ಅಲ್ಸರೇಟಿವ್ ಕೊಲೈಟೀಸ್ ಅಂದ್ರೇನು ಗೊತ್ತಾ? ಇದಕ್ಕೆ ಮಾತ್ರೆ ಹೇಗೆ ತಯಾರಿಸ್ತಾರೆ ಗೊತ್ತಾ?

First Published 5, Mar 2018, 3:55 PM IST
Symptoms Of Ulcerative colitis
Highlights

ಅಲ್ಸರೇಟಿವ್ ಕೊಲೈಟೀಸ್ ಎಂಬುದು ದೊಡ್ಡ ಕರುಳು  ಮತ್ತು ಗುದದ್ವಾರದ ಒಳ ಪದರವನ್ನು ಕಾಡುವ ಒಂದು ಖಾಯಿಲೆ. ಯಾಕಾಗಿ ಈ ರೋಗ ಬರುತ್ತದೆ ಎಂಬುದು  ಸರಿಯಾಗಿ ತಿಳಿದಿಲ್ಲ. ವಂಶ ವಾಹಿಯಲ್ಲಿ, ದೇಹದ ರಕ್ಷಣಾ  ಪ್ರಕ್ರಿಯೆಯಲ್ಲಿ ವ್ಯತ್ಯಯವಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ.

ಬೆಂಗಳೂರು (ಮಾ. 05): ಅಲ್ಸರೇಟಿವ್ ಕೊಲೈಟೀಸ್ ಎಂಬುದು ದೊಡ್ಡ ಕರುಳು  ಮತ್ತು ಗುದದ್ವಾರದ ಒಳ ಪದರವನ್ನು ಕಾಡುವ ಒಂದು ಖಾಯಿಲೆ. ಯಾಕಾಗಿ ಈ ರೋಗ ಬರುತ್ತದೆ ಎಂಬುದು  ಸರಿಯಾಗಿ ತಿಳಿದಿಲ್ಲ. ವಂಶ ವಾಹಿಯಲ್ಲಿ, ದೇಹದ ರಕ್ಷಣಾ  ಪ್ರಕ್ರಿಯೆಯಲ್ಲಿ ವ್ಯತ್ಯಯವಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ.
ಕರುಳಿನ ಒಳಭಾಗದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಕೂಡ ಈ ರೋಗ ಬರುವ ಸಾಧ್ಯತೆ ಇದೆ. ಲ್ಯಾಕ್ಟೊಬಾಸಿಲಸ್ ಮತ್ತು ಇ ಕೊಲೈ ಎಂಬ ರೋಗಾಣು  ಜೀವಿಗಳು ಕರುಳಿನ ಆರೋಗ್ಯವನ್ನ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಅನಾರೋಗ್ಯಕರವಾದ ಆಹಾರ, ಜೀವನ ಶೈಲಿ, ಅತಿಯಾದ ಮಾನಸಿಕ ಒತ್ತಡವೂ ಈ ಆಂತರಿಕ ಸೂಕ್ಷಾಣು  ಜೀವಿಗಳ ಸಮತೋಲನವನ್ನು ಹಾಳು ಮಾಡುವ ಸಾಧ್ಯತೆ ಇದೆ. ಯಕೃತಿನ ತೊಂದರೆ, ಕ್ರೋನ್ಸ್ ಎಂಬ ರೋಗ, ಪಾರ್ಕಿನ್‌ಸನ್ಸ್
ಎಂಬ ನರರೋಗ, ಅತಿಯಾದ ಬೊಜ್ಜು ಮೊದಲಾದವು ಕರುಳಿನ ಆಂತರಿಕ ವಾತಾವರಣವನ್ನು ಹಾಳುಗೆಡವಿ ಈ ಅಲ್ಸರೇಟಿವ್  ಕೊಲೈಟಿಸ್ ರೋಗಕ್ಕೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಈ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
 

ರೋಗದ ಲಕ್ಷಣಗಳು ಏನು?
ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಪದೇ ಪದೇ ರಕ್ತ ಮಿಶ್ರಿತ ಅತಿ ಬೇದಿ ಕಾಡುತ್ತಿರುತ್ತದೆ. ಇನ್ನು ಕೆಲವರಲ್ಲಿ ಬರಿ ಆತೀ ಬೇಧಿ ಅಥವಾ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗಂಟುನೋವು, ನಿದ್ರಾಹೀನತೆ, ಬೆನ್ನಿನ ಕೆಲಭಾಗದಲ್ಲಿ ನೋವು, ಕಣ್ಣು ಕೆಂಪಾಗುವುದು, ಚರ್ಮದಲ್ಲಿ ತುರಿಕೆ, ಯಕೃತ್ತ್ ದೊಡ್ಡದಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.
 

