ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಮಕ್ಕಳ ವಿಭಾಗವೂ ಇದರಿಂದ ಹೊರತಾಗಿಲ್ಲ. ಆಸ್ಪತ್ರೆಗೆ ಬರುವ 100 ರೋಗಿಗಳಲ್ಲಿ ಶೇ. 30 ಜನರಲ್ಲಿ ಜ್ವರ, ವಾಂತಿ, ಭೇದಿ ಸೇರಿದಂತೆ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವಂತಹ ಕಾಯಿಲೆಗಳು, ಸೋಂಕು ಪ್ರಕರಣಗಳು ಕಂಡು ಬಂದಿವೆ. ಬಿಸಿಲಿನ ಧಗೆ ನವಜಾತ ಶಿಶುಗಳ ಮೇಲೆ ಪರಿಣಾಮ ಬೀರದಿರಲು ಮಕ್ಕಳ ವಿಭಾಗಗಳಲ್ಲಿ ಫ್ಯಾನ್‌ ಗಾಳಿಯನ್ನು ಅವಲಂಬಿಸಲಾಗಿದೆ.
ಬೆಂಗಳೂರು(ಏ.15): ಏರುತ್ತಿರುವ ಬೇಸಿಗೆಯ ಝಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮಕ್ಕಳು, ಹಿರಿಯ ನಾಗರಿಕರು ವಿವಿಧ ಸಾಂಕ್ರಾಮಿಕ ಸೋಂಕು, ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಈಗಾಗಲೇ ತಾಪಮಾನ 37 ಡಿಗ್ರಿ ಸೆಲ್ಸಿಯಷ್ಟಿದ್ದು, ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
--
ಹವಾಮಾನ ಬದಲಾವಣೆ ನವಜಾತ ಶಿಶುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಹದಲ್ಲಿನ ನಿರ್ಜಲೀಕರಣದಿಂದ ಮಕ್ಕಳು ಬಳಲುವಂತಾಗಿದೆ. ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾದಷ್ಟುಅಪಾಯ ಎದುರಿಸಬೇಕಾಗುತ್ತದೆ.ಜನರು ರಸ್ತೆ ಬದಿಯ ಆಹಾರ ಪದಾರ್ಥಗಳಿಂದ ದೂರವಿರಬೇಕು. ಹೆಚ್ಚೆಚ್ಚು ಶುದ್ಧ ನೀರನ್ನು ಕುಡಿಯಬೇಕು.
ಡಾ ಚಿಕ್ಕಣ್ಣ ನರಸರೆಡ್ಡಿ ಮಕ್ಕಳ ತಜ್ಞ, ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆ
ಏರಿಕೆಯಿಂದ ಮಕ್ಕಳು, ವಯೋವೃದ್ಧರು, ವಯಸ್ಕರಲ್ಲಿ ಸುಸ್ತಾಗುವುದು, ರಕ್ತದೊತ್ತಡ ಕಡಿಮೆಯಾಗುವಿಕೆ, ನಿಶ್ಯಕ್ತಿ ಕಾಣಿಸಿಕೊಳ್ಳುತ್ತಿದೆ. ಹೊರರೋಗಿ ವಿಭಾಗದಲ್ಲಿ ತಪಾಸಣೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ 10-20 ಜನರಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ದೃಢಪಡುತ್ತಿವೆ. ತಾಪಮಾನ ಸುರೇಶ್ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಡಾ
ಬರುವ 5 ವರ್ಷದೊಳಗಿನ ಮಕ್ಕಳಲ್ಲಿ ಜಾಂಡೀಸ್, ವಾಂತಿ, ಭೇದಿ ಸೇರಿದಂತೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಕಂಡುಬರುತ್ತಿವೆ. ಪೋಷಕರು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಕ್ಕಳನ್ನು ಬಿಸಿಲಿಗೆ ಬಿಡಬಾರದು. ಅವರಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗೆ ಆಶಾ ಬೆನಕಪ್ಪ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ ಡಾ --
