ನಿಶಾಂತ್‌ ಕಮ್ಮರಡಿ

‘ಆಂಟಿ ಹಾಕೋ ನೈಟಿನ ಇವರಾರ‍ಯಕೆ ಹಾಕ್ಕಂಡ್‌ ಬಂದ್ರು?’ ಅಂತ ಪಡ್ಡೆಗಳು ಟ್ರೋಲ್‌ ಮಾಡೋ ಥರದ ಡ್ರೆಸ್‌ ಮ್ಯಾಕ್ಸಿ ಡ್ರೆಸ್‌. ನೈಟಿ ಥರ ಯಾಕೆ ಅಂದ್ರೆ ಮೇಲಿಂದ ಕೆಳಗಿನ ತನಕ ಉದ್ದದ ಗೌನ್‌ ಥರ ಒಂದೇ ಡ್ರೆಸ್‌ ಇದು. ಅದರಲ್ಲಿ ಹೂವಿನ, ಕೆಲವು ಆಕೃತಿಗಳ ಡಿಸೈನ್‌. ಈ ಡ್ರೆಸ್‌ಗಳಿಗೂ ಚೆಂದ ಬರೋದು ಸುಂದರಿಯೊಬ್ಬಳು ಅದನ್ನು ತೊಟ್ಟು ಮೆರೆದಾಗ. ಅಂದಹಾಗೆ ಒಂದೆರಡು ದಿನಗಳ ಹಿಂದೆ ಈ ಡ್ರೆಸ್‌ ಹಾಕಿ ಪಾಪರಾಝಿಗಳ ಕಣ್ಣಿಗೆ ಬಿದ್ದದ್ದು ಪುಟ್ಟತೈಮೂರ್‌ನ ದೊಡ್ಡ ಅಕ್ಕ ಸಾರಾ ಆಲಿ ಖಾನ್‌. ಆಕೆ ಫ್ರೆಂಡ್ಸ್‌ ಜೊತೆಗೆ ಅಡ್ಡಾಡಿ ವಾಪಾಸಾಗ್ತಿದ್ದ ಹೊತ್ತು ಇನ್ನೇನು ಮನೆಯೊಳಗೆ ಹೊಗಬೇಕು ಅನ್ನುವಾಗ ಪಾಪರಾಝಿಗಳ ಕೆಮರಾ ಲೈಟ್‌ಗಳು ಝಗ್ಗೆಂದವು. ಒಂಚೂರು ಗಾಬರಿ, ಸರ್ಪೈಸ್‌, ಸಂಕೋಚದಲ್ಲೂ ಕೇದಾರ್‌ನಾಥ್‌ ಹುಡುಗಿ ಕೆಮರಾಗೆ ಫೋಸ್‌ ನೀಡಿಯೇ ನೀಡಿದಳು. ಬೇಸಿಗೆಗೆ ಹೇಳಿ ಮಾಡಿಸಿದ ಹಾಗಿದ್ದಿದ್ದ ಮೇಲಿಂದ ಕೆಳಗಿನವರೆಗೂ ಇಳಿಬಿದ್ದ ಕಾಟನ್‌ ಮೆಟೀರಿಯಲ್‌ನ ಈ ಡ್ರೆಸ್‌ ಒಂದೆರಡು ದಿನದಲ್ಲೇ ಹುಡುಗಿಯರಿಗೂ ಫೇವರೆಟ್‌ ಆಯ್ತು. ಅಲೆ ಅಲೆಯಾಗಿ ಹಬ್ಬಿನ ನೀಲಿ ಹಿನ್ನೆಲೆಯಲ್ಲಿ ಆರೆಂಜ್‌ ಡಿಸೈನ್‌ ಈ ಮಾಕ್ಸಿ ಡ್ರೆಸ್‌ ಸಮ್ಮರ್‌ನ ಸರಳ ಅವತಾರ್‌ನ ಪ್ರತಿಬಿಂಬದ ಹಾಗಿತ್ತು. ಇದರಲ್ಲಿ ಕಂಡೂ ಕಾಣದ ಹಾಗೆ ನಡುವಿಗೆ ಬೆಲ್ಟ್‌ ಇದೆ. ಆರೆಂಜ್‌ ಬಣ್ಣದ ಬಳೆ, ಅದೇ ಕಲರ್‌ನ ದೇಸಿ ಸ್ಯಾಂಡಲ್ಸ್‌, ನಿರ್ಲಕ್ಷ್ಯಕ್ಕೆಂಬ ಹಾಗೆ ಪಿನ್‌ಮಾಡಿ ಹರಡಿಬಿಟ್ಟಕೂದಲು..ಒಟ್ಟಂದದಲ್ಲಿ ಎಲ್ಲವೂ ಚೆಂದ.

