Knowledge: ಹೊಟೇಲ್‌ನಿಂದ ಈ ವಸ್ತು ಮನೆಗೆ ತರ್ಬೇಡಿ
ಹೊಟೇಲಿನಲ್ಲಿ ರೂಮ್ ಬುಕ್ ಮಾಡಿದಾಗ ಒಂದಿಷ್ಟು ವಸ್ತುಗಳು ಕಣ್ಣಿಗೆ ಬೀಳುತ್ವೆ. ನಾವು ಬುಕ್ ಮಾಡಿರೋ ರೂಮ್ ಅಲ್ವಾ, ಇವೆಲ್ಲ ನಮ್ಮದೆ ವಸ್ತು ಇರಬಹುದು ಅಂತಾ ಕೆಲವರು ಬ್ಯಾಗ್ ಸೇರಿಸ್ತಾರೆ. ಆದ್ರೆ ಹೊಟೇಲ್ ರೂಮಿಂದ ಎಲ್ಲ ವಸ್ತುವನ್ನು ಮನೆಗೆ ತರುವಂತಿಲ್ಲ ಎಂಬುದು ನಿಮಗೆ ಗೊತ್ತಾ?
ಪ್ರವಾಸ, ಕೆಲಸ ಅಂತಾ ಎಷ್ಟೋ ಬಾರಿ ಬೇರೆ ಊರಿಗೆ ಹೋಗಿರ್ತೇವೆ. ಅಲ್ಲಿ ಹೊಟೇಲ್ ರೂಮಿನಲ್ಲಿ ತಂಗಿರ್ತೇವೆ. ಹೊಟೇಲ್ ರೂಮಿನಲ್ಲಿ ತರಹೇವಾರು ವಸ್ತುಗಳಿರ್ತವೆ. ಸೋಪ್, ಶಾಂಪೂ, ಟವೆಲ್, ಸ್ವಚ್ಛವಾಗಿರುವ ಬಿಳಿಯ ಬೆಡ್ ಶೀಟ್, ವಾಟರ್ ಬಾಟಲ್ ಹೀಗೆ ಅನೇಕ ವಸ್ತುಗಳಿರುತ್ತವೆ. ರೂಮ್ ಚೆಕ್ ಔಟ್ ಮಾಡ್ತಿರುವ ವೇಳೆ ಒಂದಿಷ್ಟು ವಸ್ತುಗಳನ್ನು ಬ್ಯಾಗಿಗೆ ಸೇರಿಸಿಕೊಂಡಿರ್ತೇವೆ. ಆದ್ರೆ ನಾವು ಮಾಡ್ತಿರುವುದು ಸರಿಯೇ? ತಪ್ಪೇ ಎಂಬ ಪ್ರಶ್ನೆ ಕಾಡುತ್ತದೆ. ಬಾಲಿಗೆ ಹೋಗ ದಂಪತಿ ಬೆಡ್ ಶೀಟ್, ಟವೆಲ್ ಎಲ್ಲ ಬ್ಯಾಗ್ ಗೆ ತುಂಬಿದ್ರಂತೆ. ಅದು ಹೊಟೇಲ್ ಸಿಬ್ಬಂದಿಗೆ ಗೊತ್ತಾಗಿ ಅವ್ರ ಮೇಲೆ ಕೇಸ್ ಹಾಕಿದ್ರಂತೆ. ಹಾಗೆ ನಮ್ಮ ಮೇಲೆ ಕೇಸ್ ಬೀಳ್ಬಾರದು ಅಂದ್ರೆ ನಾವು ಯಾವುದು ಸರಿ ಹಾಗೆ ಯಾವುದು ತಪ್ಪು ಎಂಬುದನ್ನು ತಿಳಿಯಬೇಕು.
ನೀವು ಹೊಟೇಲ್ (Hotel) ರೂಮಿನಿಂದ ಕೆಲ ವಸ್ತುಗಳನ್ನು ತರಬಹುದು. ಅದಕ್ಕೆ ಹೊಟೇಲ್ ಸಿಬ್ಬಂದಿ (Staff) ಯಾವುದೇ ಶಿಕ್ಷೆ, ದಂಡ ನೀಡೋದಿಲ್ಲ. ಹಾಗಿದ್ರೆ ಇಂದು ನಾವು ಇದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. ಮೊದಲನೇಯದಾಗಿ ಹೊಟೇಲ್ ರೂಮ್ ನಿಂದ ಯಾವ ವಸ್ತುವನ್ನು ತರಬಹುದು ಎಂದು ಹೇಳ್ತೇವೆ.
ನೀರಿನ ಬಾಟಲ್ (Water Bottle) : ಹೋಟೆಲ್ ರೂಮ್ ನಲ್ಲಿ ನೀರಿನ ಬಾಟಲಿಗಳನ್ನು ಇಡ್ತಾರೆ. ದಿನಕ್ಕೆ ಎರಡು ಬಾಟಲಿಯನ್ನು ನೀಡೇ ನೀಡ್ತಾರೆ. ನೀವು ಈ ನೀರಿನ ಬಾಟಲಿಯನ್ನು ಚೆಕ್ ಔಟ್ ಮಾಡುವಾಗ ನಿಮ್ಮ ಜೊತೆ ತೆಗೆದುಕೊಂಡು ಬರಬಹುದು. ಆದ್ರೆ ಮಿನಿ ಬಾರ್ ನಲ್ಲಿರುವ ಬಾಟಲ್ ಮುಟ್ಟಬೇಡಿ. ಅಲ್ಲಿ ನೀರಿನ ಬಾಟಲಿ, ಬಿಯರ್ ಬಾಟಲಿ ಸೇರಿದಂತೆ ಅನೇಕ ವಸ್ತುಗಳನ್ನು ಇಡ್ತಾರೆ. ಅದನ್ನು ನೀವು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ.
