ಕರ್ನಾಟಕದ ಹೆಮ್ಮೆ ‘ಉತ್ಸವ ರಾಕ್ ಗಾರ್ಡನ್’!

ತನ್ನದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಉತ್ಸವ ರಾಕ್ ಗಾರ್ಡನ್‌ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದು. ಇದು ಹಾವೇರಿಜಿಲ್ಲೆ ಶಿಗ್ಗಾಂವ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿದ್ದು ಎಂಟು ವಿಶ್ವದಾಖಲೆಗಳಲ್ಲಿ ಹೆಸರಿಸಲ್ಪಟ್ಟು ನಾಡಿನ ಹೆಮ್ಮೆ ಎನಿಸಿಕೊಂಡಿದೆ.

 

Specialty of Utsav rock Garden Shiggain Gotagodi

ಬನ್ನಿ ಇದರ ಪರಿಚಯ ಮಾಡಿಕೊಳ್ಳೋಣ. ಬೃಹತ್ ಹಾವಿನ ಹುತ್ತದ ಮಾದರಿಯಲ್ಲಿ ಮುಂಭಾಗದ ಗೋಡೆ ಇದೆ. ಇದರ ಮೇಲೆ ಮಿಂಚುತ್ತಿರುವ ಪುಟಾಣಿಗಳ ಗ್ಲಾಸ್ ಶಿಲ್ಪಗಳಿವೆ. ಚಕ್ಕಡಿಯ ಗಾಲಿಗಳು ಗಾರ್ಡನ್‌ನ ಪ್ರವೇಶದ್ವಾರ.

ಒಳ ಪ್ರವೇಶಿಸುತ್ತಿದ್ದಂತೆ ಕನ್ನಡಿಗರ ಕಣ್ಮಣಿ ದಿ.ರಾಜಕುಮಾರ್ ಕೊಳವೊಂದರಲ್ಲಿ ತನ್ನ ಆರಾಧ್ಯದೈವ ಶಿವನಿಗೆ ಕಣ್ಣು ನೀಡುವ ಬೇಡರ ಕಣ್ಣಪ್ಪನ ರೂಪದಲ್ಲಿ ಕಾಣಸಿಗುತ್ತಾರೆ.ಕೊಳದ ಸುತ್ತಲು ಇವರ ಅಭಿನಯದ ಸಾಮಾಜಿಕ ಹಾಗೂ ಭಕ್ತಿ ಪ್ರದಾನ ಚಿತ್ರಗಳ ಶಿಲ್ಪಗಳಿವೆ. ಇದಕ್ಕೆ ಡಾ.ರಾಜ್‌ಕುಮಾರ್ ಸರ್ಕಲ್‌ಎಂದು ಹೆಸರಿಡಲಾಗಿದೆ.

ರಾಜಣ್ಣನನ್ನು ಕಣ್ಣು ತುಂಬಿಕೊಂಡು ಮುಂದೆ ಸಾಗಿದಾಗ ಕರ್ನಾಟಕದ ಮೂವರು ಮಹಾನ ಕಲಾವಿದರಾದ ಡಾ.ಎಂ.ವಿ.ಮಿಣಜಗಿ, ಡಿ.ವಿ.ಹಾಲಬಾವಿ ಹಾಗೂ ಟಿ.ಪಿ.ಅಕ್ಕಿಅವರ ಸ್ಮರಣಾರ್ಥ ನಿರ್ಮಿಸಿದ ಬೃಹತ್‌ಆಲದ ಮರ ಇದೆ. ತುಸು ಮುಂದಕ್ಕೆ ಸಾಗಿದರೆ ಕೆಟ್ಟದ್ದನ್ನು ನೋಡಬೇಡ, ಮಾತಾಡಬೇಡ, ಕೇಳಬೇಡ ಎಂದು ಬಾಪುಜಿ ಸಂದೇಶ ಸಾರುವ ಮಕ್ಕಳ ಕಾರಂಜಿ ಇದೆ. ಇಲ್ಲಿ ನಮ್ಮ ಬಾಲ್ಯಾವಸ್ಥೆಯ ಸವಿ ನೆನಪುಗಳು ಹಸಿರಾಗುತ್ತವೆ. ಇದು ಮಕ್ಕಳ ಮುಗ್ಧಲೋಕ್ಕೆ
ಹಿಡಿದ ಕೈಗನ್ನಡಿಯಾಗಿದೆ.

ಶಿವನ ದರ್ಶನಕ್ಕೆ ದಾರಿ ಮಾಡಿ ಕೊಡೋ ಸಮುದ್ರದಲೆ...

ನವ್ಯಕಲಾ ಪ್ರದರ್ಶನಾಲಯ, ಮದುವೆ ಪ್ರದರ್ಶನಾಲಯಗಳು ಪ್ರವಾಸಿಗರು ಹೌಹಾರುವಂತೆ ಮಾಡುತ್ತವೆ. ಕಲಾವಿದರ ಕೈ ಚಳಕಕ್ಕೆ ಶರಣುಎನ್ನುತ್ತಾ ಮುಂದೆ ಸಾಗುತ್ತಾರೆ ಪ್ರವಾಸಿಗರು.

ಮದುವೆ ಪ್ರದರ್ಶನಾಲಯದಲ್ಲಿ ಇಸ್ಲಾಂ, ಕ್ರೈಸ್ತ, ಶೈವ, ವೈದಿಕ, ಜೈನ ಹೀಗೆ ಮುಂತಾದ ಧರ್ಮಗಳ ರೂಢಿಗತ ಮದುವೆ ಸಂಪ್ರದಾಯಗಳನ್ನು ಬಿಂಬಿಸಲಾಗಿದ್ದು ನೋಡುಗರ ಮನಸೂರೆಗೊಳ್ಳುತ್ತವೆ. 

