Asianet Suvarna News Asianet Suvarna News

ಪುರುಷ ಬಂಜೆತನ: ಸಿಗರೇಟ್ ಸೇದುವ ಅಪ್ಪಂದಿರೇ ಮಕ್ಕಳಿಗೆ ವಿಲನ್!

ವೀರ್ಯದ ಉತ್ಪಾದನೆ ಕುಂಠಿತವಾಗಿರುವುದು ಹಾಗೂ ಗುಣಮಟ್ಟ ಲೋಪ ಇರುವುದು ಇತ್ತೀಚೆಗೆ ಪುರುಷರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಇಂದಿನ ಲೈಫ್‌ಸ್ಟೈಲ್ ಕಾರಣ ಎಂಬುದು ಎಷ್ಟು ನಿಜವೋ, ಆ ಪುರುಷರ ಅಪ್ಪಂದಿರ ಲೈಫ್‌ಸ್ಟೈಲ್ ಕೂಡಾ ಕಾರಣವಾಗುವುದು ಅಷ್ಟೇ ಸತ್ಯ ಎನ್ನುತ್ತಿದೆ ಹೊಸ ಅಧ್ಯಯನ. 

Sperm count 50 percent lower in men whose fathers smoke says study
Author
Bangalore, First Published Jun 11, 2019, 2:55 PM IST

'ತಂದೆತಾಯಿ ಮಾಡಿದ ಪುಣ್ಯ ಮಕ್ಕಳನ್ನು ಕಾಯುತ್ತೆ...' ಎನ್ನುತ್ತಾರೆ ಹಿರಿಯರು. ಆದರೆ, ಇಲ್ಲಿ ತಂದೆಯ ಚಟಗಳು ಮಕ್ಕಳನ್ನು ಕಾಡುತ್ತಿವೆ. ಹೌದು, ಸಿಗರೇಟ್ ಸೇವನೆ ಅಭ್ಯಾಸವಿದ್ದ ತಂದೆ ಇದ್ದರೆ ಅಂಥ ಪುರುಷರಲ್ಲಿ ಶೇ.50ರಷ್ಟು ವೀರ್ಯದ ಪ್ರಮಾಣ ಕಡಿಮೆ ಇರುತ್ತದೆ ಎನ್ನುತ್ತಿದೆ ಹೊಸ ಅಧ್ಯಯನ. 

ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!

ಇದುವರೆಗೂ ತಾಯಂದಿರು ಸಿಗರೇಟ್ ಸೇದಿದರೆ ಅದರ ಪರಿಣಾಮ ಹುಟ್ಟುವ ಮಕ್ಕಳ ಮೇಲಾಗುತ್ತದೆ, ಹೀಗಾಗಿ ಹೆಣ್ಣು ಸರಿಯಾಗಿರಬೇಕು ಎಂಬುದನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಆದರೆ, ತಂದೆಯ ಚಟವೂ ಮಕ್ಕಳು ದೊಡ್ಡವರಾದ ಮೇಲೆ ಅವರ ಸಂತೋಷಕ್ಕೆ ಅಡ್ಡಿಯಾಗುತ್ತಿದ್ದು, ಅಪ್ಪನನ್ನು ಮಕ್ಕಳು ಶಪಿಸಿಕೊಳ್ಳುವಂತಾಗಿದೆ. 

ಸ್ವೀಡನ್‌ನ ಲುಂಡ್ ಯೂನಿವರ್ಸಿಟಿಯ ತಜ್ಞವೈದ್ಯ ಜೋನಾಥನ್ ಆಕ್ಸೆಸ್ಸನ್ ಈ ಬಗ್ಗೆ ಅಧ್ಯಯನ ನಡೆಸಿದ್ದು, 'ತಾಯಿ ನಿಕೋಟಿನ್ ಬಳಸುತ್ತಿರಲಿ, ಇಲ್ಲದಿರಲಿ, ತಂದೆ ಸ್ಮೋಕ್ ಮಾಡುತ್ತಿದ್ದರೆ ಅಂಥ ತಂದೆಯ ಮಕ್ಕಳಲ್ಲಿ ಶೇ.50ರಷ್ಟು ವೀರ್ಯದ ಕೊರತೆ ಕಂಡುಬರುತ್ತದೆ. ಅದೂ ಕೂಡ ಕಡಿಮೆ ಗುಣಮಟ್ಟದ್ದು. ಅಷ್ಟೇ ಅಲ್ಲ, ತಂದೆಗೆ ಸ್ಮೋಕಿಂಗ್ ಚಟವಿದ್ದರೆ ಅವರ ಹೆಣ್ಣುಮಕ್ಕಳಿಗೆ ಮಕ್ಕಳಾಗುವ ಅವಕಾಶ ಬಹಳ ಕಡಿಮೆ ಸಮಯವಿರುತ್ತದೆ,' ಎಂದು ತಿಳಿಸಿದ್ದಾರೆ.