ಮ್ಯಾಕ್ಸಿ ಡ್ರೆಸ್‌ಗೂ ಗೌನ್‌ಗೂ ಏನ್‌ ಡಿಫರೆನ್ಸು?

ಸಣ್ಣಪುಟ್ಟವ್ಯತ್ಯಾಸಗಳು. ಮ್ಯಾಕ್ಸಿ ಡ್ರೆಸ್‌ ಹೆಚ್ಚು ಅದ್ದೂರಿ ಇಲ್ಲದ ಒಂದೇ ಮೆಟೀರಿಯಲ್‌ನಲ್ಲಿ ಹೊಲಿದಿರುವ ಸರಳ ಸುಂದರ ಉಡುಗೆ. ಹೆಚ್ಚಾಗಿ ತೆಳುವಾದ ಸಾಫ್ಟ್‌ಕಾಟನ್‌ ಮೆಟೀರಿಯಲ್‌ನಲ್ಲಿರುತ್ತೆ. ಮೇಲ್ಭಾಗದಲ್ಲಿ ಬಿಗಿಯಾಗಿದ್ದು, ಕೆಳಭಾಗದಲ್ಲಿ ಅಲೆ ಅಲೆಯಾಗಿ ಹಬ್ಬಿರುತ್ತದೆ. ಇದರಲ್ಲಿ ಹಲವು ಡಿಸೈನ್‌ಗಳಿವೆ. ಕೆಲವು ಕಾಲರ್‌ನೆಕ್‌ ಇರುವಂಥವು, ಕೆಲವಕ್ಕೆ ಸಿಂಪಲ್ಲಾದ ಬೆಲ್ಟ್‌ ಇರುತ್ತವೆ. ಸದ್ಯ ಸ್ಟೈಲಿಶ್‌ ಟ್ರೆಂಡಿಯಾಗಿರೋದು ಪಲಾಝೋ ಮಿಕ್ಸ್‌ ಆಗಿರುವ ಮ್ಯಾಕ್ಸಿ ಡ್ರೆಸ್‌.

ಎಲ್ಲ ಸ್ಟಾರ್ ನಟಿಯರಿಗೂ ಮೇಕಪ್‌ ಮಾಡೋ ಮಂಡ್ಯದ ಹುಡುಗಿ!

ಅದೇ ಗೌನ್‌ನಲ್ಲಾದರೆ ಅದ್ದೂರಿತನಕ್ಕೆ ಪ್ರಾಶಸ್ತ್ಯ. ಸಿಲ್ಕಿ ಮೆಟೀರಿಯಲ್‌ನಲ್ಲಿ ಹೆಚ್ಚು ವರ್ಕ್ಗಳಿಗೆ ಆದ್ಯತೆ. ಮದುವೆ ಅಥವಾ ಗ್ರ್ಯಾಂಡ್‌ ಪಾರ್ಟಿಗೆ ಹೆಚ್ಚಾಗಿ ಗೌನ್‌ ತೊಡುವ ಸಂಪ್ರದಾಯ. ಗೌನ್‌ನಲ್ಲಿ ನೂರಾರು ವೆರೈಟಿಗಳಿವೆ. ಬಣ್ಣ, ಡಿಸೈನ್‌ಗಳಿವೆ. ಒಂದಿಷ್ಟುಸಾವಿರಗಳನ್ನು ತೆತ್ತು ಈ ಡ್ರೆಸ್‌ ಖರೀದಿಸಬೇಕು. ಮ್ಯಾಕ್ಸಿ ಅಂಥ ದುಬಾರಿಯಲ್ಲ.