ಚಿಕಿತ್ಸೆ ಹೇಗೆ?
ಈ ರೋಗದ ಚಿಕಿತ್ಸೆ ಬಹಳ ಕ್ಲಿಷ್ಟಕರವಾದದ್ದು. ದೊಡ್ಡ  ಸಮತೋಲನ ಕಳೆದುಕೊಂಡು, ಉಪಕಾರಿ ಸೂಕ್ಷ್ಮಾಣು ಜೀವಿಗಳು ಕಾರ್ಯ ನಿಲ್ಲಿಸುತ್ತವೆ. ಇದರಿಂದಾಗಿಯೇ ಅತಿಬೇದಿ ಮತ್ತು ರಕ್ತಸ್ರಾವ ಕೂಡಾ ಆಗುತ್ತದೆ. ಇದರ ಜೊತೆಗೆ ಕ್ಲಸ್ಟ್ರೀಡಿಯಾ ಡಿಪಿಸಿಲ್  ಎಂಬ ಬ್ಯಾಕ್ಟೀರಿಯ ಸೋಂಕು ಕರುಳಿನ ಒಳಭಾಗಕ್ಕೆ ಸೇರಿಕೊಂಡು  ಮತ್ತಷ್ಟು ತೊಂದರೆ ನೀಡುತ್ತದೆ. ಈ ಹಂತದಲ್ಲಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ತಿಂಗಳು ಗಟ್ಟಲೆ ಆಂಟಿ ಬಯೋಟಿಕ್ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. 

ಏನಿದು ಮಲಮಾತ್ರೆ?
ಆರೋಗ್ಯವಂತ ವ್ಯಕ್ತಿಯ ದೇಹದಿಂದ ಮಲವನ್ನು ಪಡೆಯಲಾಗುತ್ತದೆ. ಆ ಬಳಿಕ ಈ ಮಲವನ್ನು ಪರಿಷ್ಕರಿಸಿ, ನಿಗದಿತವಾದ ಸಾಂದ್ರತೆಯುಳ್ಳ  ಮಿಶ್ರಣವಾಗಿ ಮಾಡಲಾಗುತ್ತದೆ. ನಂತರ ಕೊಲೋನೋಸ್ಕೋಪಿಯ ಮುಖಾಂತರ ಕರುಳಿನ ಒಳಭಾಗಕ್ಕೆ  ಸೇರಿಸಲಾಗುತ್ತದೆ. ಈ ಮೂಲಕ  ಕರುಳಿನ ಒಳಪದರದಿಂದ ಕಳೆದು  ಹೋದ ಪರೋಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪುನಃ ಸೇರಿಸಿ ಕರುಳಿನ ಒಳಭಾಗದ ಆಂತರಿಕ  ವಾತಾವರಣವನ್ನು ಸಮತೋಲನಗೊಳಿಸಿ ಆರೋಗ್ಯವಂತ
ಕರುಳಿನ ಒಳಪದರ ಸೃಷ್ಠಿಯಾಗಲು ಪೂರಕವಾದ  ವಾತಾವರಣವನ್ನು ನಿರ್ಮಿಸಲಾಗುತ್ತದೆ. ಕೆಲವೊಮ್ಮೆ  ಗುದದ್ವಾರದ ಮುಖಾಂತರ ಮಲಮಾತ್ರೆಗಳನ್ನು ಕರುಳಿನ  ಒಳಭಾಗಕ್ಕೆ ಸೇರಿಸಲಾಗುತ್ತದೆ. ಬಾಯಿ ಮುಖಾಂತರ  ಸೇವಿಸಬಹುದಾದ ಮಲಮಾತ್ರೆಗಳು ಲಭ್ಯವಿದೆ.

ಮಲದಾನಿಗಳಿಗೆ ಇರಬೇಕಾದ ಅರ್ಹತೆಗಳು ಏನು?
ಮಲದಾನಿಗಳು ಆರೋಗ್ಯವಂತರಾಗಿರಬೇಕು. ದಾನ ಮಾಡುವ  ಸಮಯದಲ್ಲಿ ಕನಿಷ್ಠ ೯೦ ದಿನಗಳವರೆಗೆ ಯಾವುದೇ ನೋವು ನಿವಾರಕ  ಮತ್ತು ಆಂಟಿಬಯೋಟಿಕ್ ಔಷಧಿ ಸೇವಿಸಿರಬಾರದು. ಅತಿಸಾರ, ಮಲಬದ್ಧತೆ, ಅತಿಬೇದಿ ಮತ್ತು ಇನ್ನಿತರ ಯಾವುದೇ ಕರುಳು ಸಂಬಂಧಿ  ಖಾಯಿಲೆಯಿಂದ ಬಳಲುತ್ತಿರಬಾರದು. ಅಲರ್ಜಿ ಮತ್ತು ದೇಹದ ರಕ್ಷಣಾ  ಸಾಮರ್ಥ್ಯ ಕುಸಿದಿರುವ ರೋಗಗಳಿಂದ ಬಳಲುತ್ತಿರಬಾರದು. ಗರ್ಭಿಣಿಯರು ಮಲದಾನ ಮಾಡಲು ಸಾಧ್ಯವಿಲ್ಲ. ಯಾಕೆಂದರೆ
ಗರ್ಭಾವಸ್ಥೆಯ ಸಮಯದಲ್ಲಿ ಕರುಳಿನ ಒಳಭಾಗದ ಗಟ್ ಪ್ರೋರಾ  ಬದಲಾಗಿರುತ್ತದೆ. 

loader