ಜಗತ್ತಿನ ಅತಿ ಎತ್ತರದ ಕಟ್ಟಡಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?

ಬುರ್ಜ್ ಖಲೀಫಾ ಗೊತ್ತು, ಅದೇ ರೀತಿ ವಿಶ್ವದಲ್ಲಿಯೇ ಅತೀ ಎತ್ತರದ್ದು ಎನಿಸಿಕೊಳ್ಳುತ್ತಿರುವ ಇತರೆ ಕಟ್ಟಡಗಳೂ ಇವೆ ಗೊತ್ತಾ?  ಕೆಲವು ಕಟ್ಟಡಗಳನ್ನು ನೋಡ್ಕೊಂಡು ಬರೋಣ ಬನ್ನಿ...

Top 10 tallest buildings around the world

ಜಗತ್ತಿನ ಅತಿ ಎತ್ತರದ ಕಟ್ಟಡ ಯಾವುದು ಎಂದು ಕೇಳಿದಾಗ ನೆನಪಾಗೋದು ಬುರ್ಜ್ ಖಲೀಫಾ. ಆದ್ರೆ ನಿಮಗೊತ್ತಾ ಇನ್ನು  ಮುಂದಿನ ವರ್ಷ ಅದಕ್ಕೂ ಎತ್ತರವಾದ ಕಟ್ಟಡವೊಂದು ತಲೆ ಎತ್ತಲಿದೆ. ಅದಕ್ಕೂ ಮುನ್ನ ಪ್ರಪಂಚದ ಟಾಪ್ 10 ಲಿಸ್ಟಿನಲ್ಲಿ ಬರುವಂತಹ ಎತ್ತರದ ಕಟ್ಟಡಗಳು ಯಾವವು?

ಬುರ್ಜ್ ಖಲೀಫಾ: ಯುನೈಟೆಡ್ ಅರಬ್ ಎಮಿರೇಟ್ಸ್ , 2,717 ಅಡಿ ಎತ್ತರವಿದೆ. ಇದು ದುಬೈನಲ್ಲಿದೆ. ಈ ಕಟ್ಟಡದಲ್ಲಿ 163 ಫ್ಲೋರ್‌ಗಳಿವೆ. ಇದನ್ನು ಸ್ಟೀಲ್ ಮತ್ತು ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಇದರ ಮಾಲೀಕ ಎಮಾರ್‌ ಪ್ರಾಪರ್ಟಿಸ್‌. ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 1.5 ಬಿಲಿಯನ್‌ ಯುಎಸ್‌ಡಿ ಡಾಲರ್‌.  ಇದು 2010ರಲ್ಲಿ ಪೂರ್ಣಗೊಂಡಿತ್ತು. ಇಂದಿಗೂ ಇದೇ ಅತ್ಯಂತ ಎತ್ತರದ ಕಟ್ಟಡ. 

ಪ್ರವಾಸ ಹೊರಡುವ ಮುನ್ನ ಈ 10 ವಿಷಯ ಗಮನಿಸಿ

ಶಾಂಘೈ ಟವರ್‌: ಈ ಕಟ್ಟಡ 632 ಮೀಟರ್‌ ಎತ್ತರವಾಗಿದ್ದು, 128 ಫ್ಲೋರ್‌ಗಳನ್ನು ಹೊಂದಿವೆ. ಇದು ಶಾಂಘೈನ ಪುಡೊಂಗ್‌ನಲ್ಲಿದೆ. 2015ರಲ್ಲಿ ಕಟ್ಟಡ ನಿರ್ಮಾಣವಾಯಿತು. ಈ ಕಟ್ಟಡದಲ್ಲಿ 320 ಹೊಟೇಲ್ ರೂಮ್ಸ್, 1100 ಪಾರ್ಕಿಂಗ್ ಸ್ಪೇಸ್ ಇದೆ. ಈ ಕಟ್ಟಡದ ಮೇಲಿನಿಂದ ನೋಡಿದರೆ ಶಾಂಘೈ ನಗರದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. 

