Asianet Suvarna News Asianet Suvarna News

ನಿಂತು ಕೆಲಸ ಮಾಡೋರು ಅನುಭವಿಸುವ ನೋವಿದು

ಕೂತೇ ಕೆಲಸ ಮಾಡುವವರದೊಂದು ಪ್ರಾಬ್ಲಂ ಆದರೆ, ನಿಂತು ಕೆಲಸ ಮಾಡೋರಿಗೆ ಮತ್ತೊಂದು ಆರೋಗ್ಯ ಸಮಸ್ಯೆ ಕಾಡುತ್ತೆ. ಇದಕ್ಕೂ ಇದೆ ಪರಿಹಾರ. ಏನಿದು?

Standing work desk is injurious to health
Author
Bengaluru, First Published Dec 9, 2018, 2:56 PM IST

ಹೆಚ್ಚು ಹೊತ್ತು ಕೂತು ಕೆಲಸ ಮಾಡಿದರೆ ದೇಹದ ತೂಕ ಹೆಚ್ಚುತ್ತದೆ. ಅಲ್ಲದೇ ಬೇಡ ಬೇಡವೆಂದರೂ ಬೇಡದ ಅನಾರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತವೆ. ಹಾಗಂತ ನಿಂತು ಕೆಲಸ ಮಾಡಿದರೆ, ಯಾವ ಸಮಸ್ಯೆಯೂ ಇರುವುದಿಲ್ಲವೇ? ಇಲ್ಲ, ಅದರಿಂದಲೂ ಮತ್ತೊಂದು ರೀತಿಯ ಸಮಸ್ಯೆ ಕಾಡುವುದು ಸಹಜ. ಏನೇನಾಗುತ್ತೆ?

ಒವರ್ ಟೈಂ ಕೆಲಸ ಮಾಡುವ ವರ್ಕೋಹಾಲಿಕ್‌ಗೆ ವರ್ಷಗಳ ಹಿಂದೆ ನಡೆದಿರೋ ಸಂಶೋಧನೆ ಕೆಟ್ಟ ಸುದ್ದಿಯೊಂದು ನೀಡಿದೆ. ಅಲ್ಲಾಡದೇ ಕೆಲಸ ಮಾಡುವುದು, ಧೂಮಪಾನ ಮಾಡುವುದಕ್ಕೆ ಸಮವಂತೆ. ಕೂತು ಕೂತು ಕೆಲಸ ಮಾಡಿದರೆ ಆರೋಗ್ಯಕ್ಕೆ ಕೆೇಡೆಂದು ಚಿಂತಿಸಿ, ಸ್ಟ್ಯಾಂಡಿಗ್ ಡೆಸ್ಕ್ ಎಂದು ಐಟಿ ಕಂಪನಿಗಳು ಮಾಡಿವೆ. ಆದರೂ, ನಿಂತು ಕೆಲಸ ಮಾಡುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬುದನ್ನು ಮತ್ತೊಂದು ಸಂಶೋಧನೆ ಹೇಳಿದೆ. 

ಬೊಜ್ಜು ಕರಗಿಸಿ ದೇಹ ಫಿಟ್ ಮಾಡುತ್ತೆ ಕರಿ ಮೆಣಸು

ನಿಂತು ಕೆಲಸ ಮಾಡುವುದು ಹೃದ್ರೋಗಕ್ಕೆ ದಾರಿ ಮಾಡಿಕೊಡುತ್ತದೆ, ಎಂದು ವೈದ್ಯರು ಹೇಳುತ್ತಾರೆ. ಅಂದರೆ ಕೂತು ಕೆಲಸ ಮಾಡುವುದಕ್ಕೆ ಪರಿಹಾರವಾಗಿ, ನಿಂತು ಕೆಲಸ ಮಾಡಲಾಗುವುದಿಲ್ಲ ಎನ್ನುವುದು ಈ ಸಂಶೋಧನೆಯಿಂದ ಅರಿಯಬೇಕಾದ ಅಂಶ. 

Standing work desk is injurious to health

ಎರಡಕ್ಕೂ ಇದೆ ವ್ಯತ್ಯಾಸ?

ಒಂದೆಡೆ ಕುಳಿತು 8-9 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವವರ ದೇಹದಲ್ಲಿ ನೀರು ಹೆಚ್ಚಾದರೆ, ಸೊಂಟ ಭಾಗದಲ್ಲಿರುವ ಮೂಳೆ ಹಾಗೂ ಕುತ್ತಿಗೆ  ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೆ, ನಿಂತು ಕೆಲಸ ಮಾಡುವವರೂ ತಲೆಯನ್ನು ಬಗ್ಗಿಸುವುದರಿಂದ ಬೆನ್ನು ಹಾಗೂ ಕತ್ತಿನ ಮೂಳೆ ಮೇಲೆ ಒತ್ತಡ ಬೀಳುವುದು ತಪ್ಪೋಲ್ಲ. 

ಹಾಗಲ, ಆರೋಗ್ಯಕ್ಕೆ ಅಮೃತ

ಪರಿಹಾರವಿದೆ ಇದಕ್ಕೆ!

ನಿರಂತರವಾಗಿ ಕೆಲಸ ಮಾಡುವಾಗ 20 ನಿಮಿಷಗಳ ಕಾಲ ನೇರವಾಗಿ ಕುಳಿತುಕೊಳ್ಳಬೇಕು. ನಂತರ 8 ನಿಮಿಷ ನಿಂತು, ಮೈ- ಕೈ, ಕಾಲು ಅಲ್ಲಾಡಿಸಬೇಕು. ಗಂಟೆಗೊಮ್ಮೆಯಾದರೂ 2 ನಿಮಿಷಗಳು ಕಾಲ ಓಡಾಡಬೇಕು. ಇವನ್ನು ಪಾಲಿಸುವುದಾದರೆ, ನಿಂತಾದರೂ ಕೆಲಸ ಮಾಡಿ, ಕೂತಾದ್ರೂ ಕೆಲಸ ಮಾಡಿ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮವೂ ಬೀರುವುದಿಲ್ಲ. ಅಲ್ಲದೇ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳುವುದರಿಂದ ಮನಸ್ಸೂ ರಿಲಾಕ್ಸ್ ಆಗುತ್ತದೆ. ಮನಸ್ಸಿನ ಆರೋಗ್ಯದ ದೃಷ್ಟಿಯಿಂದಲೂ ಕೆಲಸದ ನಡುವೆ ಸಣ್ಣದೊಂದು ಬ್ರೇಕ್ ತೆಗೆದುಕೊಳ್ಳುವುದು ಒಳಿತು.

Follow Us:
Download App:
  • android
  • ios