ವಿಪರೀತ ಕೈ ತೊಳೆದರೆ ಆರೋಗ್ಯಕ್ಕೆ ತೊಡಕಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 4:38 PM IST
Too much of hand wash affects healthy lifestyle
Highlights

 'ಬಂಟೀ ನಿನ್ ಸೋಪ್ ಸ್ಲೋನಾ...' ಎಂದು ಬಹಳ ಹೊತ್ತು ಕೈ ತೊಳೆಯುವ ಬಂಟಿ ಗೊತ್ತು. ಆದರೆ, ಈ ರೀತಿ ಕೈಯನ್ನು ತಿಕ್ಕಿ ತಿಕ್ಕಿ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದಾ?

ಆಟ-ಊಟ-ಪಾಠದ ಮುನ್ನ ಸದಾ 'ಕೈ ತೊಳಿ' ಎಂದು ಅಮ್ಮ ಹೇಳಿದ್ ಮಾತು ಮನಸ್ಸಿನಲ್ಲಿ ಅಚ್ಚೊತ್ತಿದೆ. ಏನ್ ಮಾಡೋದಾದರೂ ಕೈ ತೊಳೆಯುವುದನ್ನು ಮಾತ್ರ ಹಿರಿಯರು ನಮಗೆ ಹೇಳಿ ಕೊಟ್ಟಿದ್ದಾರೆ. ಯಾವ ಕಾರಣಕ್ಕಾಗಿ ಕೈ ಶುದ್ಧತೆ ಗಮನ ಹರಿಸಬೇಕು? ದಿನಕ್ಕೆ ಎಷ್ಟು ಸಲ ತೊಳೆಯಬೇಕು? ಯಾವ ರೀತಿಯ ಸಾಬೂನು ಬಳಸಬೇಕು?

  • ನಮ್ಮ ಕೈಗಳು ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು, ಅದನ್ನು ತೊಲಗಿಸಲು ಯತ್ನಿಸಿದರೂ ಅದು ಹೋಗುವುದಿಲ್ಲ. ಅಕಸ್ಮಾತ್ ಹೋದರೂ, ನಮಗೆ ಅಗತ್ಯವಾದ ಬ್ಯಾಕ್ಟಿರಿಯಾಗಳನ್ನು ನಾವೇ ಕಳೆದುಕೊಂಡಂತಾಗುತ್ತದೆ. 
  • ಹೆಚ್ಚಾಗಿ ಕೈ ತೊಳೆಯುವುದರಿಂದ ನಮ್ಮ ಹಸ್ತದ ಚರ್ಮ ಡ್ರೈ ಆಗುತ್ತದೆ. ಅಷ್ಟೇ ಅಲ್ಲದೆ ನಿಧಾನವಾಗಿ ಚರ್ಮ ಸುಲಿಯುತ್ತದೆ. ಕೈಯಲ್ಲಿ ತೈಲಾಂಶ ಹೆಚ್ಚಿರಬೇಕು. ಇಲ್ಲವಾದಲ್ಲಿ ತ್ವಚೆಯ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ. 
  • ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟೈಸರ್‌ ಬಳಸೋ ಮುನ್ನ ಅದರಲ್ಲಿರೋ ರಾಸಾಯನಿಕಗಳ ಅಂಶವನ್ನು ನೋಡಿಕೊಳ್ಳಿ.

ಯಾವಾಗ ತೊಳೆದರೆ ಸೊಕ್ತ?

ಸಂಶೋಧನೆಯ ಪ್ರಕಾರ ಶೇ. 95ರಷ್ಟು ಜನರು ಶೌಚಾಲಯ ಬಳಸಿದ ನಂತರ ಕೈಯನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿಕೊಳ್ಳುವುದಿಲ್ಲ. ಇದರಿಂದ ಕೀಟಾಣುಗಳು ಹೆಚ್ಚಾಗಿ, ಅನಾರೋಗ್ಯವೂ ಹೆಚ್ಚುತ್ತದೆ. ಊಟ ಮಾಡೋ ಮುನ್ನ ಮತ್ತು ಶೌಚಾಲಯ ಬಳಸಿದ ನಂತರ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

loader