ಚಳಿ ಮಳೆಯೊಂದಿಗೆ ಸ್ಟಫ್ಡ್ ಮಿರ್ಚಿ ಫ್ರೈ ಇದ್ದರೆ ಹೇಗೆ?

First Published 24, Jul 2018, 4:50 PM IST
Spicy mirchi fry
Highlights

ಹೊರಗೆ ತಣ್ಣನೇ ಗಾಳಿ ಬೀಸುತ್ತಿದೆ. ಒಳಗೆ ಮೈ ಕೊರೆಯುವ ಚಳಿ. ಖಾರ ಖಾರವಾಗಿ ತಿನ್ನಲ್ಲಿಕ್ಕಿದ್ದರೆ ಅದರ ಮಜಾನೇ ಬೇರೆ. ಬೊಂಡಾ ಮಾಡಿಕೊಂಡು ತಿಂದರೆ ಕರಿದ ತಿಂಡಿಯಂತಾಗುತ್ತದೆ. ಮೆಣಸಿಕಾಯ ಸ್ಟಫ್ಡ್ ಮಾಡಬಹುದು, ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ...

ಬೇಕಾಗುವ ಸಾಮಾಗ್ರಿ :

 • ಕಡಲೆ ಕಾಯಿ ಬೀಜದ ಪುಡಿ
 • ಅರಿಶಿಣ
 • ಅಚ್ಚ ಖಾರದ ಪುಡಿ
 • ದನಿಯಾ ಪುಡಿ
 • ಜೀರಿಗೆ ಪುಡಿ
 • ಗರಂ ಮಸಾಲ
 • ಉಪ್ಪು
 • ಆಮ್ಚೂರ್
 • ಸೊಂಪು ಪುಡಿ
 • ಇಂಗು
 • ದೊಡ್ಡ ಮೆಣಸಿಕಾಯಿ

ಮಾಡುವ ವಿಧಾನ:

 • ಒಂದು ಪಾತ್ರೆಯಲ್ಲಿ ಕಡಲೆ ಕಾಯಿ ಬೀಜ, ಅರಿಶಿಣ, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಆಮ್ಚೂರ್ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
 • ದೊಡ್ಡ ಮೆಣಸನ್ನು ಮಧ್ಯ ಭಾಗಕ್ಕೆ ಕತ್ತರಿಸಿ (ಮೆಣಸಿನ ಬೀಜ ತೆಗೆದು ಮಸಾಲ ಹಾಕುವಷ್ಟು ಅಗಲ). ನಂತರ ತಯಾರಿಸಿದ ಮಸಾಲ ಪುಡಿಯನ್ನು ಕತ್ತರಿಸಿದ ಮೆಣಸಿನೊಳಗೆ ತುಂಬಿಸಿ. 
 • ಒಂದು ಪಾತ್ರೆಯಲ್ಲಿ ಕಾದ ಎಣ್ಣೆಗೆ ಮಸಾಲೆ ತುಂಬಿದ ಮೆಣಸನ್ನು ಹಾಕಿ ತುಸು ಹುರಿದು ಕೊಳ್ಳಬೇಕು. ನಂತರ ಮಿಕ್ಕಿರುವ ಮಸಾಲ ಪುಡಿಯನ್ನು ಅದಕ್ಕೆ ಸೇರಿಸಿದರೆ ಮತ್ತಚ್ಚು ರುಚಿ ಹೆಚ್ಚುತ್ತದೆ. 
loader