ಟೀ ಮತ್ತು ಕಾಫಿ ಕಿಟ್ : ಇಲ್ಲಿ ಕಿಟ್ ಬಗ್ಗೆ ಮಾತ್ರ ಕಮನ ನೀಡಿ. ಕಾಫಿ (Coffee), ಟೀ (Tea) ತಯಾರಿಸುವ ಯಂತ್ರವನ್ನು ನೀವು ತೆಗೆದುಕೊಂಡು ಹೋಗುವಂತಿಲ್ಲ. ಬರೀ ಟೀ ಅಥವಾ ಕಾಫಿ ಬ್ಯಾಗ್ ಗಳನ್ನು ನೀವು ತೆಗೆದುಕೊಂಡ ಬರಬಹುದು. ಇದ್ರ ಜೊತೆ ಹಾಲಿನ ಪುಡಿ, ಸಕ್ಕರೆ ಮುಂತಾದ ಟೀ ಕಾಫಿ ತಯಾರಿಸಲು ಬಳಸುವ ವಸ್ತುವನ್ನು ನೀವು ಕೊಂಡೊಯ್ಯಬಹುದು. ಹೊಟೇಲ್ ರೂಮಿನಲ್ಲಿ ಇದನ್ನು ತೆಗೆದುಕೊಳ್ಳುವಂತಿಲ್ಲ ಎಂದು ಬರೆದಿದ್ದರೆ ಆಗ ಟೀ ಬ್ಯಾಗ್ ಮುಟ್ಟಬೇಡಿ.
ಮೌತ್ ವಾಶ್ (Mouth Wash) ಸೇರಿದಂತೆ ಬಾಯಿ ಸ್ವಚ್ಛತೆಯ ವಸ್ತುಗಳು : ಹೊಟೇಲ್ ರೂಮಿಗೆ ಹೋಗ್ತಿದ್ದಂತೆ ಟೂತ್ ಬ್ರಷ್ (Tooth Brush) ಮತ್ತು ಟೂತ್ ಪೇಸ್ಟ್, ಮೌತ್ ವಾಶ್ (Mouth Wash) ಗಳನ್ನು ನೀಡಲಾಗುತ್ತದೆ. ನೀವು ಈ ಕಿಟನ್ನು ಆರಾಮವಾಗಿ ಮನೆಗೆ ತರಬಹುದು. ನೀವು ಬಳಸಿದ ವಸ್ತುವನ್ನು ಬೇರೆ ಅತಿಥಿಗೆ ನೀಡುವುದಿಲ್ಲ. ಹಾಗಾಗಿ ನೀವು ಬಳಸಿದ ಬ್ರಷ್, ಪೇಸ್ಟನ್ನು ನೀವು ತರಬಹುದು.
ಫೈವ್ ಸ್ಟಾರ್ Hotels ನಲ್ಲಿ ಫ್ಯಾನ್ ಯಾಕೆ ಇರಲ್ಲ ಗೊತ್ತಾ?
ಬರೆಯುವ ಸಾಮಗ್ರಿ : ಮೊನೊಗ್ರಾಮ್ ನೋಟ್ ಪ್ಯಾಡ್, ಲಕೋಟೆ, ಪೆನ್ಸಿಲ್, ಪೆನ್ ಇತ್ಯಾದಿಯನ್ನು ನೀವು ಮನೆಗೆ ತರಬಹುದು.
ಬಾತ್ ರೂಮ್ ಐಟಂ : ಬಾತ್ ರೂಮಿನಲ್ಲಿರುವ ಇಯರ್‌ಬಡ್‌ಗಳು, ಕಾಟನ್ ಪ್ಯಾಡ್‌ಗಳು, ಶೇವಿಂಗ್ ಆಕ್ಸೆಸರೀಸ್, ಸೋಪ್, ಶಾಂಪೂ, ಬಾಡಿ ಲೋಷನ್, ಕಂಡೀಷನರ್, ಶವರ್ ಕ್ಯಾಪ್, ಬಾತ್ರೂಮ್ ಸ್ಲೀಪರ್ ಮುಂತಾದ ಕಿಟ್ ನೀವು ಮನೆಗೆ ತರಬಹುದು.
ಗಣೇಶನಿಗೆ ಪ್ರಿಯವಾದ ಗರಿಕೆ ಹುಲ್ಲು… ಮಹಿಳೆಯರಿಗೆ ಉತ್ತಮ ಔಷಧಿ
ಇದನ್ನು ಮನೆಗೆ ತರಬೇಡಿ : ಮೇಲೆ ಹೇಳಿದ ವಸ್ತುಗಳನ್ನು ಹೊರತುಪಡಿಸಿ, ಕಾಫಿ ಯಂತ್ರ, ಹೇರ್ ಡ್ರೈಯರ್,ಬೆಡ್‌ಶೀಟ್, ಟಿವಿ ರಿಮೋಟ್ ಸೇರಿದಂತೆ ಯಾವುದೇ ವಸ್ತುವನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ. ಇದು ಹೊಟೇಲ್ ನಿಯಮಕ್ಕೆ ವಿರುದ್ಧವಾಗಿದೆ. ಹೊಟೇಲ್ ಸಿಬ್ಬಂದಿ ನಿಮ್ಮ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆಯಿರುತ್ತದೆ.