ನನ್ನ ಗಂಡನಿಗೆ ಅಫೇರಿ ಇದೆ; ಇನ್ನೊಂದು ಮದುವೆ ಆಗಲೇ?

suggest for women who is facing family problem
Highlights

ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಂಡ ಬೇರೋಬ್ಬಳ ಜೊತೆ ಸಂಬಂಧ ಹೊಂದಿದ್ದು ಈಕೆ ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾಳೆ. ಮುಂದೇನು ಮಡಡಬೇಕು ಎಂದು ಗೊಂದಲದಲ್ಲಿರುವ ಇವರಿಗೆ ಒಳ್ಳೆಯ ಸಲಹೆ ಕೊಡಿ. 

ನನಗೀಗ 44 ವರ್ಷ. ಮದುವೆಯಾದಾಗಿನಿಂದ ನನ್ನ ಗಂಡನೊಂದಿಗೆ ನಾನು ನೆಮ್ಮದಿ, ಸಂತೋಷದಿಂದ ಸಂಸಾರ ಮಾಡಿದ್ದೇ ಇಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಚಿಕ್ಕಪ್ಪ, ಅಕ್ಕ, ತಮ್ಮಂದಿರೇ ಆಸರೆ. ಆದರೆ ಅವರಿಗೂ ಬಡತನ, ಅವರದ್ದೇ ಸಮಸ್ಯೆ ಇರುವುದರಿಂದ ನನ್ನ ಕಷ್ಟಕ್ಕೆ ಯಾವುದೇ ಸ್ಪಂದನೆ ನೀಡುತ್ತಿಲ್ಲ.

ನನ್ನ ಗಂಡನಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇದೆ ಎನ್ನುವುದು ನನಗೆ ಗೊತ್ತಾಗಿದೆ. ನನಗೆ ಮಕ್ಕಳಿಲ್ಲ. ಮುಂದೆ ಮಕ್ಕಳಾಗುತ್ತವೆ ಎಂದು ಡಾಕ್ಟರ್ ಹೇಳಿದ್ದರೂ ನನ್ನ ಗಂಡ ಇದನ್ನು ನಂಬಿಲ್ಲ. ನಾನೀಗ ಮತ್ತೊಂದು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ಆದರೆ ಹುಡುಗ ಸಿಕ್ಕುತ್ತಾನೆಯೇ? ಅವನು ನನ್ನನ್ನು ಒಪ್ಪುತ್ತಾನೆಯೇ? ನನಗೂ ಒಂದು ಸುಂದರ ಬಾಳು ಸಿಕ್ಕುವುದೇ ಎನ್ನುವುದೇ ಚಿಂತೆಯಾಗಿದೆ. ಏನು ಮಾಡುವುದೋ ತಿಳಿಯುತ್ತಿಲ್ಲ. ಏನಾದರೂ ಸಲಹೆ ಕೊಡಿ.

(ಸಾಂದರ್ಭಿಕ ಚಿತ್ರ)

ನಿಮ್ಮ ಸಲಹೆಗಳನ್ನು  suvarnanewsindia@gmail.com ಕಳುಹಿಸಿ. ಸಲಹೆಗಳಿಗೆ ಸ್ವಾಗತ. 

loader