ಮ್ಯಾಕ್ಸಿ ಡ್ರೆಸ್‌ ಆಯ್ಕೆ ಹೇಗೆ?

- ವಿಸ್ತಾರ ಭುಜ ಹೊಂದಿರುವ ಹೆಣ್ಮಕ್ಕಳಿಗೆ ವಿಂಟೇಜ್‌ ಫೆä್ಲೕರಲ್‌ ಡಿಸೈನ್‌ನ ಮ್ಯಾಕ್ಸಿ ಡ್ರೆಸ್‌ ಚೆನ್ನಾಗಿರುತ್ತೆ. ಅಂದರೆ ತುಸು ಸಾಂಪ್ರದಾಯಿಕ ಶೈಲಿಯ ಗಾಢ ಬಣ್ಣಗಳ ಹಿನ್ನೆಲೆಯಲ್ಲಿ ಚೆಂದದ ಪುಟ್ಟಪುಟ್ಟಹೂವು ಬಳ್ಳಿಗಳ ಡಿಸೈನ್‌ ಇರುವ ಡ್ರೆಸ್‌ಗಳು. ಇವರು ಸ್ಲೀವ್‌ಲೆಸ್‌ ಆಗಿರುವ ವಿ ಶೇಪ್‌ ನೆಕ್‌ ಡಿಸೈನ್‌ನ ಎರಡು ಬಣ್ಣ ಮಿಶ್ರಿತವಾದ ಡ್ರೆಸ್‌ ಖರೀದಿಸಬಹುದು.

- ಹೆಚ್ಚು ಕವ್‌ರ್‍ಗಳಿಲ್ಲದ ಸ್ಪೋರ್ಟಿ ಲುಕ್‌ ಹೊಂದಿರುವ ಹುಡುಗಿಯರಿಗೆ ಶಿಫಾನ್‌ ಮೆಟೀರಿಯಲ್‌ನ ಕತ್ತನ್ನಷ್ಟೇ ಸುತ್ತುವರಿದ ತೋಳುಗಳಿಲ್ಲದ ಫೆä್ಲೕರಲ್‌ ಮ್ಯಾಕ್ಸಿ ಡ್ರೆಸ್‌ ಚೆನ್ನಾಗಿರುತ್ತದೆ.

- ಕಾಲಿನ ಭಾಗ ಸ್ಲಿಟ್‌ ಹೊಂದಿರುವ ಗೌನ್‌ಗಳನ್ನು ನೀಳ ಕಾಲಿನ ಸುಂದರಿಯರು ಪ್ರಯತ್ನಿಸಬಹುದು.

- ತುಸು ದಪ್ಪ ದೇಹಕ್ಕೆ ಮೊನೊಕ್ರೋಮ್‌ ಡಿಸೈನ್‌ನ ಮ್ಯಾಕ್ಸಿ ಡ್ರೆಸ್‌ ಸುಂದರವಾಗಿರುತ್ತದೆ.

- ಸಣ್ಣ ಬಳುಕುವ ದೇಹದವರಿಗೆ ಇದರಲ್ಲಿ ಆಫ್‌ ಶೋಲ್ಡರ್‌, ಫುಲ್‌ ಸ್ಲೀವ್‌ ಇರುವ ಮ್ಯಾಕ್ಸಿ ಡ್ರೆಸ್‌ ಸಖತ್ತಾಗಿರುತ್ತದೆ. ಸಾರಾ ಆಲೀಖಾನ್‌ ತೊಟ್ಟರೀತಿಯ ಮ್ಯಾಕ್ಸಿಗಳೂ ಚೆಂದ.

ಆ್ಯಕ್ಸೆಸರೀಸ್‌ ಬಗ್ಗೆ ಹುಷಾರು

ಸೀರೆ ಮೇಲೆ ಮಾತ್ರವಲ್ಲ, ಕೈ ಮೇಲೂ ಬರಲಿದೆ ಎಂಬ್ರಾಯ್ಡರಿ ಟ್ಯಾಟೂ!

