Asianet Suvarna News Asianet Suvarna News

ವಾಟ್ಸಪ್ ಇಲ್ಲ, ಟಿವಿ ನೋಡಲ್ಲ... ನೆಮ್ಮದಿ ಜೀವನ ಇವರದ್ದು

ಇವರು ವಾಟ್ಸಪ್ ಬಳಸಲ್ಲ, ಟಿವಿ ನೋಡಲ್ಲ ಹಾಗಾಗಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಕೈಯಲ್ಲಿ ಇಲ್ಲ ಎಂದರೆ ಅದೊಂದು ಜೀವನವೇ ಅಲ್ಲ ಎಂದು ಅಂದುಕೊಳ್ಳುವವರು ಈ ಸುದ್ದಿ ಓದಲೇಬೇಕು.

The Life of Van Gujjars in Uttarakhand They Dont Have WhatsApp
Author
Bengaluru, First Published Jul 19, 2019, 8:11 PM IST

ಶ್ರೀನಗರ[ಜು. 19] ಹಕ್ಕಿಗಳ ಚಿಲಿಪಿಲಿ, ಗಿಡ ಮರಗಳ ಟೊಂಗೆಗಳು ಗಾಳಿಗೆ ಮಾಡುವ ಸದ್ದು... ಹೌದು ಈ ಸಮುದಾಯ ನಿಸರ್ಗದಲ್ಲಿಯೇ ಜೀವನ ಕಂಡುಕೊಂಡಿದೆ. ಅಲ್ಲಿಯೇ ಜೀವಿಸುತ್ತಿದ್ದಾರೆ. ಮಂಗಗಳನ್ನು ನೋಡಿ ಭಯಗೊಳ್ಳುವರನ್ನು ನೋಡಿದರೆ ಇವರು ಅಚ್ಚರಿಪಡುತ್ತಾರೆ.

ಜಮ್ಮುವಿನ  56 ವರ್ಷದ ಬನಿಯಾ ಮತ್ತು ಅವರ 12 ಸಂಗಡಿಗರು ನಿಸರ್ಗದಲ್ಲಿಯೇ ತಮ್ಮ ದಿನವನ್ನು ಸುಂದರ ಮಾಡಿಕೊಳ್ಳುತ್ತಿದ್ದಾರೆ. ಉತ್ತರಾಖಂಡದ ರಾಜಾಜಿ ನ್ಯಾಶನಲ್ ಪಾರ್ಕ್ ನಿಂದ ಬನಿಯಾ ಪೂರ್ವಜರು 1970 ರ ಸಂದರ್ಭದಲ್ಲಿ ಜಮ್ಮುವಿನ ಈ ಭಾಗಕ್ಕೆ ಬಂದು ನೆಲೆಸಿದರು ಎಂಬ ಉಲ್ಲೇಖ ಇದೆ.

ವಾನ್ ಗುಜ್ಜಾರ್ ಅವರ ಜೀವನವೇ ಹಾಗೆ,,, ಸದಾ  ನಿಸರ್ಗದೊಂದಿಗೆ ಒಡನಾಟ..ಅಲ್ಲೇ ಬದುಕು. ಇವರು ಮೂಲತಃ ಸಾಕು ಎಮ್ಮೆಗಳ  ಜತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡುತ್ತಿದ್ದರು. ವಾನ್ ಗುಜ್ಜಾರ್ ಗಳು ನಿಸರ್ಗ ಸಂಪನ್ಮೂಲಗಳ ಅತ್ಯುತ್ತಮ ರಕ್ಷಕರು ಮತ್ತು  ಬಳಕೆದಾರರು ಎಂದು ಇಂಡಾನಿಯಾ ಯುನಿವರ್ಸಿಟಿಯ ಸಂಶೊಧನಾ ವರದಿ ಸಮಗ್ರ ವಿಚಾರ ತಿಳಿಸುತ್ತದೆ. ಬೇಸಿಗೆಯಲ್ಲಿ ಒಂದೇ ಕಡೆ ನೆಲೆ ನಿಂತರೆ ಚಳಿಗಾಲ ಆರಂಭವಾಗುತ್ತಲೇ ಊರಿನಿಂದ ಊರಿಗೆ ಸಂಚಾರ ಆರಂಭಿಸುವುದು ವಾಡಿಕೆ.

ತಾಯಿ ನೀ ಕರುಣಾಮಯಿ: ಮರಿಜಿಂಕೆಗೆ ಹಾಲುಣಿಸಿದ ಮಹಾತಾಯಿ!

ತಮ್ಮ ಬಳಿ ಇರುವ ಸಂಪತ್ತನ್ನು ತಮ್ ಕೆಲೆಸದ ಮೂಲಕವೇ ಮುಂದಿನ ಪೀಳಿಗೆಗೆ ಹಂಚಿಡುತ್ತಾರೆ. ವಾನ್ ಗುಜ್ಜಾರ್ ಗಳು ಅತ್ಯಂತ ಶಕ್ತಿಶಾಲಿ.. ಅವರ ಸಾಮಾಜಿಕ ಬಂಧಗಳು ಸಹ ಮಾತಿನ ಮುಖೇನವೇ ಸಮುದಾಯದ ಕಾನೂನಾಗುತ್ತದೆ. 