ಅಬ್ರಾಜ್ ಅಲ್ ಬೈಟ್, ಮೆಕ್ಕಾ: ಇದನ್ನು ಮೆಕ್ಕಾ ರಾಯಲ್ ಕ್ಲಾಕ್ ಟವರ್ ಎಂದೂ ಕರೆಯುತ್ತಾರೆ. ಇದು ಪ್ರಪಂಚದ ಮೂರನೇ ಅತ್ಯಂತ ಎತ್ತರದ ಕಟ್ಟಡ. ಇದು 601 ಮೀಟರ್ ಎತ್ತರವಿದೆ. 120 ಫ್ಲೋರ್‌ಗಳನ್ನೂ ಹೊಂದಿದೆ. ಈ ಕಟ್ಟಡದಲ್ಲಿ ಹೋಟೆಲ್, ಕಾನ್ಫರೆನ್ಸ್ ಸೆಂಟರ್, ಇಸ್ಲಾಮಿಕ್ ಮ್ಯೂಸಿಯಂ , 10 ಸಾವಿರ ಮಂದಿ ಕುಳಿತು ಕೊಳ್ಳಬಹುದಾದ ಪ್ರಾರ್ಥನಾ ಕೋಣೆಯೂ ಇದೆ. 

ವಿದೇಶ ಪ್ರವಾಸದಲ್ಲಿ ಇವುಗಳನ್ನು ಧರಿಸದಿದ್ದರೆ ಒಳಿತು!

ಪಿಂಗ್ ಆನ್ ಫೈನಾನ್ಸ್ ಸೆಂಟರ್: ಇದು ಚೀನಾದಲ್ಲಿದೆ. 115 ಫ್ಲೋರ್‌ಗಳಿರುವ ಇದರ ಎತ್ತರ 1,965 ಅಡಿ. ಇದು ನಾಲ್ಕನೇ ಅತಿ ಎತ್ತರದ ಕಟ್ಟಡ. ಈ ಕಟ್ಟಡ 2017 ಸಂಪೂರ್ಣವಾಗಿ ನಿರ್ಮಾಣವಾಯಿತು. 

ಲೊಟ್ಟೆ ವರ್ಲ್ಡ್ ಟವರ್: ಈ ಟವರ್ ಸೌತ್ ಕೊರಿಯಾದ ಸಿಯೋಲ್‌ನಲ್ಲಿದೆ. ಇದು 1,819 ಅಡಿ ಎತ್ತರವಿದೆ. ಈ ಕಟ್ಟಡ ಐದನೇ ಎತ್ತರದ ಕಟ್ಟಡವಾಗಿದೆ. 2016ರಲ್ಲಿ ಈ ಕಟ್ಟಡ ನಿರ್ಮಾಣವಾಯಿತು. ಈ ಕಟ್ಟಡದಲ್ಲಿ 123 ಫ್ಲೋರ್‌ಗಳಿವೆ. ಫ್ಲೋರ್ ಅಂಡರ್ ಗ್ರೌಂಡ್‌ನಲ್ಲಿಯೇ ಇವೆ. ಈ ಕಟ್ಟಡಕ್ಕೆ ಭೂಕಂಪದ ಎದುರು ನಿಲ್ಲುವ ಶಕ್ತಿ ಇದೆ. 

ಒನ್ ವರ್ಲ್ಡ್ ಟ್ರೇಡ್ ಸೆಂಟರ್‌ : ನ್ಯೂಯಾರ್ಕ್ ಸಿಟಿ, ಯುನೈಟೆಡ್ ಸ್ಟೇಟ್ಸ್, 1,776 ಅಡಿ ಎತ್ತರವಿದೆ. ವೆಸ್ಟರ್ನ್‌ ಹೆಮಿಸ್ಪಿಯರ್‌ನಲ್ಲಿರುವ ಅತ್ಯಂತ ಎತ್ತರದ ಕಟ್ಟಡ ಇದಾಗಿದೆ. ಅಲ್ಲದೆ ಇದು ಪ್ರಪಂಚದ ಆರನೆ ಎತ್ತರದ ಕಟ್ಟಡವಾಗಿದೆ. 2014ರಲ್ಲಿ ಕಟ್ಟಡ ಪೂರ್ಣಗೊಂಡಿತು. 

