಪ್ರಶ್ನೆ ಬಹಳಷ್ಟು ಬಾರಿ ಚರ್ಚೆಯ ವಿಷಯವಾಗಿ ಮಾರ್ಪಾಡಾಗುತ್ತದೆ. ಆದರೀಗ ಬೋತ್ಸವಾನಾಗೆ ಸಫಾರಿಗಾಗಿ ತೆರಳಿದ ಪರ್ಯಟಕನೊಬ್ಬ ಈ ಎರಡು ಜೀವಿಗಳ ನಡುವಿನ ಕಾದಾಟವನ್ನು ಮೊಬೈಲ್'ನಲ್ಲಿ ಸೆರೆ ಹಿಡಿದು ಈ ಕುರಿತಾಗಿ ಚರ್ಚಿಸುವ ಪ್ರತಿಯೊಬ್ಬರಿಗೂ ಉತ್ತರ ನೀಡಿದ್ದಾರೆ.

ಕೆರೆಯೊಂದರಲ್ಲಿ ಈಜಾಡಿಕೊಂಡು ಖುಷಿಯಾಗಿ ವಿಹರಿಸುತ್ತಿದ್ದ ಸಿಂಹಗಳ ಮೇಲೆ ಮೊಸಳೆಯೊಂದು ಸಮಯ ನೋಡಿ ದಾಳಿ ನಡೆಸಿದೆ. ಮೊಸಳೆಯ ಅನಿರೀಕ್ಷಿತ ದಾಳಿಯಿಂದ ಸಿಂಹಗಳು ಭಯಬಿದ್ದವಾದರೂ ಮೊಸಳೆಯಿಂದ ಪಾರಾಗಲು ತಾವೂ ಪ್ರತಿದಾಳಿ ನಡೆಸಿವೆ. ಸಿಂಹಗಳ ಪ್ರತಿದಾಳಿಗೆ ಭಯಬಿದ್ದ ಮೊಸಳೆ ಬೇರೆ ವಿಧಿ ಇಲ್ಲದೆ ಅಲ್ಲಿಂದ ಕಾಲ್ಕಿತ್ತಿದೆ. ವಿಡಿಯೋದಲ್ಲಿ ದಾಖಲಾದ ದೃಶ್ಯಗಳಲ್ಲಿ ಕೇವಲ ಒಂದೇ ಸಿಂಹ ಹಿಂತಿರುಗಿದ ದೃಶ್ಯ ಹಾಗೂ ಮೊಸಳೆ ಕಾಲ್ಕಿತ್ತಿ ದೃಶ್ಯಗಳಷ್ಟೇ ದಾಖಲಾಗಿದ್ದು, ಮತ್ತೊಂದು ಸಿಂಹ ತಪ್ಪಿದಿಕೊಂಡ ದೃಶ್ಯಗಳು ದಾಖಲಾಗಿಲ್ಲ. ಇಲ್ಲಿನ ಅಧಿಕಾರಿಗಳೂ ಸಿಂಹಗಳೆರಡೂ ಸುರಕ್ಷಿತವಾಗಿವೆ ಎಂಬ ಹೇಳಿಕೆ ನೀಡಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಿಂಹ ಎಲ್ಲಿದ್ದರೂ ರಾಜನೇ ಎಂಬ ಮಾತುಗಳು ಪ್ರೇಕ್ಷಕರ ಕಡೆಯಿಂದ ಸಾಮಾನ್ಯವಾಗಿವೆ.