ಉತ್ತರ ಕರ್ನಾಟಕದ ಹಿಂದಿನ ಗ್ರಾಮ ಸಾಮ್ರಾಜ್ಯಎಲ್ಲರನ್ನುಆಕರ್ಷಿಸುತ್ತದೆ. ಇಲ್ಲಿ ಕೆಲಸದಲ್ಲಿ ತೊಡಗಿದ ಹೆಂಗಸರು, ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಾಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ. ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ. 

ಸಾಂಪ್ರದಾಯಿಕ ಕೃಷಿ ಪದ್ಧತಿಯ ಹಂತಗಳು, ಹೈನುಗಾರಿಕೆ, ಆಡು, ಕುರಿ ಸಾಕಣೆ, ಬುಡಕಟ್ಟು ಜನಾಂಗದ ಬದುಕು, ಸಾಕು ಪ್ರಾಣಿ, ಕಾಡು ಪ್ರಾಣಿಗಳು, ವಿವಿಧ ತಳಿಯ ಆಕಳು ಎಮ್ಮೆಯ ತಳಿಗಳು, ಜನಪದರ ಆಟ,ಸಾರಿಗೆ ವ್ಯವಸ್ಥೆ ಹೀಗೆ ಇನ್ನು ಹಲವಾರು ಸಂಗತಿಗಳನ್ನು ಶಿಲ್ಪಗಳ ಮೂಲಕ ಅವುಗಳೊಂದಿಗೆ ಸುವ್ಯವಸ್ಥಿತ ವಾಗಿ ಸಮ್ಮಿಲನಗೊಂಡ ನಿಸರ್ಗದ ಮೂಲಕ ಕಣ್ಣು ತುಂಬಿಕೊಳ್ಳಬೇಕಾದರೆ ‘ಉತ್ಸವ ರಾಕ್‌ಗಾರ್ಡನ್’ಗೆ ಒಮ್ಮೆ ಭೇಟಿ ನೀಡಲೇಬೇಕು.

ಪ್ರವಾಸೋದ್ಯಮ ಸೃಸ್ಟಿಸಲಿ ಮೈಲುಗಲ್ಲು!

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ‘ಉತ್ಸವರಾಕ್ ಗಾರ್ಡನ್’ ಹೆಸರಿಸಲ್ಪಟ್ಟಿದೆ. ಇದು ವೈಶಿಷ್ಟತೆಗಳಿಂದ ಕೂಡಿದ ಪ್ರವಾಸಿ ತಾಣವಲ್ಲದೆ ಶೈಕ್ಷಣಿಕ, ಸಾಂಸ್ಕೃತಿಕಕೇಂದ್ರವೂ ಹೌದು. ಮಕ್ಕಳು, ಸಾಮಾನ್ಯರು, ವಿದ್ಯಾವಂತರು, ಪ್ರಜ್ಞಾವಂತರೆಲ್ಲರನ್ನು ಸಮಾನವಾಗಿ ರಂಜಿಸುವ ಅಪರೂಪದ ಸ್ಥಳ. ಸಮಾಜದ ಎಲ್ಲ ಸಮುದಾಯದ ಜನ ಒಂದೆಡೆ ಸೇರಿ ಖುಷಿಪಡುವ ಭಾವೈಕ್ಯತಾ ತಾಣ.
ಎಂಟು ವಿಶ್ವದಾಖಲೆಗಳು: ಲಿಮ್ಕಾ ಬುಕ್ ಆಫ್‌ರಿಕಾರ್ಡ್ಸ್, ಇಂಡಿಯಾ ಬುಕ್ ಆಫ್‌ರಿಕಾಡ್ಸ್‌ರ್, ರೆಕಾರ್ಡ್ ಸೆಟ್ಟರ್ (ಅಮೆರಿಕಾ), ರೆಕಾರ್ಡ ಹೋಲ್ಡರ್ಸ್‌ರಿಪಬ್ಲಿಕ್ (ಲಂಡನ್), ಯುನಿಕ್ ವಲ್ಡ್‌ರಿಕಾರ್ಡ್ಸ್, ಅಸಿಸ್ಟ್ ವಲ್ಡ್‌ರಿಕಾರ್ಡ್ಸ್, ಎವರೆಸ್ಟ್ ವಲ್ಡ್‌ರಿಕಾಡ್ಸ್ (ನೇಪಾಳ) ಹಾಗೂ ಅಮೆಜಿಂಗ್ ವರ್ಲ್ಡ್‌ರೆಕಾರ್ಡ್ಸ್.

ಬರುವುದು ಹೇಗೆ ?
ಬೆಂಗಳೂರು-ಮೈಸೂರು ಕಡೆಯಿಂದ ಬರುವವರು ಹರಿಹರ, ಹಾಸನದಿಂದ ಬರುವವರು ಅರಸಿಕೆರೆ, ದಾವಣಗೆರೆ, ಉತ್ತರಕನ್ನಡದಿಂದ ಬರುವವರು ಸಿರ್ಸಿ, ಹಾವೇರಿ, ಬೆಳಗಾವಿ, ಗುಲ್ಬರ್ಗ ಹಾಗೂ ಬೀದರ್ ಕಡೆಯಿಂದ ಬರುವವರು ಹುಬ್ಬಳ್ಳಿ ಮಾರ್ಗವಾಗಿ ಬರಬಹುದು. ಗಾರ್ಡನ್ ರಾಷ್ಟ್ರೀಯ ಹೆದ್ದಾರಿ-೪ ಕ್ಕೆ ಹೊಂದಿಕೊಂಡಿದೆ.

 

Latest Videos
Follow Us:
Download App:
  • android
  • ios