ನಿಮ್ಮ ಮಗು ರಾತ್ರಿ ಪದೇ ಪದೇ ಏಳುತ್ತದೆಯೇ? ಹಾಗಾದರೆ ಹೀಗೆ ಮಾಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 4:27 PM IST
Tips to stop  babies wake up frequently at night
Highlights

 ಮಗು ಸುಸ್ಸು ಮಾಡ್ತಾ? ಹೊದಿಕೆ ತೆಗೆದುಕೊಂಡಿದ್ಯಾ? ...ಹೀಗೆ ಕಂದಮ್ಮ ಪಕ್ಕದಲ್ಲಿ ಮಲಗಿದರೆ ತಾಯಿಗೆ ನಿದ್ರೆಯೇ ಹತ್ತಿರ ಸುಳಿಯುವುದಿಲ್ಲ. ಅಂಥದ್ರಲ್ಲಿ ಕೆಲವು ಮಕ್ಕಳು ಪದೆ ಪದೇ ಏಳುತ್ತಿರುತ್ತಾರೆ. ಇದಕ್ಕೇನು ಮಾಡುವುದು?

ಹುಟ್ಟಿದ ಮಗುವಿನಿಂದ ಹಿಡಿದು, ವರ್ಷವಾಗೋವರೆಗೆ ಮಕ್ಕಳು ಹೆಚ್ಚಿನ ಸಮಯವನ್ನು ನಿದ್ರಿಸಿಯೇ ಕಳೆಯುತ್ತವೆ. ಅಗತ್ಯದಷ್ಟು ನಿದ್ರೆಯಾಗಿಲ್ಲವೆಂದರೆ ಕಿರಿಕಿರಿ ಮಾಡುತ್ತಿರುತ್ತವೆ. ಅದರಲ್ಲಿಯೂ 4-6 ತಿಂಗಳ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಬಾಧಿಸುತ್ತದೆ. 

ಕೆಲವೊಮ್ಮೆ ಜ್ವರ ಮತ್ತು ಕೆಮ್ಮು-ಕಫದಿಂದಲೂ ಮಕ್ಕಳು ಸರಿಯಾಗಿ ನಿದ್ರಿಸುವುದಿಲ್ಲ. ಎದೆ ಹಾಲುಣ್ಣುವ ಮಕ್ಕಳೂ ಸರಿಯಾಗಿ ನಿದ್ರಿಸುವುದಿಲ್ಲ. ಸಂಶೋಧನೆ ಪ್ರಕಾರ ಮಕ್ಕಳು ಹೊಟ್ಟೆ ತುಂಬಾ ತಿನ್ನದೇ ಹೋದರೆ, ನಿದ್ದೆಯಲ್ಲಿ ಮೂತ್ರ ಮಾಡಿದರೆ ಅಥವಾ ಪಚನಕ್ರಿಯೆಗೆ ತೊಂದರೆಯಾಗಿದೆ ಎಂದರೆ ರಾತ್ರಿ ಪದೆ ಪದೇ ಏಳುತ್ತಿರುತ್ತವೆ.

ತಡೆಯುವುದು ಹೇಗೆ?....

  • ನಿಧಾನವಾಗಿ ಎದೆ ಹಾಲು ನಿಲ್ಲಿಸಿ, ಮಗುವಿಗೆ ಸೂಕ್ತ ಎನಿಸುವ ಆಹಾರ ತಿನಿಸಲು ಆರಂಭಿಸಿ.
  • ಬೆಳಿಗ್ಗಿನ ಸಮಯದಲ್ಲಿ ಮಕ್ಕಳಿಗೆ ಸಾಕೆನುವಷ್ಟು ಆಹಾರ ನೀಡಿ. 
  • ಸಂಜೆಯೂ ಹಾಲು ಅಥವಾ ಇತರೆ ದ್ರವಹಾರದ ಬದಲು, ಘನಹಾರ ನೀಡಿದರೆ ಒಳ್ಳೆಯದು.
  • ತಾಯಿಯ ಧ್ವನಿ ಕೇಳಿದರೆ ಮಕ್ಕಳು ಅಳುವುದನ್ನು ನಿಲ್ಲಿಸುವರು. ಅಮ್ಮನ ಸಾಮೀಪ್ಯ ಸಾಕಷ್ಟು ಸಿಗುವಂತೆ ನೋಡಿಕೊಳ್ಳಿ.
  • ಬೆಜ್ಜಗಿನ ನೀರಲ್ಲಿ ಸ್ನಾನ ಮಾಡಿಸಿದರೆ, ಮಕ್ಕಳು ನಿರಾಳವಾಗಿ, ನೆಮ್ಮದಿಯಾಗಿ ನಿದ್ರಿಸುತ್ತವೆ. 
  • ಮೃದುವಾದ ಹತ್ತಿ ಅಥವಾ ಹಿತವೆನಿಸುವ ಬಟ್ಟೆಯನ್ನು ತೊಡಿಸಿ, ಮಲಗಿಸಿ. ಚಳಿಗಾಲದಲ್ಲಿ ಚಳಿಯಾಗದಂತೆ, ಬೇಸಿಗೆಯಲ್ಲಿ ಸೆಖೆ ಕಾಡದಂಥ ಬಟ್ಟೆಗಳಿಗೆ ಆದ್ಯತೆ ನೀಡಿ.
loader