ಹುಡುಗಿಯರು ಸೋಲೋ ಟ್ರಿಪ್‌ ಹೋಗುವುದು ಹೇಗೆ?

ಗುವಾಂಗ್ಝೌ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್ : ಗುವಾಂಗ್ಝೌ, ಚೀನಾ, 1,739 ಅಡಿ ಎತ್ತರವಿದೆ. ಈ ಕಟ್ಟಡ 2016ರಲ್ಲಿ ಪೂರ್ತಿಯಾಗಿ ನಿರ್ಮಾಣವಾಯಿತು. ಈ ಕಟ್ಟಡದಲ್ಲಿ ಸುಮಾರು 111 ಫ್ಲೋರ್‌ಗಳಿವೆ.ಇದರಲ್ಲಿ ಶಾಪಿಂಗ್ ಮಾಲ್, ಆಫೀಸ್ ಮತ್ತು ಹೋಟೆಲ್‌ಗಳಿವೆ. 

ಚೀನಾ ಝುನ್: ಇದು ಬೀಜಿಂಗ್‌ನಲ್ಲಿದೆ. 1,667 ಅಡಿ ಎತ್ತರದ ಈ ಕಟ್ಟಡ 2018ರಲ್ಲಿ ಪೂರ್ತಿಯಾಯಿತು. ಇಲ್ಲಿ ಹೆಚ್ಚಿನ ಬ್ಯುಸಿನೆಸ್ ಕಾರ್ಯಗಳು ನಡೆಯುತ್ತಿರುತ್ತವೆ. 

ತೈಪೆ, ತೈವಾನ್ : 1,667 ಅಡಿ ಎತ್ತರವಿದೆ.ಇದನ್ನು ತೈಪೆ ವರ್ಲ್ಡ್‌ ಫಿನಾನ್ಸ್‌ ಸೆಂಟರ್‌ ಎಂದು ಕರೆಯಲಾಗುತ್ತದೆ. ಇದು ತೈಪೆನಲ್ಲಿರುವ ಅತ್ಯಂತ ದೊಡ್ಡ ಲ್ಯಾಂಡ್‌ಮಾರ್ಕ್‌ ಆಗಿದೆ. ಇದನ್ನು ಪೋಸ್ಟ್‌ ಮಾಡರ್ನ್‌ ಆರ್ಟಿಟೆಕ್ಚರ್‌ನಂತೆ ನಿರ್ಮಿಸಲಾಗಿದೆ. 2004ರಲ್ಲಿ 1,667 ಫೂಟ್‌ ಎತ್ತರದ ಈ ಕಟ್ಟಡ ಪೂರ್ತಿಯಾಗಿ ನಿರ್ಮಾಣವಾದಾಗ ಇದು ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಶಾಂಘೈ ವರ್ಲ್ಡ್ ಫೈನಾನ್ಸಿಯಲ್ ಸೆಂಟರ್: ಇದು 2008ರಲ್ಲಿ ಪೂರ್ಣಗೊಂಡಿತು. ಇದು 1,614 ಅಡಿ ಎತ್ತರವಿದೆ. ಇದು ಶಾಂಘೈನ ಸ್ಕೈ ಸ್ಕ್ರೇಪರ್ ಲಾಡೆನ್ ಪುಡೊಂಗ್ ಜಿಲ್ಲೆಯಲ್ಲಿದೆ. 

Latest Videos
Follow Us:
Download App:
  • android
  • ios