Asianet Suvarna News Asianet Suvarna News

ಹುಣಸೆ ಚಿಗುರಿನ ಚಟ್ನಿ

ಹುಣಸೆ ಚಿಗುರು ಎಂದರೆ ಬಾಲ್ಯ ನೆನಪಾಗುತ್ತದೆ. ಕಷ್ಟ ಪಟ್ಟು ಕಲ್ಲು ಹೊಡೆದು ಎಳೇ ಹುಣಸೆಕಾಯಿಗೆ ಉಪ್ಪು ಹಾಕಿ ತಿಂದಿದ್ದು ನೆನಪಿಸಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ. ಇದರಿಂದ ಚಟ್ನೀನೂ ಮಾಡಬಹುದು ಗೊತ್ತಾ? ಇಲ್ಲಿದೆ ರೆಸಿಪಿ

Tamarind chutney

ಬೇಕಾಗುವ ಸಾಮಾಗ್ರಿಗಳು:

-ಎಳೆ ಹುಣಸೆ ಚಿಗುರು 

- ಮೆಣಸಿಣಕಾಯಿ

- ಜೀರಿಗೆ

- ಕರಿಬೇವು

- ಈರುಳ್ಳಿ

- ಬೆಳ್ಳುಳ್ಳಿ

- ಉಪ್ಪು

- ಸ್ವಲ್ಪ ಬೆಲ್ಲ

 

ಮಾಡುವ ವಿಧಾನ:

ಎಳೆ ಹುಣಸೆ ಚಿಗುರನ್ನು ಬಾಡಿಸಿ, ಅದಕ್ಕೆ ಹುರಿದ ಒಣ ಮೆಣಸಿಣಕಾಯಿ, ಹುರಿದ ಜೀರಿಗೆ, ಹುರಿದ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿ. ಬೇಕಿದ್ದರೆ ಚೂರು ಬೆಲ್ಲವನ್ನೂ ಸೇರಿಸಬಹುದು. ಹುಳಿ ಹಾಗೂ ಖಾರ ಜೊತೆಯಾಗಿ ಅದ್ಭುತ ರುಚಿ ತಂದುಕೊಡುತ್ತದೆ ಈ ಚಟ್ನಿ. 

Follow Us:
Download App:
  • android
  • ios