ಹೀಗ್ ಮಾಡಿದ್ರೆ ಇರುವೆ ಇರೋಲ್ಲ

Tips to keep ants away
Highlights

ತಿಂಡಿ ಅಥವಾ ಸಿಹಿ ಪದಾರ್ಥಗಳಿದ್ದರಂತೂ ಮುಗೀತು. ಸುತ್ತಲೂ ಕೆಲವೇ ಕೆಲವು ಕ್ಷಣಗಳಲ್ಲಿ ಆವರಿಸಿಕೊಂಡು ಬಿಡುತ್ತದೆ. ಹೇಳುವಷ್ಟು ಸಮಸ್ಯೆ ಕೊಡದ, ಇಂಥ ಇರುವೆಗಳನ್ನು ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್...

- ವಿನೆಗರ್ 

ಮನೆಯಲ್ಲಿ ಸದಾ ಲಭ್ಯವಿರುವ ವಿನೆಗರ್ ಮತ್ತು ನೀರಿನೊಂದಿಗೆ ಸೇರಿಸಿ, ಇರುವೆ ಹರಿದಾಡುವ ಹಾದಿಯಲ್ಲಿ ದಿನಕ್ಕೆ ಹಲವಾರು ಹಾಕಿದರೆ ಇರುವೆ ದೂರವಾಗುತ್ತದೆ. 

- ಬೊರಾಕ್ಸ್ 

ಬೊರಾಕ್ಸ್ ವಿಷಕಾರಿಯಾಗಿದ್ದು, ಮನೆಯಲ್ಲಿ ಪುಟ್ಟ ಕಂದಮ್ಮನಿದ್ದರೆ ಅಥವಾ ನಾಯಿ ಇದ್ದರೆ ಬಳಸಬೇಡಿ. ಬೊರಾಕ್ಸ್ ಮತ್ತು ಸಕ್ಕರೆ ಮಿಶ್ರಾಣ ಮಾಡಿ ಇರುವೆ ಹರಿದಾಡುವ ಸ್ಥಳದಲ್ಲಿ ಇಡಬೇಕು. ಬೊರಾಕ್ಸ್ ಜೀರ್ಣಾಂಗ ವ್ಯವಸ್ಥೆ ಮತ್ತು ಅಸ್ಥಿಪಂಜರವನ್ನು ಹಾನಿಮಾಡಿ ಇರುವೆಯನ್ನು ಕೊಲ್ಲಬಲ್ಲದು. 

- ಸಿಟ್ರಸ್ ಸಿಪ್ಪೆ (ಹಣ್ಣಿನ ಸಿಪ್ಪೆ) 

ಸೌತೇಕಾಯಿ, ನಿಂಬೆಹಣ್ಣು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆ ಸುಳಿದ ನಂತರ ಅದರಲ್ಲಿ ಶಿಲೀಂಧ್ರಗಳನ್ನು ಹೊಂದಿದ್ದು, ಇರುವೆ ಹರಿಯುವ ಜಾಗದಲ್ಲಿ ಇಡುವುದರಿಂದ ಇರುವೆ ಜಾಗ ಖಾಲಿ ಮಾಡುತ್ತದೆ.

- ಹಿಟ್ಟು

ಇರುವೆಗಳು ಹಿಟ್ಟಿನಿಂದ ದೊರ ಸರಿಯುತ್ತವೆ. ಅದರಿಂದ ಅಡುಗೆ ಮನೆಯಲ್ಲಿ ಇರುವೆ ಹರಿದಾಡುವ ಸ್ಥಳದಲ್ಲಿ ಹಿಟ್ಟನ್ನು ಚೆಲ್ಲಿಡಬೇಕು.

- ಉಪ್ಪು

ಸಕ್ಕರೆಗೆ ಇರುವೆ ಮುತ್ತುತ್ತೆ. ಆದರೆ, ಉಪ್ಪಿನಿಂದ ದೂರುವಾಗುತ್ತೆ. ಇರುವೆ ಇರೋ ಜಾಗದಲ್ಲಿ ಉಪ್ಪು ಉದುರಿಸುವುದರಿಂದ ಇರುವೆ ಬರೋಲ್ಲ. ಇದೊಂಥರ ತಡೆಗೋಡೆಯಂತೆ ಕಾರ್ಯ ನಿರ್ವಹಿಸಿ, ಇರುವೆಗಳನ್ನು ದೂರ ಮಾಡುತ್ತವೆ.

loader