ಒಂದೇ ಸಮಯದಲ್ಲಿ ಇಬ್ಬರು ಗೆಳತಿಯರ ಜೊತೆ ಡೇಟಿಂಗ್ ಮಾಡಿದ್ದಾನೆ. ಇಬ್ಬರಿಗಾಗಿ ಒಟ್ಟು 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಒಂದು ದುಬಾರಿ ಕೋಚ್ ಬ್ಯಾಗ್‌ನಿಂದ ಸಂಬಂಧವೇ ಹಾಳಾಯ್ತು ಎಂದು ಯುವಕ ನೋವು ತೋಡಿಕೊಂಡಿದ್ದಾನೆ.

ಈಗಿನ ಕಾಲದಲ್ಲಿ ಒಬ್ಬರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಳ್ಳುವುದೇ ಬೆಟ್ಟದಷ್ಟು ದೊಡ್ಡ ಸವಾಲಾಗಿ ಪರಿಣಿಸುತ್ತಿದೆ. ಇದರ ನಡುವೆ ಯುವಕನೊಬ್ಬ ಏಕಕಾಲದಲ್ಲಿ ಇಬ್ಬರ ಜೊತೆ ಡೇಟಿಂಗ್ ಶುರು ಮಾಡಿದ್ದಾನೆ. ಇಬ್ಬರೂ ಕೇಳಿದ್ದೆಲ್ಲಾ ಕೊಡಿಸಿದ್ದಾನೆ, ಮೇಕ್ಅಪ್ ಕಿಟ್, ಪಾರ್ಲರ್, ಐಸ್‌ಕ್ರೀಂ, ಟ್ರಿಪ್ ಹೀಗೆ ಗರ್ಲ್‌ಫ್ರೆಂಡ್ಸ್ ಜೊತೆ ಸುತ್ತಾಟಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಬರ್ತ್‌ಡೇ ಸೇರಿದಂತೆ ಸ್ಪೆಷಲ್ ದಿನಗಳಲ್ಲಿ ಖರ್ಚು ಮಾಡಿದ ಹಣ ತುಸು ಹೇಚ್ಚೆ ಇದೆ. ಆದರೆ ಆಂದು ಕೋಚ್ ಬ್ರ್ಯಾಂಡ್‌ನ ಬ್ಯಾಗ್‌ನಿಂದ ರಿಲೇಶನ್‌ಶಿಪ್ ಮುರಿದು ಬಿತ್ತು. ಬೀದಿ ಜಗಳವಾಗಿ ರಂಪಾಟವೇ ನಡೆದು ಹೋಗಿದೆ. ಇದೀಗ ಯುವಕ ತನ್ನ ನೋವನ್ನು ತೋಡಿಕೊಂಡಿದ್ದಾನೆ.

6 ಲಕ್ಷ ರೂಪಾಯಿ ವ್ಯರ್ಥ

ರೆಡ್ಡಿಟ್ ಮೂಲಕ ಯುವಕ ತನ್ನ ನೋವು ತೋಡಿಕೊಂಡಿದ್ದಾನೆ. ಇಬ್ಬರ ಜೊತೆ ಏಕಾಕಲದಲ್ಲಿ ಡೇಟಿಂಗ್ ಮಾಡಿದ್ದೆ. ತಾನು ಎರಡು ದೋಣಿಯಲ್ಲಿ ಕಾಲಿಟ್ಟಿದ್ದೇನೆ ಅನ್ನೋದು ಗೊತ್ತಿದ್ದೇ ರಿಲೇಶನ್‌‌ಶಿಪ್ ಮುಂದುವರಿಸಿದ್ದಾನೆ. ಪರಿಣಾಮ 6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಜೊತೆಗೆ ತನ್ನ ರಿಲೇಶನ್‌ಶಿಪ್‌ನಿಂದ ಹೊರಬಂದು ಇಬ್ಬರು ಬಿಟ್ಟು ಹೋದರು ಎಂದು ಯುವಕ ಹೇಳಿಕೊಂಡಿದ್ದಾನೆ.

ಆರೋಶ್ ಅನ್ನೋ ಯುವಕ ರೆಡ್ಡಿಟ್‌ನಲ್ಲಿ ಹೇಳಿರುವಂತೆ ತಾನು ಇಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವುದು ಗೊತ್ತಿದ್ದೆ ಮುಂದುವರಿಸಿದ್ದೆ. ಆದರೆ ಇಬ್ಬರನ್ನು ರಾಣಿಯರ ರೀತಿ ನೋಡಿಕೊಂಡಿದ್ದೆ. ಅವರು ಕೇಳಿದ್ದು ಕೊಡಿಸಿದ್ದೆ, ಕೇಳಿದ ಕಡೆ ತಿರುಗಾಡಿಸಿದ್ದೆ. ನನ್ನ ಕಾಲೇಜಿನ ಸ್ನೇಹಿತರಿಗೆ ನಾನು ಇಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತಿತ್ತು. ಹೀಗಾಗಿ ನಾನಾಗಿ ಇಬ್ಬರಿಗೆ ಹೇಳಲು ಹೋಗಿರಲಿಲ್ಲ. ಇಡೀ ಕಾಲೇಜಿನ ಆಪ್ತ ವಲಯಕ್ಕೆ ಗೊತ್ತಿರಬೇಕಾದರೆ, ರಿಲೇಶನ್‌ಶಿಪ್‌ನಲ್ಲಿ ಇಬ್ಬರಿಗೂ ಏಕಾಕಾಲಕ್ಕೇ ಇಬ್ಬರ ಡೇಟಿಂಗ್ ತಿಳಿದಿರುಬಹುದು ಎಂದುಕೊಂಡು ನಾನು ಆರಾಮಾಗಿ ಇದ್ದೆ. ಆದರೆ ಇಬ್ಬರನ್ನು ಬೇರೇ ಬೇರೆ ಸಮಯದಲ್ಲಿ ಭೇಟಿಯಾಗುತ್ತಿದೆ. ಇಬ್ಬರ ಜೊತೆ ಬೇರೆ ಬೇರೆ ಸಮಯದಲ್ಲಿ ಸುತ್ತಾಡುತ್ತಿದ್ದೆ ಎಂದು ಯುವಕ ಹೇಳಿಕೊಂಡಿದ್ದಾನೆ. ಇತ್ತ ನಾನು ಡೇಟ್ ಮಾಡುತ್ತಿದ್ದ ಇಬ್ಬರು ಯುವತಿಯರು ಆತ್ಮೀಯರಾಗಿದ್ದರು. ಹಲವು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಇಬ್ಬರು ಈ ವಿಚಾರ ಮಾತನಾಡಿಕೊಂಡಿರುವ ಸಾಧ್ಯತೆ ಇದೆ ಎಂದು ನಾನು ಏನು ಹೇಳಲು ಹೋಗಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ.