1980 ರಲ್ಲಿ ಆದ ಬದಲಾವಣೆಯೊಂದು ಅರಣ್ಯ ಪ್ರದೇಶದಿಂದ ವಿವಿಧ ಬುಡಕಟ್ಟು ಸಮುದಾಯಗಳನ್ನು ಹೊರಕ್ಕೆ ಹಾಕುವ ಕೆಲಸವಾಯಿತು.  2016ರಲ್ಲಿ ಸಿಕ್ಕ ಲೆಕ್ಕದ ಪ್ರಕಾರ ಸುಮಾರು 1400 ಕುಟುಂಬಗಳನ್ನು ರಾಜಾಜಿ ನ್ಯಾಶನಲ್ ಪಾರ್ಕ್ ನಿಂದ ಹೊರಕ್ಕೆ ಹಾಕಲಾಯಿತು.  ಅಲ್ಲಿನ ನಿವಾಸಿಗಳನ್ನು ಹರಿದ್ವಾರದ ಬಳಿಯ ಗಾಂಧಿ ಕಟ್ಟಾ ವಿಲೇಜ್ ಗೆ ಸ್ಥಳಾಂತರ ಮಾಡಲಾಯಿತು. ಈ ವೇಳೆ ಕೆಲ ಕುಟುಂಬಗಳು ಹಂಚಿಹೋದವು.

ದಾಲ್ ಮತ್ತು ರೋಟಿ ಗುಜ್ಜಾರ್ ಸಮುದಾಯದ ಪ್ರಮುಖ ಆಹಾರ. 2002 ರಲ್ಲಿ ಸಮುದಾಯದವರನ್ನು ಆಶ್ರಮ ಅಂದರೆ ವಸತಿಗೆ ವ್ಯವಸ್ಥೆ ಮಾಡಿದ್ದ ಜಾಗದಿಂದಲೂ ಕಾರಣಾಂತರಗಳಿಂದ ಹೊರಹಾಕಲಾಯಿತು, 2008ರಲ್ಲಿ ಇದ್ದ ಕೆಲ ಕುಟುಂಬಗಳನ್ನು ಹುಡುಕಿ ಅವರಿಗೆ ಭೂಮಿ ನೀಡುವ ಕೆಲಸವೂ ಆಯಿತು. 

ಮಗುವಿನ ಅಳು ಕೇಳದಿರಲು ಸಹಪ್ರಯಾಣಿಕರಿಗೆ ಸಿಹಿ ಹಂಚಿದ ತಾಯಿ

ಬನಿಯಾ ಹೇಳುವಂತೆ ಸಮುದಾಯದ ಜನರಿಗೆ ಹೊರ ಜಗತ್ತಿನ ಸಂಪರ್ಕ ಶುರುವಾಗಿದ್ದೆ ಇತ್ತೀಚೆಗೆ. ಹೊಸ ಜನರೇಶನ್ ವಾಟ್ಸಪ್ ಬಳಕೆ ಆರಂಭಿಸಿದ್ದೆ ಸಂಪರ್ಕಕ್ಕೆ ವೇದಿಕೆಯಾಯಿತಂತೆ.  ನಮಗೆ ಹೊರ ಜಗತ್ತಿನ ಆಗುಹೋಗುಹಳ ಪರಿವಿಯೇ ಇರಲಿಲ್ಲ ಯಾಕೆಂದರೆ ನಮಗೆ ವಾಟ್ಸಪ್ ಮತ್ತು ಟಿವಿ ಗೊತ್ತೆ ಇರಲಿಲ್ಲ. ಪಟ್ಟಣಕ್ಕೆ ಹೋದಾಗ ಅಂಗಡಿಗಳಲ್ಲಿ ಟಿವಿ ಎಂಬ ಮಾಯಾಪೆಟ್ಟಿಗೆ ನೋಡಿದ್ದು ಬಿಟ್ಟರೆ ಬೇರೆನೂ ಗೊತ್ತೆ ಇರಲಿಲ್ಲ ಎನ್ನುತ್ತಾರೆ.

ಇವತ್ತಿಗೂ ಅವರದ್ದೇ ಆದ ಲೋಕ.. ಅವರದ್ದೆ ಪ್ರಪಂಚ.. ಆಧುನಿಕತೆ ನಿಧಾನವಾಗಿ ಇವರನ್ನು ಸೆಳೆದಿದೆ. ಅವರ ಬದುಕಿನ ಒಳ ಹೊಕ್ಕಿದೆ. ಸಮುದಾಯವೇ ಹಾಗೆ ಹೊರ ಜಗತ್ತಿನ ಭಾಷೆಗಳು ಸುಲಭವಾಗಿ ಅರ್ಥವಾಗಲ್ಲ.  ರಾಜಕೀಯದ ವಿಚಾರಗಳ ಬಗ್ಗೆಯಂತೂ ಕೇಳಲೇಬೇಡಿ!

Follow Us:
Download App:
  • android
  • ios