ಸುಖ ದಾಂಪತ್ಯಕ್ಕೆ ಕಬೀರರ ಸೂತ್ರ, ನೀವೂ ಅಪ್ಲೈ ಮಾಡಿ ಕೊಂಡ್ರೆ ಬದುಕು ಸುಸೂತ್ರ

ವೀರ್ಯದ ಪ್ರಮಾಣ ಕಡಿಮೆಯಿದ್ದರೆ, ಅವರ ಸಂಗಾತಿ ಪ್ರೆಗ್ನೆಂಟ್ ಆಗುವ ಸಂಭವವೂ ಕಡಿಮೆ ಎಂಬುದು ನಮಗೆಲ್ಲ ತಿಳಿದಿರುವುದೇ. ಏಕೆಂದರೆ, ವೀರ್ಯ ಪ್ರಮಾಣವು ಪುರುಷರ ಫಲವಂತಿಕೆಯ ಸೂಚಕವೂ ಹೌದು. ಆರೋಗ್ಯವಂತ ವ್ಯಕ್ತಿಯಲ್ಲಿ ಮಿಲೀಲೀಟರ್‌ಗೆ 15 ಮಿಲಿಯನ್ ವೀರ್ಯಾಣು ಇರಬೇಕು. ಆದರೆ, ತಂದೆ ಸ್ಮೋಕ್ ಮಾಡುತ್ತಿದ್ದರೆ, ಅಂಥ ಮಕ್ಕಳಲ್ಲಿ ಈ ಪ್ರಮಾಣ ಮಿಲಿಮೀಟರ್‌ಗೆ 7 ಮಿಲಿಯನ್‌ಗೆ ಕುಸಿದೀತು. ಅಂದರೆ ತಂದೆಯ ಚಟ ಮೊಮ್ಮಕ್ಕಳನ್ನು ಹೊಂದುವ ಅವರ ಆಸೆಗೆ ತಣ್ಣೀರೆರಚುತ್ತದೆ ಎಂದಾಯಿತು. 

ಆದರೆ, ಇದರ ಹಿಂದಿರುವ ವಿಜ್ಞಾನವನ್ನು ಕಂಡುಹಿಡಿಯುವಲ್ಲಿ ಈ ಸಂಶೋಧನೆ ಸಫಲವಾಗಿಲ್ಲ. ಇಂಥ ಹತ್ತು ಹಲವು ಅಧ್ಯಯನಗಳು ಸ್ಮೋಕ್ ಮಾಡುವ ತಂದೆಯಿಂದ ಮಕ್ಕಳು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದನ್ನು ಕಂಡುಕೊಂಡಿವೆ.

ಸ್ಮೋಕಿಂಗ್‌ನಿಂದ ವೀರ್ಯದಲ್ಲಿರುವ ಡಿಎನ್ಎಗೆ ಹಾನಿಯಾಗುತ್ತದೆ ಹಾಗೂ ಸ್ಮೋಕರ್‌ನ ಡಿಎನ್ಎ ಎಳೆಯಲ್ಲಿ ಹೆಚ್ಚು ಬಿರಿತಗಳಿರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ಮೋಕರ್ ತಂದೆ ಹೊಂದಿರುವ ಮಕ್ಕಳ ಜೀನ್ಸ್‌ನಲ್ಲಿ, ಸ್ಮೋಕಿಂಗ್ ಅಭ್ಯಾಸವಿಲ್ಲದ ತಂದೆಯ ಮಕ್ಕಳ ಜೀನ್ಸ್‌ನಲ್ಲಿರುವುದಕ್ಕಿಂತಾ ನಾಲ್ಕು ಪಟ್ಟು ಹೆಚ್ಚು ಮಾರ್ಪಾಡು ಕಂಡುಬಂದಿದೆ. ಇದು ಸಮಸ್ಯಾಪೂರ್ಣ ವಂಶವಾಹಿಯಾಗಿದೆ. 

ಇನ್ನು ತಂದೆಯಿಂದ ಶಾಪಗ್ರಸ್ತನಾದ ಆ ಪುರುಷನಿಗೂ ಸಿಗರೇಟ್ ಚಟವಿದ್ದಲ್ಲಿ ಕೇಳುವುದೇ ಬೇಡ. ಏಕೆಂದರೆ, ಸಿಗರೇಟ್ ಸೇವನೆ ನೇರವಾಗಿಯೂ ಆತನ ವೀರ್ಯದ ಪ್ರಮಾಣ ಕುಗ್ಗಿಸಿ, ಅವುಗಳ ಕ್ಷಮತೆ ತಗ್ಗಿಸುತ್ತದೆ. ಜೊತೆಗೆ, ಮುಂದಿನ ಸಂತತಿಯಲ್ಲಿ ಮತ್ತಷ್ಟು ಅನುವಂಶಿಕ ಬದಲಾವಣೆಗಳಾಗುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ

Follow Us:
Download App:
  • android
  • ios