ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಕ್ರಿಕೆಟ್ ಹಾಗೂ ಸಿನಿಮಾಗೆ ಸಂಬಂಧಿಸಿದದ ಸುದ್ದಿ ಹಾಗೂ ವಿಡಿಯೋಗಳನ್ನು ಹೊರತುಪಡಿಸಿ ಒಗಟುಗಳನ್ನೂ ಜನರು ಇಷ್ಟಪಡುತ್ತಾರೆ. ಸದ್ಯ ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ 'ತೆರೆಸಾನ ಮಗಳು' ಎಂಬ ಒಗಟೊಂದು ಭಾರೀ ಸದ್ದು ಮಾಡುತ್ತಿದೆ. ಗೊಂದಲಪೂರಿತ ಈ ಒಗಟು ಜನರ ನಿದ್ದೆಗೆಡಿಸಿದೆ. ವೀಕ್ಷಕರು ತಮಗೆ ತೋಚಿದಂತೆ ಉತ್ತರಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಅಷ್ಟಕ್ಕೂ ಈ ಒಗಟೇನು ಅಂತೀರಾ? ಇಲ್ಲಿದೆ ವಿವರ.

ನಿಜಕ್ಕೂ ಈ ಒಗಟು ತಲೆ ಕೆಡಿಸುತ್ತದೆ. ಉತ್ತರಿಸಲು ಬಹಳ ಸಮಯ ಹಿಡಿಯುತ್ತದೆ. ಈ ಒಗಟಿನಲ್ಲಿ 'ತೆರೆಸಾಳ ಮಗಳು ನನ್ನ ಮಗಳ ತಾಯಿಯಾದರೆ, ನನಗೂ ತೆರೆಸಾಳಿಗೂ ಇರುವ ಸಂಬಂಧವೇನು?(If Teresa's Daughter Is My Daughter's Mother, Then What Am I To Teresa?) ಎಂದು ಕೇಳಲಾಗಿದೆ.
ಈ ಒಗಟು ಕೇಳಿ ಗೊಂದಲ ಮೂಡುವುದು ಸಹಜ ಆದರೆ ಸೂಕ್ಷ್ಮವಾಗಿ ಯೋಚಿಸಿದರೆ ಉತ್ತರ ಹುಡುಕುವುದರಲ್ಲಿ ಕಷ್ಟವಿಲ್ಲ. ಟ್ವಿಟರ್'ನಲ್ಲೂ ಈ ಪ್ರಶ್ನೆಗೆ ಬಹಳಷ್ಟು ಮಂದಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.
ಉತ್ತರವೇನು?
ಈ ಪ್ರಶ್ನೆಯ ವಿಶೇಷತೆ ಎಂದರೆ 'ನನ್ನ ಮಗಳ ತಾಯಿ', ಇದರ ಅರ್ಥ ಸೂಕ್ಷ್ಮವಾಗಿ ಓದಿದರೆ ಅರ್ಥವಾಗುತ್ತದೆ. ವಾಸ್ತವವಾಗಿ ತನ್ನ ಕುರಿತಾಗಿಯೇ ಮಾತನಾಡುತ್ತಿದ್ದಾಳೆ. ಹೀಗಾಗಿ 'ನನ್ನ ಮಗಳ ತಾಯಿ' ಎಂದರೆ 'ನಾನು' ಎಂದರ್ಥ. ಒಟ್ಟಾರೆಯಾಗಿ ಒಂದು ವೇಳೆ ತೆರೆಸಾಳ ಮಗಳು 'ನಾನು' ಆಗಿದ್ದರೆ, ತೆರೆಸಾಳೊಂದಿಗೆ ನನಗಿರುವ ಸಂಬಂಧವೇನು? 'ತಾಯಿ' ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಈ ಪ್ರಶ್ನೆ ಕೇಳಿದವಳು ತೆರೆಸಾಳ ಮಗಳೇ ಆಗಿದ್ದಾಳೆ.
ಉತ್ತರ ನೋಡಿದ ಬಳಿಕ ಅತ್ಯಂತ ಸುಲಭದ ಒಗಟಿದು ಅಂತ ಅನಿಸಬಹುದು. ಸಾಮಾಜಿಕ ಜಾಲಾತಾಣಗಳಲ್ಲಿಒಗಟುಗಳು ವೈರಲ್ ಆಗುವುದು ಸಾಮಾನ್ಯ ಆದರೆ ಇಷ್ಟು ಸುಲಭದ ಆದರೆ ಗೊಂದಲಮಯವಾದ ಒಗಟುಗಳು ಭಾರೀ ಸಂಚಲನ ಮೂಡಿಸುತ್ತವೆ.