ಕೋಚ್ ಬ್ಯಾಗ್‌ನಿಂದ ಬದಲಾದ ಪರಿಸ್ಥಿತಿ

ಇಬ್ಬರು ಗರ್ಲ್‌ಫ್ರೆಂಡ್ಸ್ ಪೈಕಿ ಆಯೇಷಾ ಅನ್ನೋ ಯುವತಿಯ ಹುಟ್ಟುಹಬ್ಬ ಆಗಮಿಸಿತ್ತು. ಈ ವೇಳೆ ಐಷಾರಾಮಿ ಬ್ರ್ಯಾಂಡ್ ಕೋಚ್‌ನ ಬ್ಯಾಗ್ ಹಾಗೂ ರೋಡ್ ಬ್ರ್ಯಾಂಡ್‌ನ ಲಿಪ್‌ಬಾಮ್ ಗಿಫ್ಟ್ ಆಗಿ ಕೊಡಿಸಿದ್ದೆ. ನಾನು ಕೊಟ್ಟ ಉಡುಗೊರೆಯನ್ನು ಆಯೇಷಾ ಕಾಲೇಜಿಗೆ ತಂದಿದ್ದಾಳೆ. ಬಳಿಕ ನನ್ನ ಮತ್ತೊಬ್ಬ ಗರ್ಲ್‌ಫ್ರೆಂಡ್ ಶ್ರೇಯಾ ಬಳಿ ಈ ಗಿಫ್ಟ್ ಆರೋಶ್ ಕೊಟ್ಟಿದ್ದಾನೆ. ಆತ ಗ್ರೀನ್ ಫ್ಲ್ಯಾಗ್ ಎಂದಿದ್ದಾಳೆ.

ಆಯೇಷಾ ಹಾಗೂ ಶ್ರೇಯಾ ನಡುವೆ ಜಗಳ

ಗಿಫ್ಟ್, ಗ್ರೀನ್ ಫ್ಲ್ಯಾಗ್ ಮಾತುಗಳು ಹೇಳುತ್ತಿದ್ದಂತೆ ಶ್ರೇಯಾ ಕೋಪಗೊಂಡಿದ್ದಾಳೆ. ಕಾಲೇಜಿನ ಕ್ಯಾಂಟೀನ್‌ನಲ್ಲಿ ಜಗಳ ಶುರುವಾಗಿದೆ. ಅಲ್ಲೇ ನಾನು ಆಯೇಷಾಗೆ ಕೊಟ್ಟ ಬ್ಯಾಗ್‌ನ್ನು ಶ್ರೇಯಾ ಹರಿದು ಹಾಕಿದ್ದಾಳೆ. ಇತ್ತ ಲಿಪ್‌ಬಾಮ್ ತೆಗೆದು ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನುತ್ತಿದ್ದ ಹುಡುಗನ ತಟ್ಟೆ ಮೇಲೆ ಹಾಕಿದ್ದಾಳೆ. ಕೆಲ ಹೊತ್ತು ಜಗಳವಾಡಿದ್ದಾರೆ. ಬಳಿಕ ಇವರಿಬ್ಬರು ನನ್ನ ಕಾರಿನ ಮೇಲೆ ಕೆಟ್ಟ ಪದಗಳಿಂದ ನನಗೆ ಬೈದಿದ್ದಾರೆ. ಇಬ್ಬರು ನನ್ನ ಮೇಲೆ ಹರಿಹಾಯ್ದು ನಡು ದಾರಿಯಲ್ಲಿ ಕೈಬಿಟ್ಟು ಹೋದರು ಎಂದು ಯುವಕ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾನೆ.

ಈ ಘಟನೆ ರೆಡ್ಡಿಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಇದು ಕಟ್ಟು ಕತೆ ಎಂದಿದ್ದಾರೆ. ಮತ್ತೆ ಕೆಲವರು 6 ಲಕ್ಷ ರೂಪಾಯಿ ಖರ್ಚು, ಒಂದು ಬ್ಯಾಗ್‌ನಿಂದ ರಿಲೇಶನ್‌ಶಿಪ್ ಹಾಳಾಯ್ತು ಅನ್ನೋದು ವೈರಲ್ ಆಗಲು ಕಟ್ಟಿದ ಕತೆ ಎಂದು ಹೇಳಿದ್ದಾರೆ. ಪರ ವಿರೋಧಗಳು, ರಿಲೇಶನ್‌ಶಿಪ್ ಟಿಪ್ಸ್ ಸೇರಿದಂತೆ ಹಲವು ಸಲಹೆಗಳು ಬಂದಿದೆ.