ವೈರಸ್, ಫಂಗಸ್ ಕೊಲ್ಲುವ ಕೊಬ್ಬರಿ ಎಣ್ಣೆಯ ಉಪಯೋಗವೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Sep 2018, 1:31 PM IST
Top five health benefits of coconut oil
Highlights

ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೆ, ಚರ್ಮಕ್ಕೆ ಹಾಗೂ ಅಡುಗೆಗೆ ಬಳಸಲಾಗುತ್ತಿದೆ. ಕೇರಳದಂಥ ರಾಜ್ಯಗಳಲ್ಲಿ ಕೊಬ್ಬರಿ ಎಣ್ಣೆ ಜನರ ಅವಿಭಾಜ್ಯ ಅಂಗವಾಗಿದೆ. ಕೂದಲೂ ಹಾಗೂ ತ್ವಚೆಯ ಆರೋಗ್ಯಕ್ಕೆ ಅಗತ್ಯವಾದ ಈ ಎಣ್ಣೆಯಲ್ಲಿ ಅಂಥದ್ದೇನಿದೆ?

ಅಡುಗೆ ರುಚಿ ಹೆಚ್ಚಿಸುವ, ಕೂದಲನ್ನು ರೇಷ್ಮೆಯಂಥ ಮಾಡುವ ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಈ ಕೊಬ್ಬರಿ ಎಣ್ಣೆಯಲ್ಲಿ ಏನೇನಿವೆ ಆರೋಗ್ಯವನ್ನು ಕಾಪಾಡುವ ಅಂಶಗಳು...

  • ಕೊಬ್ಬರಿ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ಅಪಾಯರಹಿತ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಅಂದರೆ ಬೊಜ್ಜು ತರಿಸುವುದಿಲ್ಲ. ಬದಲಿಗೆ ಮೆದುಳು ಸಂಬಂಧಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯಕ.
  • ಅಲ್ಜೀಮರ್ಸ್‌ಗೆ ಉತ್ತಮ ಮದ್ದು. ಆಹಾರದಲ್ಲಿ ಅತಿ ಹೆಚ್ಚು ಕೊಬ್ಬರಿ ಎಣ್ಣೆ ಹಾಗೂ ಕಾಯಿ ಬಳಸುವವರು ಹೆಚ್ಚು ಆರೋಗ್ಯವಂತರೆಂಬುದು ಸಾಬೀತಾಗಿದೆ.
  • ಇದರಲ್ಲಿರುವ ಲಾರಿಕ್ ಆ್ಯಸಿಡ್ ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ಗಳನ್ನು ಕೊಲ್ಲುತ್ತವಾದ್ದರಿಂದ ಇನ್ಫೆಕ್ಷನ್‌ಗಳಿಂದ ದೂರ ಇಡುತ್ತದೆ.
  • ಕೂದಲಿನ ಆರೋಗ್ಯವನ್ನು ಕಾಪಾಡುವುದಲ್ಲದೆ ಚರ್ಮದ ಮೇಲೂ ಬಾಡಿಲೋಶನ್, ಸನ್‌ಸ್ಕ್ರೀನ್‌ನಂತೆ ಕೆಲಸ ಮಾಡುವುದು.
  • ಪದೇ ಪದೆ ಹಸಿವಾಗುವುದನ್ನು ತೆಡೆಯುವುದರಿಂದ ಬೇಡದ ಬೊಜ್ಜನ್ನು ತೆಗೆದು ಹಾಕುವಲ್ಲಿ ಸಹಕಾರಿ.

 

ಆರೋಗ್ಯದ ಬಗ್ಗೆ ಹೆಚ್ಚು ತಿಳಿಯಲು

ಕೊಬ್ಬರಿ ಎಣ್ಣೆ ದೇಹಕ್ಕೆ ‘ವಿಷ’ವೇ ?

ಕಾಮಾಲೆಗೂ ಮದ್ದು ಎಳನೀರು..!

ಬೆಣ್ಣೆ, ದನದ ಕೊಬ್ಬಿಗಿಂತಲೂ ತೆಂಗಿನ ಎಣ್ಣೆ ಹಾನಿಕಾರಕ: ಎಚ್ಚರಿಕೆ ನೀಡಿದ ವೈದ್ಯರು

loader