-ಈ ಡ್ರೆಸ್‌ ನೀಳಕಾಯದ ಸುಂದರಿಯರಿಗೆ ಹೇಳಿ ಮಾಡಿಸಿದ್ದು. ತುಸು ಕುಳ್ಳನೆಯ ದಪ್ಪ ದೇಹ ಹೊಂದಿರುವವರು ಮ್ಯಾಕ್ಸಿ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರಿ, ತುಸು ಯಾಮಾರಿದರೂ ನೀವಿ ಕೆಲವೊಂದು ಮ್ಯಾಕ್ಸಿಯಲ್ಲಿ ಇನ್ನಷ್ಟುದಪ್ಪ ಹಾಗೂ ಕುಳ್ಳಗೆ ಕಾಣಿಸುವ ಅಪಾಯವಿದೆ.

- ಹೈ ಹೀಲ್ಸ್‌ ನಿಮಗೆ ಸದಾ ಆಪ್ತಮಿತ್ರನಂತೆ ಸೌಂದರ್ಯ ಹೆಚ್ಚಿಸಲು ರೆಡಿಯಿರುತ್ತದೆ. ದೇಸಿ ಸ್ಟೈಲ್‌ನ ಕೆಲವೊಂದು ಶೂಗಳೂ ಇದಕ್ಕೆ ಚೆನ್ನಾಗಿರುತ್ತದೆ.

- ಸಿಂಪಲ್‌ ಆಗಿರುವ ಡ್ರೆಸ್‌ಗೆ ಫ್ಯಾನ್ಸಿ ಡಿಸೈನ್‌ನ ಹ್ಯಾಂಗಿಂಗ್ಸ್‌ ಚೆಂದ. ಸ್ಟಡ್ಸ್‌ ಅಷ್ಟಾಗಿ ಒಪ್ಪಲ್ಲ.

- ಕಣ್ಣು ಹೈಲೈಟ್‌ ಆಗುವಂಥ ಸಿಂಪಲ್‌ ಮೇಕಪ್‌ ಮಾಡಿಕೊಳ್ಳಿ.

- ಅಲೆಯಂತೆ ಹರಡಿಕೊಳ್ಳುವ ಉಡುಗೆಗೆ ಕೂದಲನ್ನು ಅಲೆ ಅಲೆಯಾಗಿ ಹರಡಿದರೇ ಸುಂದರ.

ಬೇರೆ ಬೇರೆ ಸ್ಟೈಲ್‌

- ಆಫ್‌ ಶೋಲ್ಡರ್‌ ಇರುವ ಈ ಡ್ರೆಸ್‌ಗೆ ಮೇಲಿಂದ ಪುಟಾಣಿ ಶ್ರಗ್‌ ಹಾಕ್ಕೊಳ್ಳಿ, ಸುಂದರವಾಗಿ ಕಾಣ್ತೀರಿ.

- ಜಿಪ್‌ ಇರುವ ತುಂಬು ಕೊರಳಿನ ಪುಟ್ಟಓವರ್‌ ಕೋಟ್‌ ಈ ಡ್ರೆಸ್‌ನ ಅಂದ ಹೆಚ್ಚಿಸುತ್ತೆ.

- ಇದರಲ್ಲಿ ಬೆಲ್ಟ್‌ ಇಲ್ಲ ಅಂತಾದರೆ ನೀವೇ ಸಪೂರದ ಗೋಲ್ಡನ್‌ ಕಲರ್‌ ಪ್ಲೇನ್‌ ಬೆಲ್ಟ್‌ ಹಾಕ್ಕೊಳ್ಳಿ.

- ತುಸು ಬೋಲ್ಡ್‌ ಲುಕ್‌ ಬೇಕು ಅಂದ್ರೆ ಸ್ಲಿಟ್‌ ಇರುವ ಮ್ಯಾಕ್ಸಿ ಚೆಂದ.

ಫ್ಯಾಷನ್ ಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ: https://kannada.asianetnews.com/fashion