ಒತ್ತಡ, ಆತಂಕ ದೂರವಾಗಬೇಕೇ? ಹಾಗಾದರೆ ನಿಮ್ಮ ಸಂಗಾತಿಯ ಬಟ್ಟೆ ಸ್ಮೆಲ್'ನಿಂದ ಇದು ಸಾಧ್ಯ

Streaa will be decrease if u Smell your Partner Cloth Smell
Highlights

ತುಂಬಾ ಒತ್ತಡಕ್ಕೊಳಗಾದ ಸಂದರ್ಭದಲ್ಲಿ ಸಂಗಾತಿಯ ಶರ್ಟ್ ಸುವಾಸನೆಯನ್ನು ಹೀರುವುದರಿಂದ ಆತಂಕ, ಒತ್ತಡಗಳು ದೂರಾಗುತ್ತವೆಯಂತೆ. ಹೌದು, ಯಾವ ಮಹಿಳೆಯರು ಒತ್ತಡಕ್ಕೊಳಗಾದ ಸಂದರ್ಭದಲ್ಲಿ ಅವರ ಸಂಗಾತಿಯ ಶರ್ಟ್ ಅಥವಾ ಬಟ್ಟೆಯ ವಾಸನೆಯನ್ನು ಹೀರುತ್ತಾರೋ ಅವರ ಒತ್ತಡ ಪ್ರಮಾಣ ಕಡಿಮೆಯಾಗುತ್ತದೆಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಹಲವು ಜನರು ಮಲಗುವ ವೇಳೆ ತಮ್ಮ ಸಂಗಾತಿ ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಸಂಗಾತಿಯ ಪಕ್ಕದಲ್ಲೇ ಇರಲು ಬಯಸುತ್ತಾರೆ. ಅಲ್ಲದೆ ಸಂಗಾತಿಗಳು ಹತ್ತಿರವಿಲ್ಲದಿರುವ ಸಂದರ್ಭದಲ್ಲಿಯೂ ಅವರ ಬಟ್ಟೆಯ

ಸುವಾಸನೆಯನ್ನು ಹೀರುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೊಲಂಬಿಯಾ ವಿಶ್ವವಿದ್ಯಾಲಯದ ಮನಃಶಾಸ್ತ್ರ ಅಧ್ಯಾಪಕ ಮಾರ್‌ಲೈಸ್ ಹಾಫರ್. ಹಾಫರ್ ಮತ್ತು ಅವರ ಸಹೋದ್ಯೋಗಿಗಳು ೯೬ ದಂಪತಿಗಳನ್ನು ಈ ಸಮೀಕ್ಷೆಗೆ ಒಳಪಡಿಸಿದ್ದರು. ಮೊದಲಿಗೆ ಪುರುಷರಿಗೆ 24 ಗಂಟೆ ಬಿಳಿ ಟಿ-ಶರ್ಟ್ ಹಾಕಿ ಅನಂತರದಲ್ಲಿ ಅದನ್ನು ತೆಗೆದಿಡುವಂತೆ ಹೇಳಲಾಗಿತ್ತು.

ಮಹಿಳೆಯರಿಗೆ ‘ಸೋಶಿಯಲ್ ಸ್ಟ್ರೆಸ್ ಟೆಸ್ಟ್’ ನೀಡಿ ಅವರ ಪ್ರತಿಕ್ರಿಯೆಯನ್ನು ಪಡೆಯಲಾಯಿತು. ಈ ಪರೀಕ್ಷೆಗೂ ಮೊದಲು ಮತ್ತು ಅನಂತರ 3 ಬಾರಿ ಶರ್ಟ್‌ನ ಸುವಾಸನೆ ಹೀರುವಂತೆ ಹೇಳಲಾಗಿತ್ತು. ಆ ಪರೀಕ್ಷೆಯಲ್ಲಿ ಮಹಿಳೆಯರು ತಮ್ಮ ಸಂಗಾತಿಯ ಬಟ್ಟೆಗಳ ಸುವಾಸನೆ ತೆಗೆದುಕೊಂಡಾಗ ಅವರಲ್ಲಿ ಒತ್ತಡ ಕಡಿಮೆಯಾಗಿರುವುದು ಕಂಡುಬಂತು.

loader