ಇಂದಿನ ದಿನಗಳಲ್ಲಿ ಹರಿದ ಜೀನ್ಸ್‌ ಪ್ಯಾಂಟ್‌ ಧರಿಸುವುದು ಕೂಡ ಒಂದು ಫ್ಯಾಷನ್‌ ಆಗಿಬಿಟ್ಟಿದೆ. ಇಂತಹ ಬಟ್ಟೆಗಳಿಗೂ ಸಾವಿರಾರು ರು. ಬೆಲೆ ಕೊಡಬೇಕು. ಇದೀಗ ಜೀನ್ಸ್‌ ಮಾದರಿಯ ಒಳ ಉಡುಪೊಂದು ಭಾರೀ ಸುದ್ದಿ ಮಾಡುತ್ತಿದೆ.

ಡೆನಿಮ್‌ ಪ್ಯಾಂಟಿಸ್‌ ಬಿಡುಗಡೆ ಮಾಡಿರುವ ಜೀನ್ಸ್‌ ಅಂಡರ್‌ ವೇರ್‌ನ ಬೆಲೆ ಬರೋಬ್ಬರಿ 21 ಸಾವಿರ ರು. ಅಂತೆ. ಫ್ಯಾಷನ್‌ ಮಳಿಗೆಗಳು ಮತ್ತು ಆನ್‌ ಲೈನ್‌ನಲ್ಲಿ ಡೆನಿಮ್‌ ಪ್ಯಾಂಟಿಯ್‌ ಜೀನ್ಸ್‌ ಚಡ್ಡಿ ಮಾರಾಟಕ್ಕಿಟ್ಟಿದೆ.

ಈ ದುಬಾರಿ ಡೆನಿಮ್‌ ಪ್ಯಾಂಟಿಯ್‌ ಜೀನ್ಸ್‌ ಚಡ್ಡಿ ಸಾಮಾಜಿಕ ಜಾಲತಾಣಗಳಲ್ಲೂ ಬಹಳಷ್ಟು ವೈರಲ್ ಆಗುತ್ತಿದೆ.